ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸಂಜನಾ ಹಾಗೂ ರಾಗಿಣಿ ಜೊತೆ ಇವರ ಆಪ್ತರನ್ನು ಬಂಧಿಸಿದ್ದು, ಆರೋಪಿಗಳಿಗೆ ಡೋಪಿಂಗ್ ಟೆಸ್ಟ್ ನಡೆಸಲಾಗಿತ್ತು. ಆದರೆ ಡೋಪಿಂಗ್ ಟೆಸ್ಟ್ ಸ್ಯಾಂಪಲ್ ಇದೀಗ ಹೈದರಾಬಾದ್ ಲ್ಯಾಬ್ನಿಂದ ವಾಪಸ್ ಬಂದಿದೆ ಎಂದು ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಆರೋಪಿಗಳ ಸ್ಯಾಂಪಲ್ ಕಲೆಕ್ಟ್ ಮಾಡುವ ವೇಳೆ ಆಸ್ಪತ್ರೆಯಲ್ಲಿ ಟೆಕ್ನಿಕಲ್ ಸಮಸ್ಯೆ ಉಂಟಾಗಿತ್ತು. ಹೀಗಾಗಿ ನಟಿಯರ ಸ್ಯಾಂಪಲ್ ಸರಿಯಾಗಿಲ್ಲ ಎಂದು ವಾಪಸ್ ಬಂದಿದ್ದು, ಪುನಃ ಸ್ಯಾಂಪಲ್ ಕಲೆಕ್ಟ್ ಮಾಡಿ ಭದ್ರವಾಗಿ ಕಳುಹಿಸಲಾಗಿದೆ. ಸದ್ಯದಲ್ಲೇ ಅದರ ರಿಪೋರ್ಟ್ ಬರುವ ನಿರೀಕ್ಷೆ ಇದೆ ಎಂದಿದ್ದಾರೆ.
ಆರೋಪಿಗಳನ್ನು ಡೋಪಿಂಗ್ ಟೆಸ್ಟ್ನಿಂದ ಮಾತ್ರ ತನಿಖೆ ನಡೆಸುತ್ತಿಲ್ಲ. ಆರೋಪಿಗಳ ಮೊಬೈಲ್ ಸಾಕ್ಷ್ಯಗಳು, ಕೆಲವರ ಹೇಳಿಕೆಗಳು, ರಕ್ತದ ಮಾದರಿ ಪ್ರಬಲವಾಗಿವೆ. ಹೀಗಾಗಿ ತನಿಖೆಗೆ ಯಾವುದೇ ಹಿನ್ನಡೆಯಾಗಿಲ್ಲವೆಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾಹಿತಿ ನೀಡಿದ್ದಾರೆ.