ETV Bharat / state

ವ್ಯಕ್ತಿಯ ಬರ್ಬರ ಹತ್ಯೆ: ಹಳೇ ದ್ವೇಷದ ಶಂಕೆ - ಹಾಸನದಲ್ಲಿ ಹಳೆ ದ್ವೇಷದ ಹಿನ್ನೆಲೆ ವ್ಯಕ್ತಿಯ ಬರ್ಬರ ಕೊಲೆ

ಹಳೆ ದ್ವೇಷದ ಹಿನ್ನೆಲೆ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದ ಬಾಗೂರು ಸರ್ಕಲ್‌ನಲ್ಲಿ ಸಂಭವಿಸಿದೆ.

ವ್ಯಕ್ತಿಯ ಬರ್ಬರ ಕೊಲೆ
author img

By

Published : Oct 30, 2019, 5:52 AM IST

ಹಾಸನ : ಹಳೆ ದ್ವೇಷದ ಹಿನ್ನೆಲೆ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದ ಬಾಗೂರು ಸರ್ಕಲ್‌ನಲ್ಲಿ ಸಂಭವಿಸಿದೆ.

ಚನ್ನರಾಯಪಟ್ಟಣದ ಎ.ಡಿ.ಕಾಲೋನಿ ನಿವಾಸಿಯಾಗಿರೋ ಅಭಿಷೇಕ್ (25) ಕೊಲೆಯಾದವನು. ಕಳೆದ ಆರು ತಿಂಗಳ ಹಿಂದೆ ನಾಗ ಸಮುದ್ರದ ಗಾರೆ ಕುಮಾರಸ್ವಾಮಿ ಎಂಬುವವರನ್ನು ಕೊಲೆಗೈದು ಅಭಿಷೇಕ್ ಜೈಲು ಸೇರಿದ್ದ. ಜೂನ್ 17 ಕ್ಕೆ ಅಭಿಷೇಕ ಜೈಲಿನಿಂದ ಬಿಡುಗಡೆಯಾಗಿದ್ದ.

ವ್ಯಕ್ತಿಯ ಬರ್ಬರ ಕೊಲೆ

ಸದ್ಯ ಅಭಿಷೇಕ ಕೊಲೆಯ ಸುತ್ತ ಅನುಮಾನದ ಹುತ್ತವೇ ಹುಟ್ಟುಕೊಡಿದೆ. ಹಳೆ ದ್ವೇಷದ ಹಿನ್ನೆಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿರಬಹುದು ಎಂಬವ ಶಂಕೆ ಒಂದೆಡೆಯಾದರೆ, ಇನ್ನೊಂದೆಡೆ ಕಳೆದ ಭಾನುವಾರ ಹೊಳಗೆರೆಯಮ್ಮನ ಜಾತ್ರೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಹತ್ಯೆ ಮಾಡಿರಬಹುದೆಂದು ಎಂಬ ಅನುಮಾನ ವ್ಯಕ್ತವಾಗಿದೆ.

ಸ್ನೇಹಿತ ದೀಪು ಎಂಬುವವನ ಜತೆ ಬೈಕ್‌ನಲ್ಲಿ ಹೋಗುವಾಗ ಚಾಕುವಿನಿಂದ ಚುಚ್ಚಿ ಕೊಲೆಗೆ ಯತ್ನಿಸಿದ್ದರು. ಈ ವೇಳೆ ತೀವ್ರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಭಿಷೇಕನನ್ನು ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕರೆತರುವ ವೇಳೆ ಮಾರ್ಗ ಮಧ್ಯೆ ಉದಯಪುರ ಗೇಟ್ ಬಳಿ ಅಭಿಷೇಕ ಸಾವನ್ನಪ್ಪಿದ್ದಾನೆ.

ಈ ಕುರಿತು ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎರಡು ತಂಡಗಳನ್ನು ರಚಿಸಿ ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Intro:ಹಾಸನ : ಹಳೆ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಬರ್ಬರ ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಟೌನ್ ಬಾಗೂರು ಸರ್ಕಲ್‌ನ ಅರುಣ್ ಐಸ್ಕ್ರೀಂ ಅಂಗಡಿಯ ಎದುರು ಸಂಭವಿಸಿದ್ದು , ಘಟನೆ ಬಳಿಕ‌ ಆರೋಪಿಗಳು ಪರಾರಿಯಾಗಿದ್ದಾರೆ.

ಹೌದು...., ಚನ್ನರಾಯಪಟ್ಟಣ ಟೌನ್ ಎ.ಡಿ.ಕಾಲೋನಿ ನಿವಾಸಿಯಾಗಿರೋ ಅಭಿಷೇಕ್ (25) ಕೊಲೆಯಾದವನು. ಕಳೆದ ಆರು ತಿಂಗಳ ಹಿಂದೆ ನಾಗ ಸಮುದ್ರದ ಗಾರೆ ಕುಮಾರಸ್ವಾಮಿ ಎಂಬವನ ಹೊಡೆದು ಕೊಲೆ ಮಾಡಿ, ಅಭಿಷೇಕ್ ಜೈಲು ಸೇರಿದ್ದು, ಜೂನ್ 17 ಕ್ಕೆ ಜೈಲಿನಿಂದ ಬಂದ ಅಭಿಷೇಕ ನನ್ನ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿರಬಹುದು ಎನುವ ಶಂಕೆ ಒಂದು ಕಡೆಯಾದರೆ ಕಳೆದ ಭಾನುವಾರ ಹೊಳಗೆರೆಯಮ್ಮನ ಜಾತ್ರೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಹತ್ಯೆ ಮಾಡಿರಬಹುದೆಂದು ಎಂಬ ಅನುಮಾನವೂ ಕೂಡಾ ವ್ಯಕ್ತವಾಗುತ್ತಿದೆ.

ಮಂಗಳವಾರ ಬೆಳಗ್ಗೆ ಸ್ನೇಹಿತ ದೀಪು ಎಂಬುವವನ ಜತೆ ಬೈಕ್‌ನಲ್ಲಿ ಹೋಗುವಾಗ ಚಾಕುವಿನಿಂದ ಚುಚ್ಚಿ ಕೊಲೆ ಮಾಡಲು ಪ್ರಯತ್ನ ಪಟ್ಟಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಈತನನ್ನು ಆಂಬುಲೆನ್ಸ್ ನಲ್ಲಿ ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕರೆತರುವ ಮಾರ್ಗಮಧ್ಯೆ ಉದಯಪುರ ಗೇಟ್ ಬಳಿ ಸಾವಿಗಿಡಾಗಿದ್ದಾನೆ.

ಇನ್ನು ಈಗಾಗಲೇ ಈ ಸಂಬಂಧ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ದುಷ್ಕರ್ಮಿಗಳ ಎಡಮುರಿ ಕಟ್ಟಲು ವಿಶೇಷ ಎರಡು ತಂಡಗಳನ್ನು ರಚನೆಮಾಡಿ ಸ್ಥಳ ಪರಿಶೀಲನೆಯ ವೇಳೆ ಅಂಗಡಿಗೆ ಮುಂಭಾಗದಲ್ಲಿರುವ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಬೈಟ್ 1 : ರಾಮ್ ನಿವಾಸ್ ಸಪೆಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹಾಸನ.

ಬೈಟ್ 2 : ಧರ್ಮೇಶ್, ಕೊಲೆಯಾದ ವ್ಯಕ್ತಿಯ ಸ್ನೇಹಿತ.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.

Body:0Conclusion:0
ETV Bharat Logo

Copyright © 2025 Ushodaya Enterprises Pvt. Ltd., All Rights Reserved.