ಶಿವಮೊಗ್ಗ: ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ರಿಪೇರಿಗೆಂದು ನಿಲ್ಲಿಸಿದ್ದ ವಾಹನಗಳು ಸುಟ್ಟು ಭಸ್ಮವಾಗಿರುವ ಘಟನೆ ಶಿವಮೊಗ್ಗದ ಆಟೋ ಕಾಂಪ್ಲೆಕ್ಸ್ನಲ್ಲಿ ನಡೆದಿದೆ.
ರಿಪೇರಿಗೆಂದು ನಿಲ್ಲಿಸಿದ ಕಾರು, ಬಸ್ಗಳಿಗೆ ಬೆಂಕಿ ತಗುಲಿದೆ. ನಿನ್ನೆ ಭಾನುವಾರ ಆದ ಕಾರಣ ಆಟೋ ಕಾಂಪ್ಲೆಕ್ಸ್ ನಲ್ಲಿ ಜನ ಸಂಚಾರ ವಿರಳವಾಗಿತ್ತು. ಹೀಗಾಗಿ ವಾಹನಗಳಿಗೆ ಬೆಂಕಿ ತಗುಲಿರುವ ವಿಚಾರ ಬೇಗ ತಿಳಿದಿಲ್ಲ. ಬಳಿಕ ಸ್ಥಳೀಯರು ಗಮನಿಸಿ ಪಾಲಿಕೆ ಸದಸ್ಯ ರಾಹುಲ್ ಅವರಿಗೆ ಮಾಹಿತಿ ನೀಡಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ತಕ್ಷಣ ಅವರು ಅಗ್ನಿಶಾಮಕ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದು, ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಆಟೋ ಕಾಂಪ್ಲೆಕ್ಸ್ನಲ್ಲಿ ಗ್ಯಾರೇಜ್ಗಳಿರುವುದರಿಂದ ರಿಪೇರಿಗೆಂದು ಕಾರು, ಬಸ್ಗಳು ಬರುತ್ತವೆ. ಹೀಗೆ ಬಂದ ವಾಹನಗನ್ನು ಗ್ಯಾರೇಜ್ಗಳ ಮುಂದೆ ನಿಲ್ಲಿಸಲಾಗಿರುತ್ತದೆ. ಹೀಗೆ ನಿಂತಿದ್ದ ವಾಹನಗಳಿಗೆ ಆಕಸ್ಮಿಕ ಬೆಂಕಿ ತಗುಲಿದೆ ಎನ್ನಲಾಗ್ತಿದೆ. ಈ ಕುರಿತು ವಿನೋಬ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕೊಳ್ಳೇಗಾಲ: ಮೇಣದಬತ್ತಿಯಿಂದ ಹೊತ್ತಿಕೊಂಡ ಬೆಂಕಿ.. ನಶೆಯಲ್ಲಿ ಮಲಗಿದ್ದ ವೃದ್ಧ ದುರ್ಮರಣ