ETV Bharat / state

ಕೆರೆಗೆ ಬಂಡಿ ಸಮೇತ ಇಳಿದ ಎತ್ತುಗಳು ಸಾವು: ಮಾಲೀಕನನ್ನು ರಕ್ಷಿಸಿದ ಗ್ರಾಮಸ್ಥರು - Two oxen died in hirejanbanuru

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹಿರೇಜಂಬೂರು ಗ್ರಾಮದಲ್ಲಿ ಬಾಯಾರಿಕೆಯಿಂದ ಎರಡು ಎತ್ತುಗಳು ಕೆರೆಗಿಳಿದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

Two oxen died fell down in lake in Shikaripura
ಕೆರೆಗೆ ಗಾಡಿ ಸಮೇತ ಇಳಿದ ಎತ್ತುಗಳು ಸಾವು
author img

By

Published : May 25, 2020, 10:36 AM IST

Updated : May 25, 2020, 11:01 AM IST

ಶಿವಮೊಗ್ಗ: ಬಾಯಾರಿಕೆಯಿಂದ ಎರಡು ಎತ್ತುಗಳು ಗಾಡಿ ಸಮೇತ ಕೆರೆಗಿಳಿದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹಿರೇಜಂಬೂರು ಗ್ರಾಮದಲ್ಲಿ ನಡೆದಿದೆ.

ಕೆರೆಗೆ ಗಾಡಿ ಸಮೇತ ಇಳಿದ ಎತ್ತುಗಳು ಸಾವು

ಹಿರೇಜಂಬೂರಿನ ಮಾಲತೇಶಪ್ಪ ಮಡಿವಾಳ ಎಂಬುವವರಿಗೆ ಸೇರಿದ ಎತ್ತುಗಳು ಸಾವನ್ನಪ್ಪಿವೆ. ಗದ್ದೆಯಿಂದ ಮನೆಗೆ ಭತ್ತದ ಹುಲ್ಲನ್ನು ಹೇರಿಕೊಂಡು ಹೋಗುತ್ತಿದ್ದ ವೇಳೆ ಬಾಯಾರಿಕೆಯಿಂದ ಎತ್ತುಗಳು ಕೆರೆಗೆ ಇಳಿದಿದ್ದವು. ಜೆಸಿಬಿಯಲ್ಲಿ ಕೆರೆಯಲ್ಲಿ ಮಣ್ಣು ತೆಗೆದಿದ್ದ ಪರಿಣಾಮ ಎತ್ತುಗಳು ಗುಂಡಿಯಲ್ಲಿ ಬಿದ್ದು ಗಾಡಿ ನೀರಿನಲ್ಲಿ ಸಿಲುಕಿಕೊಂಡಿತ್ತು.

ಇದನ್ನು ಕಂಡ ಸುತ್ತಲಿನ ಜನರು ಎತ್ತುಗಳನ್ನು ಬಜಾವ್​ ಮಾಡಲು ಮುಂದಾಗಿದ್ದರು. ಅಷ್ಟರಲ್ಲಿ ಎತ್ತುಗಳು ನೀರು ಕುಡಿದು ಸಾವನ್ನಪ್ಪಿದ್ದವು. ಗಾಡಿಯಲ್ಲಿದ್ದ ಮಾಲೀಕ ಮಾಲತೇಶಪ್ಪರನ್ನು ಗ್ರಾಮಸ್ಥರು ರಕ್ಷಣೆ ಮಾಡಿದ್ಧಾರೆ.

ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳಾದ ಡಾ. ಜಯಪ್ಪ, ಡಾ. ರಾಜು ಸೇರಿದಂತೆ ಗ್ರಾಮ ಲೆಕ್ಕಾಧಿಕಾರಿಗಳು ಭೇಟಿ ನೀಡಿ ಪರೀಶಿಲಿಸಿದ್ದು, ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : May 25, 2020, 11:01 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.