ಬಳ್ಳಾರಿ : ಬಡವ- ಬಲ್ಲಿದ ಕುಟುಂಬಗಳಿಗೆ ಸೂಕ್ತ ಆರ್ಥಿಕ ನೆರವು ನೀಡಿ ಬಳಿಕ ಲಾಕ್‌ಡೌನ್ ಮಾಡುವುದು ಸೂಕ್ತ ಎಂದು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ಸದ್ಯ ರಾಜ್ಯವ್ಯಾಪಿ ಕೊರೊನಾ ಕರ್ಫ್ಯೂ ಜಾರಿಯಲ್ಲಿದೆ. ಅದು ಕೂಡ ಸಮರ್ಪಕವಾಗಿ ಜಾರಿಯಾಗಿಲ್ಲ. ಹೀಗಾಗಿ, ಕೊರೊನಾ ಎರಡನೇ ಅಲೆ ತಡೆಯೋಕೆ ಸಾಧ್ಯವಾಗುತ್ತಿಲ್ಲ. ಮಹಾಮಾರಿ ಕೊರೊನಾ ಎರಡನೇ ಅಲೆಯ ಸಂಪೂರ್ಣ ನಿಯಂತ್ರಣಕ್ಕೆ ಲಾಕ್ ಡೌನ್ ಒಂದೇ ಪರಿಹಾರ ಎಂದು ತಜ್ಞರು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ತಿಳಿಸಿದ್ದಾರೆ.
ಸದ್ಯ ಜಾರಿಯಲ್ಲಿರುವ ಕರ್ಫ್ಯೂನಿಂದ ಏನೂ ಪ್ರಯೋಜನೆ ಇಲ್ಲ. ಲಾಕ್‌ಡೌನ್ ಅನಿವಾರ್ಯ ಆಗಿದೆ. ಅದಕ್ಕಿಂತಲೂ ಮುಖ್ಯವಾಗಿ ಬಡವ-ಬಲ್ಲಿದ ಕುಟುಂಬಸ್ಥರಿಗೆ ಆರ್ಥಿಕ ನೆರವು ನೀಡಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಚಿಂತನೆ ನಡೆಸಬೇಕಿದೆ ಎಂದು ಶಾಸಕ ಗಾಲಿ ಸೋಮ ಶೇಖರರೆಡ್ಡಿ ಅಭಿಪ್ರಾಯ ತಿಳಿಸಿದರು.
ಎರಡನೇ ಅಲೆ ನಿಭಾಯಿಸಲು ಲಾಕ್‌ಡೌನ್ ಅನಿವಾರ್ಯ : ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚುತ್ತಿರುವ ಕೊರೊನಾ ಎರಡನೇ ಅಲೆಯನ್ನ ಹಿಮ್ಮೆಟ್ಟಿಸಲು ಲಾಕ್‌ಡೌನ್ ಅನಿವಾರ್ಯ ಆಗಿದೆ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ದಿನಕ್ಕೆ ಅಂದಾಜು 50 ಸಾವಿರಕ್ಕೂ ಅಧಿಕ ಮಂದಿ ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಸಾವಿನ ಪ್ರಮಾಣವೂ ಕೂಡ ಅಷ್ಟೇ ಹೆಚ್ಚಿದೆ. ಹೀಗಾಗಿ, ಲಾಕ್‌ಡೌನ್ ಮಾಡೋದು ಅನಿವಾರ್ಯ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.
ಆರ್ಥಿಕ ನೆರವು ನೀಡಿ ಲಾಕ್‌ಡೌನ್ ಘೋಷಿಸಿದ್ರೆ ಸೂಕ್ತ : ಶಾಸಕ ಸೋಮಶೇಖರ ರೆಡ್ಡಿ - Karnataka lockdown
ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚುತ್ತಿರುವ ಕೊರೊನಾ ಎರಡನೇ ಅಲೆಯನ್ನ ಹಿಮ್ಮೆಟ್ಟಿಸಲು ಲಾಕ್‌ಡೌನ್ ಅನಿವಾರ್ಯ ಆಗಿದೆ..