ಶಿವಮೊಗ್ಗ: ರೈಲು ಗುದ್ದಿದ ಪರಿಣಾಮ ಸುಮಾರು 7 ವರ್ಷದ ಚಿರತೆ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ತಾಲೂಕು ಕೊನಗವಳ್ಳಿ ಗ್ರಾಮದ ಬಳಿ ನಡೆದಿದೆ.
![Shimoga: Cheetha caught to rail and dead](https://etvbharatimages.akamaized.net/etvbharat/prod-images/kn-smg-02-rail-chetadeath-7204213_06022020141408_0602f_1580978648_63.jpg)
ಸಿದ್ಲಿಪುರ ಕಿರು ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದೆ. ಶಿವಮೊಗ್ಗದಿಂದ ತಾಳಗುಪ್ಪಗೆ ಚಲಿಸುವ ರೈಲಿಗೆ ಸಿಲುಕಿ ನಿನ್ನೆ ರಾತ್ರಿ ಸಾವನ್ನಪ್ಪಿದೆ ಎನ್ನಲಾಗಿದ್ದು, ಇಂದು ಬೆಳಗ್ಗೆ ಚಿರತೆಯ ಶವ ಪತ್ತೆಯಾಗಿದೆ.
ಸ್ಥಳಕ್ಕೆ ಶಂಕರ ವಲಯ ಅರಣ್ಯ ವಿಭಾಗದ ಎಸ್. ಬಿ. ಪುಟ್ಟನಳ್ಳಿ, ಡಿಎಫ್ಓ ಕುಮಾರ್, ಆರ್ ಎಫ್ ಒ ಜಯೇಶ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹುಲಿ-ಸಿಂಹಧಾಮದ ವೈದ್ಯ ಸುಜಿತ್ ಹಾಗೂ ವೈದ್ಯಕೀಯ ಮಹಾವಿದ್ಯಾನಿಲಯದ ವಿದ್ಯಾರ್ಥಿಗಳು ಭೇಟಿ ನೀಡಿ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಚಿರತೆಯ ಮರಣೋತ್ತರ ಪರೀಕ್ಷೆಯ ನಂತರ ಅಲ್ಲೇ ಚಿರತೆಯ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.