ಶಿವಮೊಗ್ಗ: ನಗರದಲ್ಲಿ ಕಾರಿನ ಮೇಲೆ ಮರ ಉರುಳಿ ಬಿದ್ದ ಪರಿಣಾಮ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಕಾರು ಜಖಂಗೊಂಡಿರುವ ಘಟನೆ ನಗರದ ಜೆಪಿಎನ್ ರಸ್ತೆಯಲ್ಲಿ ಸಂಭವಿಸಿದೆ. ಅದೃಷ್ಟವಶಾತ್ ಕಾರಿನಲ್ಲಿ ಯಾರೂ ಇರಲಿಲ್ಲ. ಹಾಗಾಗಿ ಭಾರಿ ಅನಾಹುತವೊಂದು ತಪ್ಪಿದೆ.
ರಸ್ತೆ ಪಕ್ಕದಲ್ಲಿ ಕಾರು ನಿಲ್ಲಿಸಿ ಶಾಪಿಂಗ್‌ಗೆ ತೆರಳಿದ್ದಾಗ ಮರ ಧರೆಗುರುಳಿದೆ. ಘಟನೆಯಿಂದಾಗಿ ಜೆಪಿಎನ್ ರಸ್ತೆಯಲ್ಲಿ ಕೆಲ ಹೊತ್ತು ವಾಹನ ಸಂಚಾರ ಸ್ಥಗಿತಗೊಂಡಿತ್ತು. ವಾಹನ ಸಂಚಾರ ನಿರ್ಬಂಧಿಸಲು ಸ್ಥಳೀಯರು ರಸ್ತೆ ಮೇಲೆ ಕಲ್ಲು ಇರಿಸಿದ್ದು ಕಂಡು ಬಂದಿತು.