ಶಿವಮೊಗ್ಗ: ಜಿಂಕೆ ಬೇಟೆಯಾಡಿ ಅಡುಗೆ ಮಾಡಿ ಊಟ ಮಾಡುತ್ತಿರುವಾಗ ಅರಣ್ಯಾಧಿಕಾರಿಗಳು ದಾಳಿ ನಡೆಸಿ, ಇಬ್ಬರನ್ನು ಬಂಧಿಸಿರುವ ಘಟನೆ ತ್ಯಾವರೆಕೊಪ್ಪದಲ್ಲಿ ನಡೆದಿದೆ.
ತ್ಯಾವರೆಕೊಪ್ಪದ ಉಮೇಶ್(52) ಹಾಗೂ ವಿರೂಪಿನಕೊಪ್ಪದ ಈಶ್ವರ್(30) ಬಂಧಿತ ಆರೋಪಿಗಳು. ವಿರೂಪಿನಕೊಪ್ಪದ ಏಳುಮಲೈ ಹಾಗೂ ಗೋವಿಂದ ಸ್ವಾಮಿ ಎಂಬ ಇಬ್ಬರು ಪರಾರಿಯಾಗಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಶಂಕರ ವಲಯ ಅರಣ್ಯಾಧಿಕಾರಿಳ ತಂಡ ವಿರೂಪಿನಕೊಪ್ಪದ ಮನೆ ಮೇಲೆ ದಾಳಿ ನಡೆಸಿದಾಗ ಜಿಂಕೆಯ ಹಸಿ ಮಾಂಸ ಹಾಗೂ ಬೇಯಿಸಿದ ಮಾಂಸ ಪತ್ತೆಯಾಗಿದ್ದು, ಜಿಂಕೆ ಚರ್ಮವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನು ದಾಳಿಯಲ್ಲಿ ವಲಯ ಅರಣ್ಯಾಧಿಕಾರಿ ಜಯೇಶ್, ಉಪ ವಲಯ ಅರಣ್ಯಾಧಿಕಾರಿ ಅಬ್ದುಲ್ ಮಜೀಬ್ ಸೇರಿದಂತೆ ಇತರೆ ಅರಣ್ಯಾಧಿಕಾರಿಗಳು ಹಾಜರಿದ್ದರು.