ETV Bharat / state

ಬಸ್​ ನಿಲ್ದಾಣದಲ್ಲಿ ಕೊಳಚೆ ಕಂಡು ಕೆಂಡಾಮಂಡಲವಾದ ಉಪ ಮೇಯರ್​....

author img

By

Published : Aug 3, 2019, 9:40 PM IST

ಶಿವಮೊಗ್ಗ ಖಾಸಗಿ ಬಸ್​ ನಿಲ್ದಾಣದಲ್ಲಿ ಅಶುಚಿತ್ವದ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಶಿವಮೊಗ್ಗ ಮಹಾನಗರ ಪಾಲಿಕೆ ಉಪಮೇಯರ್ ಎಸ್.ಎನ್.ಚನ್ನಬಸಪ್ಪ ಬಸ್ ನಿಲ್ದಾಣದ ಆವರಣಕ್ಕೆ ಭೇಟಿ ನೀಡಿ ಅಲ್ಲಿರುವ ಅಶಿಸ್ತನ್ನು ಕಂಡು ಕೆಲಸಗಾರರಿಗೆಲ್ಲಾ ಸರಿಯಾಗಿಯೇ ಕ್ಲಾಸ್​ ತೆಗೆದುಕೊಂಡಿದ್ದಾರೆ.

ಬಸ್​ ನಿಲ್ದಾಣ ಪರಿಶೀಲಿಸಿದ ಉಪಮೇಯರ್​

ಶಿವಮೊಗ್ಗ: ರಾಜ್ಯದಲ್ಲೇ ಹೈಟೆಕ್ ಖಾಸಗಿ ಬಸ್ ನಿಲ್ದಾಣ ಎಂಬ ಖ್ಯಾತಿಗೆ ಪಾತ್ರವಾಗಿರುವ ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಸ್ವಚ್ಛತೆಯೇ ಇಲ್ಲದಂತಾಗಿದೆ. ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಶಿವಮೊಗ್ಗ ಮಹಾನಗರ ಪಾಲಿಕೆ ಉಪಮೇಯರ್ ಎಸ್.ಎನ್.ಚನ್ನಬಸಪ್ಪ ಬಸ್ ನಿಲ್ದಾಣದ ಆವರಣಕ್ಕೆ ಭೇಟಿ ನೀಡಿದರು.

ಬಸ್​ ನಿಲ್ದಾಣ ಪರಿಶೀಲಿಸಿದ ಉಪಮೇಯರ್​

ಖಾಸಗಿ ಬಸ್​ ನಿಲ್ದಾಣದಲ್ಲಿ ಸ್ವಚ್ಛತೆ ಬಗ್ಗೆ ಉಪ ಮೇಯರ್​ ಪರಿಶೀಲನೆ ನಡೆಸಿದಾಗ ಎಲ್ಲೆಂದರಲ್ಲಿ ಗಲೀಜು ತುಂಬಿತ್ತು. ಇದರಿಂದ ಸಿಟ್ಟಾದ ಉಪ ಮೇಯರ್​ ಕೂಡಲೇ ಸ್ಥಳದಲ್ಲೇ ನಿಂತು ಕೊಳಚೆಯನ್ನು ಸ್ವಚ್ಛಗೊಳಿಸಿದರು. ಅದಲ್ಲದೇ ಬಸ್ ನಿಲ್ದಾಣದ ಎದುರಿನ ಖಾಲಿ ಜಾಗದಲ್ಲಿ ಮಳೆನೀರು ನಿಂತಿದ್ದರಿಂದ ಸೊಳ್ಳೆಗಳ ಆವಾಸ ಸ್ಥಾನವಾಗಿರುವುದನ್ನು ಕಂಡು ಕೂಡಲೇ ಪೌರ ಕಾರ್ಮಿಕರನ್ನು ಕರೆಸಿ ಆ ಜಾಗವನ್ನು ಸ್ವಚ್ಛಗೊಳಿಸಿಸಿದರು.

ಬಳಿಕ ಅಲ್ಲಿರುವ ಅಂಗಡಿಗೆ ಭೇಟಿ ನೀಡಿದಾಗ, ಅಂಗಡಿಯವರು ಬಸ್ ನಿಲ್ದಾಣದ ಕಾರಿಡಾರ್ ಅನ್ನೇ ಆಕ್ರಮಿಸಿರುವುದನ್ನು ಕಂಡು ಅಂಗಡಿಯವರನ್ನು ತರಾಟೆಗೆ ತೆಗೆದುಕೊಂಡಿದ್ದು ಮಾತ್ರವಲ್ಲದೆ ಎಲ್ಲಾ ವಸ್ತುಗಳನ್ನು ಅಂಗಡಿಗಳ ಒಳಗೆ ಇಡಿಸಿದರು. ಬಳಿಕ ಸಾರ್ವಜನಿಕ ಶೌಚಾಲಯಕ್ಕೆ ತೆರಳಿ ಅಲ್ಲಿನ ಅಶುಚಿತ್ವಕ್ಕೆ ನಿರ್ವಾಹಕರನ್ನು ತರಾಟೆಗೆ ತೆಗೆದುಕೊಂಡರು. ಕೊನೆಗೂ ಇವೆಲ್ಲವನ್ನು ನೋಡಲಾರದೆ ಶೌಚಾಲಯದಲ್ಲಿ ಇಟ್ಟಿದ್ದ ಕಸದ ಬ್ಯಾಗುಗಳನ್ನು ತಾವೇ ಎತ್ತಿ ಹೊರಗೆ ಎಸೆದರು.

Intro:ಶಿವಮೊಗ್ಗ,
ಫಾರ್ಮೆಟ್: ಎವಿ
ಸ್ಲಗ್: ಶಿವಮೊಗ್ಗ ಬಸ್ ನಿಲ್ದಾಣದ ಆವರಣದಲ್ಲಿ ಉಪಮೇಯರ್ ಸ್ವಚ್ಛತೆ ವೀಕ್ಷಣೆ

ಆ್ಯಂಕರ್..........
ರಾಜ್ಯದಲ್ಲೇ ಹೈಟೆಕ್ ಖಾಸಗಿ ಬಸ್ ನಿಲ್ದಾಣ ಎಂಬ ಖ್ಯಾತಿಗೆ ಪಾತ್ರವಾಗಿರುವ ಶಿವಮೊಗ್ಗ ಖಾಸಗಿ ಬಸ್ ಆವರಣದಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಇನ್ನು ಖಾಸಗಿ ಬಸ್ ನಿಲ್ದಾಣದ ಅಕ್ಕಪಕ್ಕ ಹಾಗೂ ಎದುರಿರುವ ಖಾಲಿ ಜಾಗ ಸಂಪೂರ್ಣವಾಗಿ ಕೊಳಚೆ ಪ್ರದೇಶದಂತಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಶಿವಮೊಗ್ಗ ಮಹಾನಗರ ಪಾಲಿಕೆ ಉಪಮೇಯರ್ ಎಸ್.ಎನ್.ಚನ್ನಬಸಪ್ಪ ಅವರು ಬಸ್ ನಿಲ್ದಾಣ ಹಾಗೂ ಅಕ್ಕಪಕ್ಕದ ಸ್ಥಳಗಳಿಗೆ ಭೇಟಿ ನೀಡಿ ಸ್ವಚ್ಛತೆ ಪರಿಶೀಲಿಸಿದರು. ಜೊತೆಗೆ ಕೂಡಲೇ ಸ್ಥಳದಲ್ಲೇ ನಿಂತು ಕೊಳಚೆಯನ್ನು ಸ್ವಚ್ಛಗೊಳಿಸಿದ್ದು ವಿಶೇಷವಾಗಿತ್ತು.

ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಸ್ವಚ್ಛತೆಯೇ ಇಲ್ಲದಂತಾಗಿತ್ತು. ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಶುಕ್ರವಾರ ಶಿವಮೊಗ್ಗ ಮಹಾನಗರ ಪಾಲಿಕೆ ಉಪಮೇಯರ್ ಎಸ್.ಎನ್.ಚನ್ನಬಸಪ್ಪ ಅವರು ಬಸ್ ನಿಲ್ದಾಣದ ಆವರಣಕ್ಕೆ ಭೇಟಿ ನೀಡಿ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಿದರು. ಈ ವೇಳೆ ಬಸ್ ನಿಲ್ದಾಣದ ಎದುರಿನ ಖಾಲಿ ಜಾಗದಲ್ಲಿ ಮಳೆನೀರು ನಿಂತು ಅಲ್ಲಿ ಸೊಳ್ಳೆಗಳ ಆವಾಸ ಸ್ಥಾನವಾಗಿರುವುದನ್ನು ಕಂಡು ಕೆಂಡಾಮಂಡಲರಾದ ಚನ್ನಬಸಪ್ಪ ಕೂಡಲೇ ಪೌರ ಕಾರ್ಮಿಕರನ್ನು ಕರೆಯಿಸಿ ಆ ಜಾಗವನ್ನು ಸ್ವಚ್ಛಗೊಳಿಸಿದರು. ಬಳಿಕ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದಾಗ ಅಲ್ಲಿರುವ ಅಂಗಡಿಯವರು ಬಸ್ ನಿಲ್ದಾಣದ ಕಾರಿಡಾರ್ ಅನ್ನೇ ಆಕ್ರಮಿಸಿರುವುದನ್ನು ಕಂಡು ಅಂಗಡಿಯವರನ್ನು ತರಾಟೆಗೆ ತೆಗೆದುಕೊಂಡಿದ್ದು ಮಾತ್ರವಲ್ಲದೆ ಎಲ್ಲ ವಸ್ತುಗಳನ್ನು ಅಂಗಡಿಗಳ ಒಳಗೆ ಇಡಿಸಿದರು. ಬಳಿಕ ಸಾರ್ವಜನಿಕ ಶೌಚಾಲಯಕ್ಕೆ ತೆರಳಿ ಅಲ್ಲಿ ಸ್ವಚ್ಛತೆಯೇ ಇಲ್ಲದಿದ್ದುದನ್ನು ಕಂಡು ನಿರ್ವಾಹಕರನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಶೌಚಾಲಯದಲ್ಲಿ ಇಟ್ಟಿದ್ದ ಕಸದ ಬ್ಯಾಗ್ ಗಳನ್ನು ತಾವೇ ಎತ್ತಿ ಹೊರಗೆ ಎಸೆದರು,
ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.