ಶಿವಮೊಗ್ಗ: ನಕಲಿ 500 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆ ಮಾಡಲು ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಭದ್ರಾವತಿಯ ಹಳೆ ನಗರ ಪೊಲೀಸರು ಬಂಧಿಸಿದ್ದಾರೆ.
![fake-currency seized](https://etvbharatimages.akamaized.net/etvbharat/prod-images/kn-smg-04-nakalinote-arrest-7204213_26112021190452_2611f_1637933692_217.jpg)
ಭದ್ರಾವತಿಯ ರಂಗಪ್ಪ ಸರ್ಕಲ್ ಬಳಿ ತರೀಕೆರೆಯ ನಿವಾಸಿ ಅರುಣ್ ಕುಮಾರ್(23) ಹಾಗೂ ಶಿವಮೊಗ್ಗದ ಹರಿಗೆಯ ನಿವಾಸಿ ಪ್ರೇಮ್ ರಾಜ್(23) ನೋಟು ಚಲಾವಣೆ ನಡೆಸಲು ಮುಂದಾದಾಗ ಸಿಕ್ಕಿಬಿದ್ದಿದ್ದಾರೆ.
ಆರೋಪಿಗಳಿಂದ 500 ರೂ. ಮುಖ ಬೆಲೆಯ 182 ನೋಟುಗಳು ಸೇರಿದಂತೆ ನೋಟಿನ ಪ್ರಿಂಟರ್ ಮಿಷನ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೇ, ಬಂಧಿತರ ವಿರುದ್ದ ಕಲಂ 489 (ಎ)(ಬಿ)(ಸಿ)(ಡಿ) ಸಹಿತ ಐಪಿಸಿ ಸೆಕ್ಷನ್ 34ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ವಿಡಿಯೋ ಗೇಮ್ಸ್ ಮೂಲಕ ಜೂಜು ನಡೆಸುತ್ತಿದ್ದ ಐವರನ್ನು ಬಂಧಿಸಿದ ಸಿಸಿಬಿ..