ETV Bharat / state

ಚನ್ನಗಿರಿಯಲ್ಲಿ ಇಬ್ಬರನ್ನು ಕೊಂದ ಪುಂಡಾನೆ ಈಗ ಸಕ್ರೆಬೈಲಿನ ವಿಧೇಯ ವಿದ್ಯಾರ್ಥಿ! - wild elephant

ಕಾಡಿನಿಂದ ನಾಡಿಗೆ ದಾರಿ ತಪ್ಪಿ ಬಂದು ಮನುಷ್ಯರ ಮೇಲೆ ದಾಳಿ ನಡೆಸುತ್ತಾ ಇಬ್ಬರನ್ನು ಕೊಂದು ಹಾಕಿದ್ದ ಕಾಡಾನೆಯೊಂದು ಈಗ ಸಕ್ರೆಬೈಲಿನ ಆನೆ ಬಿಡಾರದಲ್ಲಿ ಮಾವುತರು ಹೇಳಿದಂತೆ ಕೇಳುತ್ತಿದೆ.

wild elephant
ಕಾಡಾನೆ
author img

By

Published : Jul 5, 2023, 10:48 AM IST

Updated : Jul 5, 2023, 12:59 PM IST

ಸಕ್ರೆಬೈಲಿನ ಆನೆ ಬಿಡಾರದಲ್ಲಿ ಪಳಗಿದ ಅಭಿಮನ್ಯು

ಶಿವಮೊಗ್ಗ : ಕಳೆದ ಮೂರು ತಿಂಗಳ ಹಿಂದೆ ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಇಬ್ಬರನ್ನು ಕೊಂದ ಪುಂಡಾನೆ ಈಗ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲಿನ ಆನೆ ಬಿಡಾರದ ವಿಧೇಯ ವಿದ್ಯಾರ್ಥಿಯಾಗಿದೆ. ಚನ್ನಗಿರಿ ತಾಲೂಕಿನ ಸೂಳೆಕೆರೆ ಸುತ್ತಮುತ್ತಿನ ಗ್ರಾಮಗಳ ಜನರ ನಿದ್ದೆಗೆಡಿಸಿದ್ದ ಕಾಡಾನೆ ಇಬ್ಬರನ್ನು ಕೊಂದಿತ್ತು. ಅಲ್ಲದೆ, ತನ್ನನ್ನು ಸೆರೆ ಹಿಡಿಯಲು ಬಂದಿದ್ದ ವನ್ಯಜೀವಿ ವೈದ್ಯ ವಿನಯ್ ಅವರನ್ನೂ ಗಾಯಗೊಳಿಸಿತ್ತು. ಇಂತಹ ಪುಂಡಾನೆಯನ್ನು ಸೆರೆ ಹಿಡಿದು ಸಕ್ರೆಬೈಲು ಆನೆ ಬಿಡಾರಕ್ಕೆ ಕರೆ ತರಲಾಗಿತ್ತು. ಸತತ 70 ದಿನಗಳ ಕಾಲ ಆನೆಯನ್ನು ಕ್ರಾಲ್​ನಲ್ಲಿ (ಖೆಡ್ಡಾ) ಇಟ್ಟು ಪಳಗಿಸಲಾಗಿದೆ.

ಕಳೆದ ಎರಡೂವರೆ ತಿಂಗಳ ಹಿಂದೆ ಚನ್ನಗಿರಿ ಮತ್ತು ಹೊನ್ನಾಳಿ ಗಡಿಭಾಗದ ಗ್ರಾಮಗಳ ಹೊಲ- ಗದ್ದೆಗಳಲ್ಲಿ ಬೀಡುಬಿಟ್ಟು ಬೆಳೆಹಾನಿ ಮಾಡುತ್ತಾ ಓರ್ವ ಮಹಿಳೆ ಮತ್ತು ಮಗುವನ್ನು ಬಲಿ ಪಡೆದಿದ್ದ ಕಾಡಾನೆ ಈಗ ಸಕ್ರೆಬೈಲಿನ ಸಾಕಾನೆಯಾಗಿದೆ. ಕಾಡಾನೆಯನ್ನು ಸೆರೆಹಿಡಿಯಬೇಕೆಂಬ ಕೂಗು ಸ್ಥಳೀಯರಿಂದ ವ್ಯಕ್ತವಾದ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಒಂಟಿ ಸಲಗದ ಸೆರೆಗೆ ಮುಂದಾಗಿದ್ದರು. ಚನ್ನಗಿರಿ ಗಡಿಭಾಗದಲ್ಲಿ ಆನೆ ಸೆರೆ ಕಾರ್ಯಾಚರಣೆ ಸಂದರ್ಭದಲ್ಲಿ ವನ್ಯಜೀವಿ ವೈದ್ಯ ವಿನಯ್ ಮೇಲೆ ಕಾಡಾನೆ ದಾಳಿ ಮಾಡಿ ಮಾರಣಾಂತಿಕವಾಗಿ ಹಲ್ಲೆ ಮಾಡಿತ್ತು. ಗಂಭೀರವಾಗಿ ಗಾಯಗೊಂಡಿದ್ದ ವಿನಯ್ ಅವರನ್ನು ಬೆಂಗಳೂರಿಗೆ ಝೀರೋ ಟ್ರಾಫಿಕ್​ನಲ್ಲಿ ರವಾನಿಸಲಾಗಿತ್ತು. ಕಾಡಾನೆಯನ್ನು ಸಕ್ರೆಬೈಲು ಬಿಡಾರಕ್ಕೆ ಕರೆತರಲಾಗಿತ್ತು. ಕ್ರಾಲ್​ನಲ್ಲಿ ಹಾಕಿದ ಕಾಡಾನೆ ವಾರಗಟ್ಟಲೆ ಘೀಳಿಟ್ಟರೂ, ಅದನ್ನು ಶಾಂತ ಸ್ವರೂಪಕ್ಕೆ ತರುವಲ್ಲಿ ಮಾವುತ ಕಾವಾಡಿಗಳು ಯಶಸ್ವಿಯಾಗಿದ್ದಾರೆ.

ಸತತ ಎಂಬತ್ತು ದಿನಗಳ ಕಾಲ ಆನೆಯ ಲಾಲನೆ- ಪಾಲನೆ ಜವಾಬ್ದಾರಿಯನ್ನು ಜಮೇದಾರ್ ಖುದ್ರತ್ ಪಾಷಾ ಮಂಜು ಅವರ ತಂಡ ಹೊತ್ತಿತ್ತು. ಹಗಲು ರಾತ್ರಿ ಆನೆಯತ್ತ ಬೀಡು ಬಿಟ್ಟು ಅದರ ವಿಶ್ವಾಸಗಳಿಸುವಲ್ಲಿ ಮಾವುತ, ಕಾವಾಡಿಗಳು ನಡೆಸಿದ ಪರಿಶ್ರಮ ಯಶಸ್ವಿಯಾಗಿದೆ. ಇದರಿಂದ ಕಾಡಾನೆ ಪಳಗಿದ ಆನೆಯಾಗಿದೆ.

ಅಭಿಮನ್ಯು ಎಂದು ನಾಮಕರಣ: ಕಾಡಾನೆಯನ್ನು ಸೆರೆ ಹಿಡಿದು ಸಕ್ರೆಬೈಲಿಗೆ ಕರೆ ತಂದ ಮೇಲೆ ಅದಕ್ಕೆ ಹೆಸರಿಡುವುದು ಪ್ರತಿ ಆನೆ‌ ಬಿಡಾರದ ವಾಡಿಕೆ. ಅದರಂತೆ ಈ ಆನೆಗೆ ಅಭಿಮನ್ಯು ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರ ಸಮ್ಮುಖದಲ್ಲಿ ವನ್ಯಜೀವಿ ದಿನಾಚರಣೆಯ ದಿನ ನಾಮಕರಣ ಮಾಡಲಾಗಿದೆ.

ವನ್ಯಜೀವಿ ವೈದ್ಯರ ಪ್ರತಿಕ್ರಿಯೆ : "ಕಳೆದ 70 ದಿನಗಳ ಕಾಲ ಕ್ರಾಲ್​ನಲ್ಲಿದ್ದ ಅಭಿಮನ್ಯು ಆನೆಯನ್ನೀಗ ಹೊರತರಲಾಗಿದೆ. ಸಂಪೂರ್ಣವಾಗಿ ಮಾವುತರಿಂದ ಪಳಗಿದ ಹಾಗೂ ತರಬೇತಿ ಪಡೆದ ಅಭಿಮನ್ಯುವನ್ನು ಖೆಡ್ಡಾದಿಂದ ಹೊರತೆಗೆಯಲಾಯಿತು. ಯಾವುದೇ ಅಹಿತಕರ ಘಟನೆಯಾಗದಂತೆ ಕುಮ್ಕಿ ಆನೆಗಳನ್ನು ಬಳಸಲಾಗಿತ್ತು. ಅಭಿಮನ್ಯುವನ್ನು ಖೆಡ್ಡಾದಿಂದ ಹೊರತೆಗೆಯುವ ಮುನ್ನ ಪೂಜಾ ಕಾರ್ಯ ನೆರವೇರಿಸಿ, ಕ್ರಾಲ್​ನಿಂದ ಹೊರತೆಗೆಯಲಾಯಿತು. ಅಭಿಮನ್ಯು ಸೊರಗಿದಂತೆ ಕಂಡರೂ, ವನ್ಯಜೀವಿ ವೈದ್ಯರು ತರಬೇತಿ ಸಂದರ್ಭದಲ್ಲಿ ತೂಕ ಕಡಿಮೆಯಾಗುವುದು ಸಾಮಾನ್ಯ. ಅಭಿಮನ್ಯು ಆರೋಗ್ಯ ಉತ್ತಮವಾಗಿದೆ. ದೇಹದಲ್ಲಿ ಉಣ್ಣೆಗಳಿದ್ದು, ಅವೆಲ್ಲವನ್ನು ತೆಗೆಯಲಾಗಿದೆ" ಎಂದು ವನ್ಯಜೀವಿ ವೈದ್ಯ ಮುರುಳಿ ಮನೋಹರ ಹೇಳಿದ್ದಾರೆ.

ಇದನ್ನೂ ಓದಿ : Elephant Task Force: ಕಾಡಾನೆ ದಾಳಿ ತಪ್ಪಿಸಲು ವಿಶೇಷ ಕಾರ್ಯಪಡೆ ರಚನೆ

ಡಿಎಫ್​ಒ ಹೇಳಿಕೆ: "ಖೆಡ್ಡಾದಿಂದ ಹೊರಬಂದ ಅಭಿಮನ್ಯು ಈಗ ಸ್ವತಂತ್ರನಾಗಿದ್ದಾನೆ. ಮೈಮೇಲೆ ಮಣ್ಣನ್ನು ಮೆತ್ತಿಕೊಂಡು ಕಾಡಿನಲ್ಲಿದ್ದಷ್ಟೇ ನೈಸರ್ಗಿಕ ಸ್ವಭಾವ ಆನೆಗೆ ಸಿಗುತ್ತಿದೆ. ಮಾವುತರು ನೀಡುತ್ತಿದ್ದ ಎಲ್ಲ ಆದೇಶಗಳನ್ನು ಶಾಂತವಾಗಿ ಪಾಲನೆ ಮಾಡುತ್ತಿದ್ದು, ಇನ್ನೂ ಕೆಲವು ತರಬೇತಿಗಳನ್ನು ನೀಡಬೇಕಿದೆ. ಸದ್ಯದಲ್ಲಿಯೇ ಸಕ್ರೆಬೈಲು ಬಿಡಾರಕ್ಕೆ ಅಭಿಮನ್ಯು ಆಗಮಿಸಲಿದ್ದಾನೆ. ತರಬೇತಿ ವೇಳೆ ಕೆಲವು ದಿನಗಳ ಕಾಲ ಉಪವಾಸವಿಡಬೇಕಾಗುತ್ತದೆ. ನಂತರ ಸ್ವಲ್ಪ ಸ್ವಲ್ಪ ಆಹಾರ ನೀಡುತ್ತಾ ಮಾವುತರು ತಮ್ಮ ಮಾತನ್ನು ಕೇಳುವ, ಆದೇಶ ಪಾಲಿಸುವಂತೆ ಪಳಗಿಸುತ್ತಾರೆ. ಇದರಿಂದ ಆನೆಯ ದೇಹ ಸ್ವಲ್ಪ ಕರಗಿದಂತೆ ಕಾಣುತ್ತದೆ. ಆನೆ ಈಗ ಆರೋಗ್ಯವಾಗಿದ್ದು, ಶೀಘ್ರದಲ್ಲಿಯೇ ಆನೆ ಬಿಡಾರಕ್ಕೆ ಕರೆತರಲಾಗುವುದು" ಎಂದು ವನ್ಯಜೀವಿ ವಿಭಾಗದ ಡಿಎಫ್​ಒ ಪ್ರಸನ್ನ ಪಟಗಾರ್ ತಿಳಿಸಿದ್ದಾರೆ.

Last Updated : Jul 5, 2023, 12:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.