ಶಿವಮೊಗ್ಗ: ಪ್ರತೀಕ್ಷಾ ತಂದೆ ಪ್ರದೀಪ್ ಬಿಎ ಪದವೀಧರರಾದ್ರೂ ಉಕ್ಕುಂದ ಗ್ರಾಮದಲ್ಲಿ ಕೂಲಿ ಕೆಲಸ ಮಾಡ್ತಿದ್ದಾರೆ. ತಾಯಿ ಸಿಂಧು ಗೃಹಿಣಿಯಾಗಿದ್ದಾರೆ. ತಾಯಿ ಮನೆಯಲ್ಲಿದ್ದಾಗ ಮಗಳಿಗೆ ಊಟ ಮಾಡಿಸುವ ವೇಳೆ, ಹೋದಕಡೆಯೆಲ್ಲಾ ತಿಂಗಳು, ವಾರ, ಗ್ರಹಗಳ, ರಾಜಧಾನಿಗಳ ಹೆಸರನ್ನು ಹೇಳಿಕೊಟ್ಟಿದ್ದಾರೆ. ಇಷ್ಟು ಸಣ್ಣ ವಯಸ್ಸಿನಲ್ಲಿ ಪ್ರತೀಕ್ಷಾ ನೆನಪಿನಲ್ಲಿಟ್ಟುಕೊಂಡು ಎಲ್ಲವನ್ನು ಪಟಪಟನೆ ಹೇಳುವ ಮೂಲಕ ಅಚ್ಚರಿಯನ್ನುಂಟು ಮಾಡುತ್ತಿದ್ದಾಳೆ.
ತನ್ನ ತೊದಲು ನುಡಿಯ ಮೂಲಕ ಸಂಡೆ, ಮಂಡೆ ಹೇಳುತ್ತಾಳೆ. ರಾಜ್ಯಗಳ ಹೆಸರನ್ನು ಹೇಳುತ್ತಿದ್ದಂತಯೇ ಅದರ ರಾಜಧಾನಿಗಳ ಹೆಸರನ್ನು ಪ್ರತೀಕ್ಷಾ ಹೇಳುತ್ತಾಳೆ. ಈಕೆಗೆ ಏನಾದರೂ ಒಮ್ಮೆ ಹೇಳಿಕೊಟ್ಟರೆ ಅದನ್ನು ಬೇಗ ತಲೆಯಲ್ಲಿ ನೆನಪಿಟ್ಟುಕೊಳ್ಳುವ ಜ್ಞಾಪಕ ಶಕ್ತಿ ಹೊಂದಿದ್ದಾಳೆ. ಇದರಿಂದ ತಾಯಿ ಸಿಂಧು ಅವರು ಪ್ರತೀಕ್ಷಾಗೆ ಎಲ್ಲಾ ಸಾಮಾನ್ಯ ಜ್ಞಾನವನ್ನು ಹೇಳಿಕೊಟ್ಟಿದ್ದಾರೆ.
ಓದಿ:ಸಾಗರದ ಗಣಪತಿ ಕೆರೆಯಲ್ಲಿ ಅಪರೂಪದ ನೀರುನಾಯಿ ಪತ್ತೆ
ತನ್ನ ಮಗಳ ಟ್ಯಾಲೆಂಟ್ ಗುರುತಿಸಿದ ತಾಯಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಗೆ ಪ್ರತೀಕ್ಷಾಳ ಜ್ಞಾಪಕ ಶಕ್ತಿಯ ಕುರಿತ ವಿಡಿಯೋ ಮಾಡಿ ವೆಬ್ಸೈಟ್ಗೆ ಕಳುಹಿಸಿಕೊಟ್ಟಿದ್ದಾರೆ. ಇದನ್ನು ನೋಡಿದ ಇಂಡಿಯಾ ಬುಕ್ ಆಫ್ ರೆಕಾರ್ಡ್ನ ಮಂಡಳಿಯು ಕೇವಲ 3 ವರ್ಷದ ಸಣ್ಣ ಮಗುವಿನ ಟ್ಯಾಲೆಂಟ್ ಗುರುತಿಸಿದೆ. ಬಾಲಕಿ ತನ್ನ ಅದ್ಭುತ ಪ್ರತಿಭೆಯನ್ನು ಪ್ರದರ್ಶಿಸಿ ಈಗ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ತನ್ನ ಹೆಸರನ್ನು ನಮೂದಿಸುವಂತೆ ಮಾಡಿದ್ದಾಳೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಸೇರ್ಪಡೆಯಾಗಿರುವುದಕ್ಕೆ ಅವರು ಸರ್ಟಿಫಿಕೇಟ್, ಮೆಡಲ್, ಪೆನ್, ಐಡಿ ಕಾರ್ಡ್ ನೀಡಿದ್ದಾರೆ. ಕೊರೊನಾ ಹಿನ್ನೆಲೆ ಎಲ್ಲವೂ ಆನ್ಲೈನ್ ಮೂಲಕವೇ ನಡೆದಿದೆ. ತನ್ನ ಮಗಳ ಸಾಧನೆ ಬಗ್ಗೆ ತಂದೆ-ತಾಯಿ ಖುಷಿ ಹಂಚಿಕೊಂಡಿದ್ದಾರೆ. ಬಡ ಕುಟುಂಬದಲ್ಲಿ ಜನಿಸಿರುವ ಪ್ರತೀಕ್ಷಾಗೆ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಓದಿಸುವ ಭರವಸೆ ನೀಡಿದ್ದಾರೆ. ಬಾಲಕಿಯ ಪ್ರತಿಭೆ ನಮಗೆಲ್ಲಾ ಆಶ್ಚರ್ಯ ತಂದಿದೆ ಎನ್ನುತ್ತಾರೆ ಗ್ರಾಮಸ್ಥರಾದ ಶಿವಕುಮಾರ್.