ETV Bharat / state

ಸಚಿವ ಕೆ ಎಸ್​ ಈಶ್ವರಪ್ಪ ವಿರುದ್ಧ ಶಿವಮೊಗ್ಗದಲ್ಲಿ ಯೂತ್ ಕಾಂಗ್ರೆಸ್ ದೂರು

author img

By

Published : Aug 11, 2021, 5:32 PM IST

Updated : Aug 11, 2021, 5:40 PM IST

ಭಾನುವಾರ ನಗರದ ಮಾತಾ ಮಾಂಗಲ್ಯ ಮಂದಿರದಲ್ಲಿ ನಡೆದ ಬಿಜೆಪಿ ನಗರ ಕಾರ್ಯಕಾರಣಿ ಸಭೆಯಲ್ಲಿ ಸಚಿವ ಕೆ‌ ಎಸ್ ಈಶ್ವರಪ್ಪ ಒಂದಕ್ಕೆ ಎರಡು ತಲೆ ತೆಗೆಯಿರಿ ಎನ್ನುವ ಮೂಲಕ ನೆಮ್ಮದಿಯಿಂದ ಇರುವ ಸಮಾಜದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ದೂರು ನೀಡಲಾಗಿದೆ.

Youth Congress Complaint against Minister KS Eshwarappa in Shimoga
ಈಶ್ವರಪ್ಪನವರು ವಿರುದ್ಧ ಶಿವಮೊಗ್ಗದಲ್ಲಿ ಯೂತ್ ಕಾಂಗ್ರೆಸ್ ದೂರು

ಶಿವಮೊಗ್ಗ : ಪ್ರಚೋದನಕಾರಿ ಹೇಳಿಕೆ ನೀಡಿರುವ ಆರೋಪದಡಿ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಅವರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಯೂತ್ ಕಾಂಗ್ರೆಸ್ ನಗರದ ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದೆ.

ಸಚಿವ ಕೆಎಸ್​ ಈಶ್ವರಪ್ಪ ವಿರುದ್ಧ ಶಿವಮೊಗ್ಗದಲ್ಲಿ ಯೂತ್ ಕಾಂಗ್ರೆಸ್ ದೂರು

ಭಾನುವಾರ ನಗರದ ಮಾತಾ ಮಾಂಗಲ್ಯ ಮಂದಿರದಲ್ಲಿ ನಡೆದ ಬಿಜೆಪಿ ಪಕ್ಷದ ನಗರ ಕಾರ್ಯಕಾರಣಿ ಸಭೆಯಲ್ಲಿ ಸಚಿವ ಕೆ‌ ಎಸ್ ಈಶ್ವರಪ್ಪ ಒಂದಕ್ಕೆ ಎರಡು ತಲೆ ತೆಗೆಯಿರಿ ಎನ್ನುವ ಮೂಲಕ ನೆಮ್ಮದಿಯಿಂದ ಇರುವ ಸಮಾಜದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿ ಸಮಾಜದ ವಾತಾವರಣ ಹಾಳು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಹಾಗಾಗಿ, ಕೂಡಲೇ ಸಮಾಜಘಾತುಕ ಕಾಯ್ದೆಯಡಿ ದೂರು ದಾಖಲಿಸಿಕೊಂಡು ಸಚಿವರನ್ನು ಬಂಧಿಸುವಂತೆ ನಗರದ ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದರು. ಅಷ್ಟೇ ಅಲ್ಲ, ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕರನ್ನು ಅವ್ಯಾಚ್ಛ ಶಬ್ದಗಳಿಂದ ನಿಂದಿಸಿದ್ದಾರೆ. ಸಂವಿಧಾನದಡಿ ಆಯ್ಕೆಯಾದ ಇವರು ಅಸಂವಿಧಾನಿಕ ಪದಗಳನ್ನು ಬಳಸಿ ಅವಾಚ್ಯವಾಗಿ ಮಾತನಾಡಿರುವುದನ್ನು ಖಂಡಿಸಿದರು.

ಓದಿ: ಬಿಎಸ್​ವೈ ಭೇಟಿಯಾಗಿ ನಿರ್ಗಮಿಸಿದ ಸಚಿವ ಆನಂದ್ ಸಿಂಗ್ !

ಈ ವೇಳೆ ಕಾಂಗ್ರೆಸ್ ಮುಖಂಡ ಕೆ‌.ರಂಗನಾಥ್, ಮಹಾನಗರ ಪಾಲಿಕೆ ಸದಸ್ಯ ಯೋಗೇಶ್, ಯೂತ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Last Updated : Aug 11, 2021, 5:40 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.