ಕೊಳ್ಳೇಗಾಲ : ಕೊರೊನಾ ಪಾಸಿಟಿವ್ ವ್ಯಕ್ತಿಗಳಿಗೆ ಸೀಲ್ ಹಾಕಬೇಕೆಂಬ ಜಿಲ್ಲಾಧಿಕಾರಿಗಳ ಆದೇಶವನ್ನು ಜಾರಿಗೊಳಿಸದೆ ನಿರ್ಲಕ್ಷ್ಯ ತೋರಿದ್ದರಿಂದ ಜಿಲ್ಲಾಧಿಕಾರಿ ಎಂ.ಆರ್ ರವಿ ತಾಲೂಕು ಆರೋಗ್ಯಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ಕೊರೊನಾ ನಿರ್ವಹಣಾ ಸಭೆ ಕರೆಯಲಾಗಿತ್ತು.
ಈ ವೇಳೆ ಕೊಳ್ಳೇಗಾಲ ತಾಲೂಕು ಆರೋಗ್ಯ ಇಲಾಖೆ ಕೊರೊನಾ ಪಾಸಿಟಿವ್ ವ್ಯಕ್ತಿಗಳಿಗೆ ಸೀಲ್ ಹಾಕದಿರುವುದು ಬೆಳಕಿಗೆ ಬಂದಿತು. ಹೀಗಾಗಿ, ತಾಲೂಕು ಆರೋಗ್ಯಧಿಕಾರಿಗಳನ್ನು ಜಿಲ್ಲಾಧಿಕಾರಿಗಳು ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ಮಾತನಾಡುತ್ತಾ ಯಳಂದೂರಿನ ಇಒ ಹೋಂ ಐಸೋಲೇಟ್ಗೊಂಡ ಕೊರೊನಾ ರೋಗಿಗಳು ಮೆನೆಯಿಂದ ಹೊರಗೆ ಓಡಾಡುತ್ತಿದ್ದರೆ. ಅವರನ್ನು ನಿಯಂತ್ರಿಸಲು ಆಗುತ್ತಿಲ್ಲ. ಕೊರೊನಾ ಪ್ರಕರಣ ಇದರಿಂದಾಗಿ ಹೆಚ್ಚುತ್ತಿವೆ ಎಂಬ ವಿಚಾರ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅಂತವರು ಸಿಕ್ಕಿಬಿದ್ದರೆ ಕಾನೂನು ಕ್ರಮ ಜರುಗಿಸುವಂತೆ ಪೊಲೀಸರಿಗೆ ಸೂಚಿಸಿದರು.
ಈ ಸಂಬಂಧ ಜಿಲ್ಲಾಧಿಕಾರಿ ಎಂ.ಆರ್ ರವಿ ಕೊರೊನಾ ರೋಗಿಗಳಿಗೆ ಸೀಲ್ ಹಾಕುತ್ತಿದ್ದೀರಾ ಎಂಬ ಪ್ರಶ್ನೆಯನ್ನು ಟಿಹೆಚ್ಒ ಗೋಪಾಲ್‌ಗೆ ಕೇಳಿದರು. ಇದಕ್ಕೆ ಗಲಿಬಿಲಿಯಾದ ಟಿಹೆಚ್ಒ ಮೌನವಹಿಸಿ ತಡ ಬಡಿಸಿದರು. ನಂತರ ಸೀಲ್ ಹಾಕದಿರುವುದು ಮನದಟ್ಟಾಯಿತು.
ಕೋಪಿತಗೊಂಡ ಜಿಲ್ಲಾಧಿಕಾರಿಗಳು ಏಕೆ ಸೀಲ್ ಹಾಕುತ್ತಿಲ್ಲ. ಒಂದು ವಾರದ ಹಿಂದೆಯೇ ರೋಗಿಗಳಿಗೆ ಸೀಲ್ ಹಾಕಬೇಕೆಂಬ ಆದೇಶವನ್ನು ನೀಡಿದ್ದೇನೆ ತಾನೇ? ಸೀಲ್ ತಂದಿದ್ದೀರಾ ನೀವು, ನಿಮಗೆ ಗೊತ್ತಿಲ್ಲವೇ ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಟಿಹೆಚ್ಒನಿಂದ ಸಭೆಯಲ್ಲಿ ಸೀಲ್ ಹಾಕದಿರುವುದು ಸ್ಪಷ್ಟವಾಗಿ ಗೋಚರಿಸಿತು.
ಟ್ರಯೇಜ್ ಮಾಡುವಾಗಲೇ ಕೊರೊನಾ ಪಾಸಿಟಿವ್ ಬಂದ ರೋಗಿಗಳಿಗೆ ಸೀಲ್ ಹಾಕಬೇಕು. ಇದರಿಂದ ಸೋಂಕಿತರನ್ನು ಪತ್ತೆಹಚ್ಚಲು ಸಾಧ್ಯ. ಇನ್ನೂ ಅನಗತ್ಯ ಓಡಾಟಕ್ಕೂ ಕಡಿವಾಣ ಹಾಕಬಹುದಾಗಿದೆ. ಮೊದಲು ಸೀಲ್ ಹಾಕಿ ಎಂದು ಡಿಸಿ ತಿಳಿಸಿದರು.
ನಾಚಿಕೆ ಆಗೋದಿಲ್ವ ನಿಮ್ಗೆ: ಡಿಸಿ ಪ್ರಶ್ನೆಯನ್ನೆ ಪುನರುಚ್ಚರಿಸಿದ ಶಾಸಕ ಎನ್.ಮಹೇಶ್ಗೆ ಟಿಹೆಚ್ಒ ಗೋಪಾಲ್ ಶಾಯಿಯಿಲ್ಲ ವೆಂದು ಉತ್ತರಿಸಿದಕ್ಕೆ ಗರಂ ಆದ ಶಾಸಕ ಏನ್ರಿ ಮಾತಾಡ್ತಿದ್ದೀರಾ ನಾಚಿಗೆ ಆಗೋದಿಲ್ವ ನಿಮ್ಗೆ, ಶಾಯಿ ಇಲ್ಲ ಅನ್ನೋದು ಒಂದು ಉತ್ತರವೇ, ಸೀಲ್ ಹಾಕದಿರಲು ಕಾರಣವೇ ಎಂದು ತರಾಟೆಗೆ ತೆಗೆದುಕೊಂಡರು.