ಶಿವಮೊಗ್ಗ: ಮಂಗನ ಕಾಯಿಲೆಯಿಂದ ತತ್ತರಿಸಿದ್ದ ಸಾಗರ ತಾಲೂಕು ಅರಳಗೋಡು ಗ್ರಾಮದ ಜಾನುವಾರುಗಳಿಗೆ ಜಿಲ್ಲಾಡಳಿತ ಮೇವು ವಿತರಿಸುವುದಾಗಿ ವಾಗ್ದಾನ ನೀಡಿ ಈಗ ಮೇವು ವಿತರಿಸದೆ ಸುಮ್ಮನೆ ಕುಳಿತಿದೆ. ಇದನ್ನು ಖಂಡಿಸಿ ಗ್ರಾಮಸ್ಥರು ಮೇವು ನೀಡುವಂತೆ ಪ್ರತಿಭಟನೆ ನಡೆಸಿದರು.
ಅರಳಗೋಡು ಸುತ್ತಮುತ್ತ ಮಂಗನ ಕಾಯಿಲೆಗೆ ಇಪ್ಪತ್ತಕ್ಕೂ ಹೆಚ್ಚು ಜನ ಬಲಿಯಾಗಿದ್ದರು. ಕಾಡಿಗೆ ಜಾನುವಾರುಗಳು ಮೇಯಲು ಹೋದಾಗ ಅವುಗಳ ಜೊತೆ ಬರುವ (ಒಂದು ರೀತಿಯ ಸೂಕ್ಷಾಣು ಜೀವಿ)ಉಣ್ಣೆಗಳು ಮನುಷ್ಯನಿಗೆ ಕಚ್ಚಿ ಮಂಗನ ಕಾಯಿಲೆ ಬರುತ್ತಿತ್ತು.
ಇದರಿಂದ ಜಿಲ್ಲಾಡಳಿತ ಇಲ್ಲಿನ ರೈತರ ಜಾನುವಾರುಗಳಿಗೆ ಮಳೆಗಾಲದ ತನಕ ಮೇವು ಪೊರೈಕೆ ಮಾಡುವುದಾಗಿ ಹೇಳಿತ್ತು. ಆದರೆ ಈಗ ಸಾಗರ ತಾಲೂಕು ಆಡಳಿತ ಮೇವನ್ನು ತರಲು ಕೂಲಿ ಆಳುಗಳಿಲ್ಲ, ನೀವೇ ತೆಗೆದುಕೊಂಡು ಹೋಗಿ ಎಂದು ಗ್ರಾಮಸ್ಥರಿಗೆ ತಿಳಿಸಿದೆ. ತಾಲೂಕು ಆಡಳಿತದ ಈ ಕ್ರಮ ಖಂಡಿಸಿ ಗ್ರಾಮಸ್ಥರು ಅರಳಗೋಡು ಗ್ರಾಮ ಪಂಚಾಯತಿಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.