ETV Bharat / state

ಜನವಸತಿ ಪ್ರದೇಶದಲ್ಲಿ ಸೂಕ್ತ ರಸ್ತೆ, ಚರಂಡಿ ನಿರ್ಮಿಸುವಂತೆ ಮಹಿಳಾ ಒಕ್ಕೂಟ ಆಗ್ರಹ - Shimoga latest news

ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡುವಂತೆ ಆಗ್ರಹಿಸಿ ಶರಾವತಿ ಮತ್ತು ಚೈತನ್ಯ ಸ್ತ್ರೀ ಬಂಧು ಸ್ವಸಹಾಯ ಸಂಘ ಒಕ್ಕೂಟದ ಮಹಿಳೆಯರು ಪ್ರತಿಭಟನೆ ನಡೆಸಿದರು.

Protest
Protest
author img

By

Published : Sep 3, 2020, 3:46 PM IST

ಶಿವಮೊಗ್ಗ: ಜನವಸತಿ ಪ್ರದೇಶದಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡುವಂತೆ ಆಗ್ರಹಿಸಿ‌ ಶರಾವತಿ ಮತ್ತು ಚೈತನ್ಯ ಸ್ತ್ರೀ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಜಿಲ್ಲಾಧಿಕಾರಿ‌ ಕಚೇರಿ‌ ಮುಂದೆ ಪ್ರತಿಭಟನೆ ನಡೆಸಿತು.

ನಗರದ ಆಲ್ಕೋಳ ವೃತ್ತದಿಂದ ಗೋಪಾಳಗೌಡ 100 ಅಡಿ ರಸ್ತೆಯ ಎರಡು ಭಾಗದಲ್ಲಿ ಸಮರ್ಪಕವಾಗಿ ಚರಂಡಿ‌ ನಿರ್ಮಾಣ ಮಾಡದೆ ಹಾಗೇ ಬಿಡಲಾಗಿದೆ. ಇದರಿಂದ ಮಳೆ ಬಂದಾಗ ನೀರು ಹರಿದು ಜನ ವಸತಿ ಪ್ರದೇಶದಲ್ಲಿ‌ ನಿಲ್ಲುತ್ತದೆ. ಅಲ್ಲದೆ ರಸ್ತೆ ನಿರ್ಮಾಣ‌ ಸರಿ ಆಗಿಲ್ಲ ಹಾಗೂ ಒಳಚರಂಡಿಗೆ ಸರಿಯಾದ ಸಂಪರ್ಕ ನೀಡದ ಕಾರಣ ಎಲ್ಲಾ‌ ನೀರು ಜನವಸತಿ ಪ್ರದೇಶಕ್ಕೆ ನುಗ್ಗುತ್ತಿದೆ.

ಇಲ್ಲಿ ಸ್ತ್ರೀಬಂಧು ವಿವಿದ್ಧೋದ್ದೇಶ ಸೌಹರ್ದ ಸಹಕಾರಿ ನಿಯಮಿತ, ಕಲ್ಯಾಣ ಮಂದಿರ, ಮಾನಸಿಕ ಅಸ್ವಸ್ಥರ ಮಾನಸಧಾರ ಪುನರ ವಸತಿ ಕೇಂದ್ರ ಹೀಗೆ ಹಲವು ಮನೆಗಳಿವೆ. ಆಲ್ಕೋಳ ವೃತ್ತದಿಂದ ಗೋಪಾಳ ಕಡೆ‌ ತಗ್ಗಿದ್ದು, ನೀರು ಎಲ್ಲಾ ಕಡೆಯಿಂದ ಇಲ್ಲಿಗೆ ಬಂದು‌ ನಿಲ್ಲುತ್ತದೆ. ನೀರು ನಿಲ್ಲುವುದರಿಂದ ಸೊಳ್ಳೆಗಳು‌ ಉತ್ಪತ್ತಿಯಾಗುತ್ತವೆ. ಇದು ಇಲ್ಲಿನ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಕ್ಷಣ ಈ ಭಾಗದಲ್ಲಿ ಒಳ ಚರಂಡಿಗೆ ಸಂಪರ್ಕ, ಚರಂಡಿ ನಿರ್ಮಾಣ‌ ಹಾಗೂ ರಸ್ತೆ ನಿರ್ಮಾಣ ಮಾಡಿ‌ ಸ್ಥಳೀಯರು‌ ನೆಮ್ಮದಿಯಿಂದ ಓಡಾಡುವಂತೆ ಆಗ್ರಹಿಸಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.