ಶಿವಮೊಗ್ಗ: ಹತ್ಯೆಯಾದ ಭಜರಂಗದಳದ ಕಾರ್ಯಕರ್ತ ಹರ್ಷನ ಮನೆಗೆ ಇಂದು ಭೇಟಿ ನೀಡಿದ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ಸ್ವಾಮೀಜಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ವೇಳೆ ಈಟಿವಿ ಭಾರತ ಜೊತೆ ಮಾತನಾಡಿದ ಶ್ರೀಗಳು, ಶಿವಾಜಿಯ ಧೈರ್ಯ, ಶಿವಾಜಿಯ ದೇಶ ಪ್ರೇಮವನ್ನು ಮೈಗೂಡಿಸಿಕೊಂಡಿದ್ದ ಯುವಕ ಹರ್ಷನ ಅಗಲಿಕೆ ನಮ್ಮ ಸಮಾಜಕ್ಕಾದ ದೊಡ್ಡ ನಷ್ಟ. ಯುವಕರಲ್ಲಿ ದೇಶಾಭಿಮಾನ ನಮ್ಮ ಸಂಸ್ಕೃತಿ ಮೇಲಿನ ಅಭಿಮಾನವನ್ನು ಅವರು ಇನ್ನಷ್ಟು ಜಾಗೃತಗೊಳಿಸಿ ಹೋಗಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಶಿವಲಿಂಗೇಗೌಡರ ಆರ್ಭಟಕ್ಕೆ ಸ್ಟೇಜ್ ಗಢಗಢ.. ಗದೆ ಹಿಡಿದು ಭೀಮನ ಅವತಾರ ತಾಳಿದ ಶಾಸಕರು..
ಇಂತಹ ಘಟನೆಗಳು ಸಮಾಜದಲ್ಲಿ ನಡೆಯಬಾರದು. ಸರ್ಕಾರ ಸಹ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳುವ ಮೂಲಕ ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗದ ಮೇಲೆ ಜನ ಇಟ್ಟಿರುವಂತಹ ವಿಶ್ವಾಸ ಹೆಚ್ಚಾಗುವಂತೆ ಮಾಡಬೇಕೆಂದು ಹೇಳಿದರು.