ETV Bharat / state

ಪಾಲಿಕೆ, ಪೊಲೀಸರ ಜಂಟಿ ಕಾರ್ಯಾಚರಣೆ: ಶೇ. 50 ರಷ್ಟು ಹಾಸಿಗೆ ನೀಡದ ಆಸ್ಪತ್ರೆಗಳ ಮೇಲೆ ದಾಳಿ - corona news

‌ಪಾಲಿಕೆಯ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಬ್ರೂಕ್ ಫೀಲ್ಡ್ ಆಸ್ಪತ್ರೆ, ಜೀವಿಕಾ ಆಸ್ಪತ್ರೆ, ಕೊಶೈ ಆಸ್ಪತ್ರೆ ಮೇಲೆ ಜಂಟಿ ಆಯುಕ್ತರಾದ ವೆಂಕಟಾ ಚಲಪತಿ, ಡಿಸಿಪಿ ದೇವರಾಜ್, ಆರೋಗ್ಯಾಧಿಕಾರಿ ಡಾ. ಸುರೇಂದ್ರ ಹಾಗೂ ಅಧಿಕಾರಿಗಳ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಶೇ. 50 ರಷ್ಟು ಹಾಸಿಗೆ ಕೂಡಲೆ ನೀಡಲು ಸೂಚನೆ ನೀಡಿದೆ.

joint operation raid on hospital
joint operation raid on hospital
author img

By

Published : Apr 23, 2021, 8:35 PM IST

Updated : Apr 23, 2021, 8:43 PM IST

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರದ ಆದೇಶದಂತೆ ಶೇ. 50 ರಷ್ಟು ಹಾಸಿಗೆ ನೀಡದ ಆಸ್ಪತ್ರೆಗಳಲ್ಲಿ ಕೂಡಲೆ ಶೇ. 50 ರಷ್ಟು ಹಾಸಿಗೆ ಪಡೆಯಲು ಆಯಾ ವಲಯ ಜಂಟಿ ಆಯುಕ್ತರು ಹಾಗೂ ಡಿಸಿಪಿಗಳ ತಂಡ ರಚಿಸಿದ್ದು, ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ನಿಯಮಾನುಸಾರ ಹಾಸಿಗೆಗಳನ್ನು ವಶ ಪಡೆಯಲು ಪರಿಶೀಲನೆ ನೆಡೆಯುತ್ತದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ‌ಪಾಲಿಕೆಯ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಬ್ರೂಕ್ ಫೀಲ್ಡ್ ಆಸ್ಪತ್ರೆ, ಜೀವಿಕಾ ಆಸ್ಪತ್ರೆ, ಕೊಶೈ ಆಸ್ಪತ್ರೆ ಮೇಲೆ ಜಂಟಿ ಆಯುಕ್ತರಾದ ವೆಂಕಟಾ ಚಲಪತಿ, ಡಿಸಿಪಿ ದೇವರಾಜ್, ಆರೋಗ್ಯಾಧಿಕಾರಿ ಡಾ. ಸುರೇಂದ್ರ ಹಾಗೂ ಅಧಿಕಾರಿಗಳ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಶೇ. 50 ರಷ್ಟು ಹಾಸಿಗೆ ಕೂಡಲೆ ನೀಡಲು ಸೂಚನೆ ನೀಡಿದೆ.

ಜಂಟಿ ಕಾರ್ಯಾಚರಣೆ ನಡೆಸಿರುವ 6 ಆಸ್ಪತ್ರೆಗಳಲ್ಲಿ ಶೇ. 50 ರಷ್ಟು ಹಾಸಿಗೆ ಪಡೆಯಲಾಗಿದೆ. ಮಹದೇವಪುರ ವಲಯದ ವೈಟ್ ಫೀಲ್ಡ್ ನಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಕೂಡ ಜಂಟಿ ಕಾರ್ಯಾಚರಣೆ ನಡೆಸಲಾಯಿತು‌. ಆಸ್ಪತ್ರೆಯಲ್ಲಿ ಒಟ್ಟು 106 ಹಾಸಿಗೆಗಳಿದ್ದು, ಸರ್ಕಾರದ ಆದೇಶದ ಪ್ರಕಾರ 56 ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗಾಗಿ ಮೀಸಲಿಡಬೇಕಾಗಿರುತ್ತದೆ. ಈ ಸಂಬಂಧ ನೋಟೀಸ್ ಜಾರಿ ಮಾಡಿದ್ದರೂ 42 ಹಾಸಿಗೆಗಳನ್ನು ಮಾತ್ರ ಮೀಸಲಿಡಲಾಗಿತ್ತು, ಕೂಡಲೆ ಹೊರ ರೋಗಿಗಳ ವಿಭಾಗ(OPD)ವನ್ನು 2 ಗಂಟೆಗಳ ಕಾಲ ಮುಚ್ಚಿಸಿದ ನಂತರ ಆಸ್ಪತ್ರೆಯು ತಕ್ಷಣವೇ ಸರ್ಕಾರದ ಆದೇಶದಂತೆ ಶೇ. 50 ರಷ್ಟು ಹಾಸಿಗೆಯನ್ನು ನೀಡಿದ್ದು, ಇನ್ನೂ 7 ಹಾಸಿಗೆಗಳನ್ನು ಹೆಚ್ಚಾಗಿ ನೀಡಿದ್ದಾರೆ.

ಜಂಟಿ ಕಾರ್ಯಾಚರಣೆ ನಡೆಸಿರುವ 6 ಆಸ್ಪತ್ರೆಗಳ ಪಟ್ಟಿ:

1. ಜೀವಿಕಾ ಆಸ್ಪತ್ರೆ

2. ಬ್ರೂಕ್ ಫಾಲ್ಡ್ ಆಸ್ಪತ್ರೆ

3. ಕೊಶೈ ಆಸ್ಪತ್ರೆ

4. ಮಣಿಪಾಲ್ ಆಸ್ಪತ್ರೆ (ವೈಟ್ ಫೀಲ್ಡ್)

5. ನಾರ್ತ್ ಸೈಡ್ ಆಸ್ಪತ್ರೆ

6. ಶ್ರೀ ಸಾಯಿ ಆಸ್ಪತ್ರೆ

ಈ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು, ನಿಯಮಾನುಸಾರ ಶೇ. 50 ರಷ್ಟು ಹಾಸಿಗೆಗಳನ್ನು ಪಡೆಯಲಾಗಿದೆ ಎಂದು ಪಾಲಿಕೆ ತಿಳಿಸಿದೆ.

Last Updated : Apr 23, 2021, 8:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.