ಶಿವಮೊಗ್ಗ : ನದಿಯಲ್ಲಿ ಎತ್ತುಗಳಿಗೆ ನೀರು ಕುಡಿಸಲು ಹೋದ ವ್ಯಕ್ತಿಯೋರ್ವ ನೀರು ಪಾಲಾಗಿರುವ ಘಟನೆ ಸೊರಬ ತಾಲೂಕು ಭದ್ರಾಪುರ ಗ್ರಾಮದಲ್ಲಿ ನಡೆದಿದೆ. ಭದ್ರಾಪುರದ ಮಹೇಶ್ (25) ಎಂಬುವರು ತನ್ನ ಮನೆಯ ಎತ್ತುಗಳಿಗೆ ವರದಾ ನದಿಗೆ ನೀರು ಕುಡಿಸಲು ಹೋದಾಗ ನಿನ್ನೆ ಸಂಜೆ ಆಕಸ್ಮಿಕವಾಗಿ ನದಿಯಲ್ಲಿ ಮುಳುಗಿದ್ದಾನೆ.

ನದಿಯಲ್ಲಿ ಹರಿವು ಹೆಚ್ಚಾದ ಕಾರಣ ಶವದ ಹುಡುಕಾಟ ನಡೆಸಿರಲಿಲ್ಲ. ಇಂದು ಅಗ್ನಿ ಶಾಮಕ ದಳ ಸಿಬ್ಬಂದಿ ಶವದ ಹುಡುಕಾಟ ಮುಂದುವರೆಸಿದ್ದು, ಮಹೇಶ್ ಶವ ಪತ್ತೆಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಮೃತ ಯುವಕನ ಶವವನ್ನು ನದಿಯಿಂದ ಹೊರಗೆ ತೆಗೆದಿದ್ದಾರೆ. ಈ ಕುರಿತು ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.