ಶಿವಮೊಗ್ಗ: ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ತ್ರಿವಳಿ ತಲಾಕ್ ನೀಡುವ ಮೂಲಕ ನನಗೆ ಹಾಗೂ ನನ್ನ ಮಗಳಿಗೆ ಅನ್ಯಾಯ ಮಾಡಿದ್ದು, ಕೂಡಲೇ ಸಂಬಂಧಪಟ್ಟವರು ನ್ಯಾಯ ದೊರಕಿಸಿಕೊಡಬೇಕೆಂದು ಸಂತ್ರಸ್ತೆ ಆಯಿಷಾ ತಮ್ಮ ಅಳಲನ್ನು ತೋಡಿಕೊಂಡರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆಯಿಷಾ, ಇಪತ್ತೊಂದು ವರ್ಷಗಳ ಕಾಲ ಸಂಸಾರ ನಡೆಸಿ ಈಗಾ ಏಕಾ ಏಕಿ ವಾಟ್ಸ್ ಆಪ್ ಮೂಲಕ ತಲಾಕ್ ನೀಡಿದ್ದಾರೆ. ಮುಸ್ತಫ್ ಬೇಗ್ ಎನ್ನುವರನ್ನ ಪ್ರೀತಿಸಿ ದೊಡ್ಡವರ ಇಚ್ಛೆಯಂತೆ ಮದುವೆ ಆಗಿದ್ದೆ, ಆ ಅವಧಿಯಲ್ಲಿ ನನಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದರು. ಅಲ್ಲದೇ ಮನೆಗೆ 6 ಸಿಸಿ ಕ್ಯಾಮರಗಳನ್ನ ಸಹ ಅಳವಡಿಸಿದ್ದರು. ಆದರೂ ನಾನು ಹೊಂದಾಣಿಕೆಯಿಂದ ಜೀವನ ನಡೆಸುತ್ತಿದ್ದೆ. ಆದರೆ ಇತ್ತೀಚೆಗೆ ದುಬೈಗೆ ಹೋಗಿದ್ದು, ಅಲ್ಲಿಂದಲೇ ನನಗೆ ತ್ರಿವಳಿ ತಲಾಕ್ ನೀಡಿದ್ದು, ನನಗೆ ಹಾಗೂ ನನ್ನ ಮಗಳಿಗೆ ತೀವ್ರ ಅನ್ಯಾಯವಾಗಿದೆಯೆಂದು ತಮ್ಮ ನೋವನ್ನು ಹೊರಹಾಕಿದರು.
ಇದರಿಂದಾಗಿ ನಮ್ಮ ಸಮುದಾಯದವರು ಕೂಡ ನಮ್ಮನ್ನ ಸೇರಿಸುತ್ತಿಲ್ಲ, ಹಾಗೂ ಅಕ್ಕಪಕ್ಕದ ಮನೆಯವರು ಮಾತನಾಡುತ್ತಿಲ್ಲ. 10 ಲಕ್ಷ ರೂಪಾಯಿ ಕೊಡುತ್ತೇನೆಂದು ಪತಿ ಹೇಳುತ್ತಿದ್ದಾರೆ, ನನಗೆ ದುಡ್ಡು ಬೇಡ ನನಗೆ ನನ್ನ ಗಂಡ ಬೇಕು ಎಂದರು. ಅಷ್ಟೇ ಅಲ್ಲದೇ, ಈ ನಡುವೆ ನನ್ನ ತಾಯಿ ಮನೆಯಿಂದಲೂ ನನಗೆ ಹಿಂಸೆಯಾಗುತ್ತಿದ್ದು, ಮಾನಸಿಕವಾಗಿ ನೊಂದಿದ್ದೇನೆ ಆದ್ದರಿಂದ ನನಗೆ ನ್ಯಾಯ ಕೊಡಿಸಕೊಡಬೇಕು. ಆ ಮೂಲಕ ನಾನು ಮತ್ತು ನನ್ನ ಮಗಳು ನೆಮ್ಮದಿಯಿಂದ ಬದುಕುವಂತೆ ಅನುಕೂಲ ಕಲ್ಪಿಸಿಕೊಡಬೇಕೆಂದು ತಮ್ಮ ಅಳಲು ತೋಡಿಕೊಂಡರು.