ETV Bharat / state

ಎ-4 ಸೈಜ್ ಹಾಳೆಯ ಎರಡು ಬದಿ ಮುದ್ರಣ ಕುರಿತು ಅರ್ಜಿ ಸಲ್ಲಿಕೆ: ರಿಜಿಸ್ಟ್ರಾರ್​​​ಗೆ ಹೈಕೋರ್ಟ್ ನೋಟಿಸ್ - Supreme Court

ಸುಪ್ರೀಂಕೋರ್ಟ್ 2020ರ ಮಾರ್ಚ್ 5 ರಂದು ಎ -4 ಅಳತೆಯ ಹಾಳೆಯ ಎರಡೂ ಬದಿಯಲ್ಲಿ ಮುದ್ರಣ ಮಾಡಿ ಬಳಸುವಂತೆ ನ್ಯಾಯಾಲಯಗಳಿಗೆ ಸೂಚಿಸಿ ಸುತ್ತೋಲೆ ಹೊರಡಿಸಿತ್ತು. ಈ ಕುರಿತು ವಿವರಣೆ ಕೇಳಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ನೋಟಿಸ್ ಜಾರಿ ಮಾಡಿದೆ.

High court
High court
author img

By

Published : Oct 10, 2020, 3:17 PM IST

ಬೆಂಗಳೂರು : ಹೈಕೋರ್ಟ್ ಸೇರಿದಂತೆ ರಾಜ್ಯದ ಎಲ್ಲಾ ನ್ಯಾಯಾಲಯ ಮತ್ತು ಕೋರ್ಟ್ ಕಚೇರಿಗಳಲ್ಲಿ ಎ -4 ಸೈಜ್ ಅಳತೆಯ ಹಾಳೆಗಳಲ್ಲಿ ಎರಡು ಬದಿ ಮುದ್ರಣ ಮಾಡಿ ಬಳಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ತನ್ನ ರಿಜಿಸ್ಟ್ರಾರ್ ಜನರಲ್ ಅವರಿಗೆ ನೋಟಿಸ್ ಜಾರಿ ಮಾಡಿದೆ.

ಈ ಕುರಿತು ಕಾನೂನು ವಿದ್ಯಾರ್ಥಿಗಳಾದ ಆಕೃತಿ ಅಗರ್ ವಾಲ್, ಎಂ ಭಾವನಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ, ಅರ್ಜಿ ಸಂಬಂಧ ವಿವರಣೆ ಕೇಳಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ನೋಟಿಸ್ ಜಾರಿ ಮಾಡಿದೆ.

ಅರ್ಜಿಯಲ್ಲಿ, ಸುಪ್ರೀಂಕೋರ್ಟ್ 2020ರ ಮಾರ್ಚ್ 5 ರಂದು ಎ -4 ಅಳತೆಯ ಹಾಳೆಗಳಲ್ಲಿ ಎರಡೂ ಬದಿಯಲ್ಲಿ ಮುದ್ರಣ ಮಾಡಿ ಬಳಸುವಂತೆ ನ್ಯಾಯಾಲಯಗಳಿಗೆ ಸೂಚಿಸಿ ಸುತ್ತೋಲೆ ಹೊರಡಿಸಿತ್ತು. ಆದರೆ, ಇಂದಿಗೂ ಹೈಕೋರ್ಟ್ ಸೇರಿದಂತೆ ರಾಜ್ಯ ನ್ಯಾಯಾಲಯಗಳಲ್ಲಿ ಎ -4 ಅಳತೆಯ ಕಾಗದಗಳಲ್ಲಿ ಒಂದು ಬದಿಯಲ್ಲಿ ಮಾತ್ರ ಮುದ್ರಣ ಮಾಡಿ ಬಳಸಲಾಗುತ್ತಿದೆ. ಆದ್ದರಿಂದ ಎರಡೂ ಬದಿಯಲ್ಲಿ ಮುದ್ರಣ ಮಾಡಿ ಬಳಸಲು ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಅಲ್ಲದೇ, ಬ್ರಿಟಿಷರ ಕಾಲದಲ್ಲಿ ಬಳಕೆಯಲ್ಲಿದ್ದ ಫುಲ್ ಸ್ಕೇಪ್ ಕಾಗದ ಬಳಕೆ ಪದ್ದತಿ ಈಗಲೂ ಮುಂದುವರೆದಿದೆ. ಪರಿಸರ ಸಂರಕ್ಷಣೆ ಮಾಡಲು ಹಾಗೂ ಕಾಗದದ ಬಳಕೆ ಹೆಚ್ಚಾಗದಿರಲು ಎರಡೂ ಬದಿಯಲ್ಲಿ ಮುದ್ರಣ ಮಾಡಿ ಬಳಸುವುದು ಹೆಚ್ಚು ಉಪಯುಕ್ತ. ಆದ್ದರಿಂದ ಮುದ್ರಣಕ್ಕೆ ಕಾಗದದ ಎರಡೂ ಬದಿ ಬಳಕೆ ಮಾಡಲು ನಿರ್ದೇಶಿಸಬೇಕು ಎಂದು ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.