ETV Bharat / state

ಕೋವಿಡ್​ ಲಸಿಕೆ ಅಭಿಯಾನ ಯಶಸ್ವಿ: ತ್ರಿವರ್ಣ ವಿದ್ಯುತ್ ದೀಪಾಲಂಕಾರದಿಂದ ಹಂಪಿ ಸ್ಮಾರಕಗಳಿಗೆ ಮೆರುಗು - hampi latest news

ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ಯಶಸ್ವಿಯಾದ ಹಿನ್ನೆಲೆ ಹಂಪಿ ಸ್ಮಾರಕಗಳಿಗೆ ತ್ರಿವರ್ಣ ಧ್ವಜ ಬಣ್ಣದ ವಿದ್ಯುತ್​ ದೀಪಗಳನ್ನು ಅಳವಡಿಸಲಾಗಿದೆ. ದೀಪಾಲಂಕಾರದಿಂದ ಸ್ಮಾರಕಗಳು ಕಂಗೊಳಿಸುತ್ತಿವೆ.

Hampi Monument looking more beautifully by lightning
ತ್ರಿವರ್ಣ ವಿದ್ಯುತ್ ದೀಪಾಲಂಕಾರದಿಂದ ಹಂಪಿ ಸ್ಮಾರಕಗಳಿಗೆ ಮೆರುಗು
author img

By

Published : Oct 16, 2021, 7:22 AM IST

Updated : Oct 16, 2021, 8:48 AM IST

ಹೊಸಪೇಟೆ(ವಿಜಯನಗರ): ವಿಶ್ವವಿಖ್ಯಾತ ಹಂಪಿಯ ಸ್ಮಾರಕಗಳು ತ್ರಿವರ್ಣ ಧ್ವಜ ಬಣ್ಣಗಳಿಂದ ಕಂಗೊಳಿಸುತ್ತಿವೆ. ವಿಜಯ ವಿಠ್ಠಲ ದೇವಾಲಯ, ಕಲ್ಲಿನ ತೇರು, ಗಜಶಾಲೆ, ಸಂಗೀತ ಮಂಟಪಗಳಿಗೆ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.

ತ್ರಿವರ್ಣ ವಿದ್ಯುತ್ ದೀಪಾಲಂಕಾರದಿಂದ ಹಂಪಿ ಸ್ಮಾರಕಗಳಿಗೆ ಮೆರುಗು

ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಸ್ಮಾರಕಗಳ ಸೌಂದರ್ಯ ಮತ್ತಷ್ಟು ಹೆಚ್ಚಿದಂತಾಗಿದೆ. ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ಯಶಸ್ವಿಯಾದ ಹಿನ್ನೆಲೆ (100 ಕೋಟಿ ವ್ಯಾಕ್ಸಿನ್ ಗುರಿ ತಲುಪಿದ್ದಕ್ಕೆ) ಹಂಪಿ ಸ್ಮಾರಕಗಳಿಗೆ ತ್ರಿವರ್ಣ ಧ್ವಜ ಬಣ್ಣದ ದೀಪಗಳನ್ನು ಅಳವಡಿಸಲಾಗಿದೆ.

ದೇಶದ ಐತಿಹಾಸಿಕ ಪ್ರವಾಸಿ ತಾಣಗಳಲ್ಲಿ ತ್ರಿವರ್ಣ ಧ್ವಜದ ದೀಪಾಲಂಕಾರದ ವ್ಯವಸ್ಥೆಯನ್ನು ಭಾರತೀಯ ಪುರಾತತ್ವ ಇಲಾಖೆ ಮಾಡಿದೆ.

ಇದನ್ನೂ ಓದಿ: ನವರಾತ್ರಿ ಸಂಭ್ರಮ: ದೇವಿ ಅಲಂಕಾರಗಳಲ್ಲಿ ಮಿಂದೆದ್ದ ಉಡುಪಿಯ ಕೃಷ್ಣ

Last Updated : Oct 16, 2021, 8:48 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.