ಶಿವಮೊಗ್ಗ: ಜೋಗಕ್ಕೆ ತೆರಳುತ್ತಿದ್ದ ಪ್ರವಾಸಿಗರ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಾಗರದ ಹಕ್ರೆಕೊಪ್ಪದ ಬಳಿ ನಡೆದಿದೆ.
ವರುಣ್(36) ಮೃತ ವ್ಯಕ್ತಿ. ತುಮಕೂರಿನಿಂದ ಜೋಗಕ್ಕೆ ಪ್ರವಾಸಿಗರ ಕಾರು ತೆರಳುತ್ತಿತ್ತು. ಈ ವೇಳೆ ಹಕ್ರೆಕೊಪ್ಪ ಗ್ರಾಮದ ರಸ್ತೆ ಬಳಿ ಮರಕ್ಕೆ ಕಾರು ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಅಪಘಾತದಲ್ಲಿ ಉಳಿದ ನಾಲ್ವರು ಗಾಯಗೊಂಡಿದ್ದು, ಅವರನ್ನು ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಕುರಿತಂತೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.