ETV Bharat / state

ನಿಸರ್ಗದ ಜೀವ ವೈವಿಧ್ಯ ಬದಲಾವಣೆಗೆ ಮಾನವನೇ ಕಾರಣ: ಡಾ. ಅಶೋಕ ದಳವಾಯಿ - ಆತಂಕ

ಶಿವಮೊಗ್ಗ ಕೃಷಿ ಹಾಗೂ ತೋಟಗಾರಿಕೆ ವಿವಿ ಯಲ್ಲಿ ಭವಿಷ್ಯಕ್ಕಾಗಿ ಜೀವ ವೈವಿಧ್ಯತೆ ಮತ್ತು ಸಸ್ಯ ಸಂಪನ್ಮೂಲಗಳ ಸಂರಕ್ಷಣೆ ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನೈಸರ್ಗಿಕ ಜೀವ ವೈವಿಧ್ಯತೆ ನಾಶವಾದರೆ ಎಂತಹ ಅನಾಹುತ ಉಂಟಾಗುತ್ತದೆ ಎಂಬುದಕ್ಕೆ ಕೇರಳ ಹಾಗೂ ಕೊಡಗಿನಲ್ಲಿ ನಡೆದ ವಿಕೋಪಗಳು ನಮಗೆ ನಿದರ್ಶನಗಳಾಗಿವೆ ಎಂದರು.

ಡಾ. ಅಶೋಕ ದಳವಾಯಿ
author img

By

Published : Mar 15, 2019, 11:52 PM IST

ಶಿವಮೊಗ್ಗ: ಮಾನವನ ಹಸ್ತಕ್ಷೇಪದಿಂದ ನೈಸರ್ಗಿಕ ಜೀವ ವೈವಿಧ್ಯತೆ ಬದಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದು ರಾಷ್ಟ್ರೀಯ ಮಳೆಯಾಶ್ರಿತ ಪ್ರದೇಶಗಳ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಅಶೋಕ ದಳವಾಯಿ ಆತಂಕ ವ್ಯಕ್ತಪಡಿಸಿದರು.

ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಡಾ. ಅಶೋಕ ದಳವಾಯಿ

ಶಿವಮೊಗ್ಗ ಕೃಷಿ ಹಾಗೂ ತೋಟಗಾರಿಕೆ ವಿವಿ ಯಲ್ಲಿ ಭವಿಷ್ಯಕ್ಕಾಗಿ ಜೀವ ವೈವಿಧ್ಯತೆ ಮತ್ತು ಸಸ್ಯ ಸಂಪನ್ಮೂಲಗಳ ಸಂರಕ್ಷಣೆ ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನೈಸರ್ಗಿಕ ಜೀವ ವೈವಿಧ್ಯತೆ ನಾಶವಾದರೆ ಎಂತಹ ಅನಾಹುತ ಉಂಟಾಗುತ್ತದೆ ಎಂಬುದಕ್ಕೆ ಕೇರಳ ಹಾಗೂ ಕೊಡಗಿನಲ್ಲಿ ನಡೆದ ವಿಕೋಪಗಳು ನಮಗೆ ನಿದರ್ಶನಗಳಾಗಿವೆ ಎಂದರು.

ಶಿವಮೊಗ್ಗ ಪಶ್ಚಿಮಘಟ್ಟದ ಹೆಬ್ಬಾಗಿಲು ಜೀವ ವೈವಿಧ್ಯತೆಯ ತವರಾಗಿದೆ. ಆದರೆ ಎಂಭತ್ತರ ದಶಕದಲ್ಲಿದ್ದ ಕಾಡುಗಳು ಈಗ ಕಾಣಿಸುತ್ತಿಲ್ಲ. ಎರಡನೇ ಹಂತದ ಅರಣ್ಯಗಳು ಅಸ್ತಿತ್ವಕ್ಕೆ ಬಂದರೂ ಅವು ಹೆಚ್ಚು ವೈವಿಧ್ಯತೆಯಿಂದ ಕೂಡಿಲ್ಲ. ಎಂಪಿಎಂ ಕಾರ್ಖಾನೆಗಳಿಗೆ ಕಚ್ಚಾ ವಸ್ತು ಪೂರೈಕೆ ಮಾಡಲು ಬೆಳೆಸಿದ ಕಾಡುಗಳು ಇದಕ್ಕೆ ಕಾರಣವಿರಬಹುದು ಎಂದು ಹೇಳಿದರು.

Intro:ಶಿವಮೊಗ್ಗ,
ಭೀಮಾನಾಯ್ಕ ಎಸ್ ಶಿವಮೊಗ್ಗ
ಮಾನವನ ಹಸ್ತಕ್ಷೇಪದಿಂದ ನೈಸರ್ಗಿಕ ಜೀವ ವೈವಿಧ್ಯತೆ ಬದಲಾಗುತ್ತಿದೆ ಇದಕ್ಕೆ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದು ರಾಷ್ಟ್ರೀಯ ಮಳೆಯಾಶ್ರಿತ ಪ್ರದೇಶಗಳ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಅಶೋಕ ದಳವಾಯಿ ಆತಂಕ ವ್ಯಕ್ತಪಡಿಸಿದರು. ಶಿವಮೊಗ್ಗ ಕೃಷಿ ಹಾಗೂ ತೋಟಗಾರಿಕೆ ವಿ ವಿ ಯಲ್ಲಿ ಭವಿಷ್ಯಕ್ಕಾಗಿ ಜೀವ ವೈವಿಧ್ಯತೆ ಮತ್ತು ಸಸ್ಯ ಸಂಪನ್ಮೂಲಗಳ ಸಂರಕ್ಷಣೆ ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ನೈಸರ್ಗಿಕ ಜೀವ ವೈವಿಧ್ಯತೆ ನಾಶವಾದರೆ ಎಂತಹ ಅನಾಹುತ ಉಂಟಾ ಗುತ್ತದೆ ಎಂಬುದಕ್ಕೆ ಕೇರಳ ಹಾಗೂ ಕೊಡಗಿನಲ್ಲಿ ನಡೆದ ವಿಕೋಪಗಳು ನಮಗೆ ನಿದರ್ಶನಗಳಾಗಿವೆ ಎಂದರು.

Body:ಶಿವಮೊಗ್ಗ ಪಶ್ಚಿಮಘಟ್ಟದ ಹೆಬ್ಬಾಗಿಲು ಜೀವ ವೈವಿಧ್ಯತೆಯ ತವರಾಗಿದೆ. ಆದರೆ ಎಂಬತ್ತರ ದಶಕದಲಿದ್ದ ಕಾಡುಗಳು ಈಗ ಕಾಣಿಸುತ್ತಿಲ್ಲ .ಎರಡನೇ ಹಂತದ ಅರಣ್ಯಗಳು ಅಸ್ತಿತ್ವಕ್ಕೆ ಬಂದರೂ ಅವು ಹೆಚ್ಚು ವೈವಿಧ್ಯತೆಯಿಂದ ಕೂಡಿಲ್ಲ. ಎಂಪಿಎಂ ಕಾರ್ಖಾನೆಗಳಿಗೆ ಕಚ್ಚಾ ವಸ್ತು ಪೂರೈಕೆ ಮಾಡಲು ಬೆಳೆಸಿದ ಕಾಡುಗಳು ಇದಕ್ಕೆ ಕಾರಣವಿರಬಹುದು ಎಂದು ಹೇಳಿದರು. ಬದಲಾದ ಜೀವನಶೈಲಿ ನಾಗರಿಕತೆಯ ಆರಂಭದ ಬಳಿಕ ಕೃಷಿ ಜೀವನ ಭದ್ರತೆ ಒದಗಿಸುವ ಸಾಧನವಾಯಿತು .ಇದು ಕೂಡ ಜೀವ ವೈವಿಧ್ಯತೆಯ ಮೇಲೆ ಗಂಭೀರ ಪರಿಣಾಮ ಉಂಟುಮಾಡಿತು. ಕೃಷಿ ಉತ್ಪಾದನೆ ಹೆಚ್ಚಿತು ಆದರೆ ಅದಕ್ಕೆ ತಕ್ಕಂತೆ ಮಾರುಕಟ್ಟೆ ವಿಸ್ತರಣೆ ಆಗಲಿಲ್ಲ. ರೈತರಿಗೆ ಹೆಚ್ಚು ಆದಾಯವು ಸಿಗದಂತಾಯಿತು. ಇದರೊಂದಿಗೆ ಕೃಷಿಯ ವಿಸ್ತರಣೆಯೂ ಆಯಿತು ಎಂದು ವಿವರಿಸಿದರು.

Conclusion:ಕೃಷಿ ವೈವಿಧ್ಯತೆ ಹಾಗೂ ಸುಸ್ಥಿರ ಕೃಷಿ ಹಾಗೂ ಸಾಯುವ ಕೃಷಿ ಮೂಲಕ ಜೀವ ವೈವಿಧ್ಯತೆ ಉಳಿಸಿಕೊಳ್ಳಲು ಸಾಧ್ಯವಿದೆ.
ಈ ನಿಟ್ಟಿನಲ್ಲಿ ತಂತ್ರಜ್ಞಾನ ಹಾಗೂ ಲಭ್ಯ ಸಂಪನ್ಮೂಲಗಳ ಬಳಕೆ ಮಾಡಿಕೊಳ್ಳಬೇಕಾಗಿದೆ ಕೃಷಿ ಪಾಲಿಸಿ ಬದಲಾಗಬೇಕು. ಜನಸಮುದಾಯ ಜೀವ ವೈವಿಧ್ಯತೆಯ ಸಂರಕ್ಷಣೆಗೆ ಮುಂದಾಗಬೇಕೆಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಜೀವ ವೈವಿಧ್ಯ ಮಂಡಳಿಯ ದಕ್ಷಿಣ ಮತ್ತು ಮಧ್ಯ ಏಷ್ಯಾದ ಪ್ರತಿನಿಧಿ ಡಾ. ಎನ್ ಕೆ ಕೃಷ್ಣಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು .ಹಾಗೂ ಶಿವಮೊಗ್ಗ ಕೃಷಿ ಹಾಗೂ ತೋಟಗಾರಿಕೆ ವಿವಿ ಕುಲಪತಿ ಡಾ. ಎಂ ಕೆ ನಾಯಕ್ ಅಧ್ಯಕ್ಷತೆ ವಹಿಸಿದ್ದರು.
ಭೀಮಾನಾಯ್ಕ ಎಸ್ ಶಿವಮೊಗ್ಗ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.