ETV Bharat / state

ಜಮೀನು ವಿಚಾರವಾಗಿ ಜಗಳ.. ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ - ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ

ಜಮೀನು ವಿಚಾರವಾಗಿ ಸುಶೀಲಮ್ಮ ಅವರ ಪತಿ ಚಂದ್ರಪ್ಪ ಮತ್ತು ಮೈದುನರ ನಡುವೆ ಜಗಳವಾಗುತ್ತಿತ್ತು. ಶನಿವಾರವು ಮೈದುನರು ಬಂದು ಚಂದ್ರಪ್ಪ ಮತ್ತು ಸುಶೀಲಮ್ಮ ಅವರೊಂದಿಗೆ ಜಗಳವಾಡಿದ್ದರು.

Woman commits suicide by consuming poison
ಜಮೀನು ವಿಚಾರವಾಗಿ ಜಗಳ : ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ
author img

By

Published : Jun 14, 2020, 9:23 PM IST

ಶಿವಮೊಗ್ಗ : ಜಮೀನು ವಿಚಾರವಾಗಿ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿಕಾರಿಪುರ ತಾಲೂಕಿನಲ್ಲಿ ನಡೆದಿದೆ.

ಕಾಗಿನೆಲ್ಲಿ ಗ್ರಾಮದ ಸುಶೀಲಮ್ಮ(43) ಎಂಬುವರು ವಿಷ ಸೇವಿಸಿ ಮೃತರಾಗಿದ್ದಾರೆ. ಸುಶೀಲಮ್ಮ ಅವರು ಶನಿವಾರ ವಿಷ ಸೇವಿಸಿದ್ದು, ಕೂಡಲೇ ಅವರನ್ನು ಶಿಕಾರಿಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸುಶೀಲಮ್ಮ ಮೃತರಾಗಿದ್ದಾರೆ.

ಆತ್ಮಹತ್ಯೆಗೆ ಕಾರಣ ಏನು?: ಜಮೀನು ವಿಚಾರವಾಗಿ ಸುಶೀಲಮ್ಮ ಅವರ ಪತಿ ಚಂದ್ರಪ್ಪ ಮತ್ತು ಮೈದುನರ ನಡುವೆ ಜಗಳವಾಗುತ್ತಿತ್ತು. ಶನಿವಾರವು ಮೈದುನರು ಬಂದು ಚಂದ್ರಪ್ಪ ಮತ್ತು ಸುಶೀಲಮ್ಮ ಅವರೊಂದಿಗೆ ಜಗಳವಾಡಿದ್ದರು. ನಿಮ್ಮ ಕಿರುಕುಳದಿಂದ ಬೇಸತ್ತು ವಿಷ ಸೇವಿಸುವುದಾಗಿ ಸುಶೀಲಮ್ಮ ಬೆದರಿಸಿದ್ದರು.

ಈ ವೇಳೆ ವಿಷ ಕುಡಿಯುವಂತೆ ಮೈದುನರು ಪ್ರಚೋದನೆ ನೀಡಿದ್ದಾರೆ. ಹಾಗಾಗಿ ಸುಶೀಲಮ್ಮ ವಿಷ ಸೇವಿಸಿದ್ದಾರೆ ಎಂದು ಎಫ್ಐಆರ್​​​ನಲ್ಲಿ ತಿಳಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.