ದಾವಣಗೆರೆ: ಜಿಲ್ಲೆಯಲ್ಲಿ ಮಾಸ್ಕ್ ಧರಿಸುವ ವಿಚಾರವಾಗಿ ಪೊಲೀಸರು ಮಾಜಿ ಸೈನಿಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮಾಜಿ ಯೋಧ ಬಿ. ಎಸ್. ವೀರಪ್ಪ ಎಂಬುವರು ಮೇಲೆ ದಾವಣಗೆರೆ ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್ ನಿಂಗನಗೌಡ ನೆಗಳೂರು ಹಾಗು ನಾಲ್ಕು ಜನ ಕಾನ್ಸ್ಟೇಬಲ್ ಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಖದ್ದು ಆರೋಪ ಮಾಡಿದ್ದಾರೆ.
ರಸೀದಿ ಕೇಳಿದ್ದಕ್ಕೆ ವೀರಪ್ಪ ನವರ ಮೇಲೆ ಪೊಲೀಸರು ಹಲ್ಲೆ
ಮಾಸ್ಕ್ ಹಾಕಿಲ್ಲ ಎಂದು ಪೈನ್ ಹಾಕಿದ ಬಳಿಕ ನಂತರ ಮಾತಿಗೆ ಮಾತು ಬೆಳೆದು ರಶೀದಿ ಕೇಳಿದ್ದಕ್ಕೆ ಹಲ್ಲೆ ನಡೆಸಲಾಗಿದೆಯಂತೆ. ದಾವಣಗೆರೆ ತಾಲೂಕಿನ ಆನಗೋಡು ಬಳಿ ಕಳೆದ 26 ನೇ ತಾರೀಖು ನಡೆದ ಘಟನೆ ಇದಾಗಿದ್ದು, ಪೊಲೀಸರು ಹಲ್ಲೆ ನಡೆಸಿದ ಬೆನ್ನಲ್ಲೇ ಮಾಜಿ ಸೈನಿಕ ವೀರಪ್ಪ ಅವರ ಭುಜ ಹಾಗೂ ಕಾಲಿನ ಪಾದದ ಮೂಳೆ ಮುರಿದು ಹೋಗಿವೆ. ದಂಡ ಕಟ್ಟಿದ್ದಕ್ಕೆ ರಸೀದಿ ಕೇಳಿದ್ದಕ್ಕೆ ವೀರಪ್ಪ ನವರ ಮೇಲೆ ಪೊಲೀಸರು ಹಲ್ಲೆ ನಡೆಸಿ ನಂತರ ರಸೀದಿ ಕೊಟ್ಟಿದ್ದಾರಂತೆ.