ಬಾಗಲಕೋಟೆ : ಸಿಡಿಲು ಬಡಿದು ಸಾವನ್ನಪ್ಪಿದ ಜಿಲ್ಲೆಯ ರೈತರ ಮನೆಗೆ ಡಿಸಿಎಂ ಗೋವಿಂದ ಕಾರಜೋಳ ಭೇಟಿ ನೀಡಿ ಸಾಂತ್ವನ ಹೇಳಿದರು.
ಬಾದಾಮಿ ತಾಲೂಕಿನ ನಂದಿಕೇಶ್ವರ ಗ್ರಾಮದಲ್ಲಿ ಸಿಡಿಲು ಬಡಿದು ಮೃತಪಟ್ಟ ರೈತ ಬಸಯ್ಯ ಮುಚಖಂಡಿ ಹಾಗೂ ಹೊಸೂರ ಗ್ರಾಮದ ಮೃತ ರೈತ ಮಹಿಳೆ ಶಾಂತವ್ವ ಭೋವಿ ಕುಟುಂಬಕ್ಕೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಭೇಟಿ ನೀಡಿ ಸಾಂತ್ವನ ಹೇಳಿ ತಲಾ 5 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು.
ಅಲ್ಲದೆ ಅಪಘಾತದಲ್ಲಿ ಮೃತಪಟ್ಟ ನಂದಿಕೇಶ್ವರ ಗ್ರಾಮದ ಪ್ರಭಾವತಿ ಹಂಗರಗಿ ಮನೆಗೂ ಸಹ ಭೇಟಿ ನೀಡಿ ಧೈರ್ಯ ತುಂಬಿದರು.