ETV Bharat / state

ಹುತಾತ್ಮರಾದ ಮೂವರು ರೈತರು... 37 ವರ್ಷಗಳ ನಂತರ ಸ್ಮಾರಕ ನಿರ್ಮಿಸಿದ ರೈತ ಸಂಘ - undefined

ರೈತರ ಸಮಸ್ಯೆಗಳನ್ನು ಪರಿಹರಿಸಬೇಕೆಂದು ನೂರಾರು ರೈತರು ಭದ್ರಾವತಿ ತಾಲೂಕಿನ ನಾಗಸಮುದ್ರ ಗ್ರಾಮದಲ್ಲಿ ಹೋರಾಟ ಆರಂಭಿಸಿದ್ದರು. ಆದರೆ ಹೋರಾಟ ಹಿಂಸಾಚಾರಕ್ಕೆ ತಿರುಗಿದ್ದರಿಂದ ಪೊಲೀಸರು ನಡೆಸಿದ ಗೋಲಿಬಾರ್​​ನಲ್ಲಿ ಮೂವರು ರೈತರು ಮೃತಪಟ್ಟರು. ಆ ರೈತರ ನೆನಪಿಗಾಗಿ ಇದೀಗ ನಾಗಸಮುದ್ರದ ಜನತೆ ಹಾಗೂ ರೈತ ಸಂಘದವರು 37 ವರ್ಷದ ಬಳಿಕ ರೈತರ ಸ್ಮಾರಕ ನಿರ್ಮಿಸಿದ್ದಾರೆ.

ಹುತಾತ್ಮ ರೈತರ ನೆನಪಿಗೆ ಸ್ಮಾರಕ ನಿರ್ಮಿಸಿದ ರೈತ ಸಂಘ
author img

By

Published : May 26, 2019, 11:24 PM IST

ಶಿವಮೊಗ್ಗ: ಸರಿ ಸುಮಾರು 37 ವರ್ಷಗಳ ಹಿಂದೆ ನಡೆದ ಘಟನೆ ಇದು. ರೈತರ ಸಮಸ್ಯೆಗಳನ್ನು ಈಡೇರಿಸಬೇಕು ಎಂದು ರೈತರು ರೈತ ಸಂಘದ ನೇತೃತ್ವದಲ್ಲಿ ನಾಗಸಮುದ್ರ ಗ್ರಾಮದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಅದೇ ವೇಳೆಗೆ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಅವರ ಕಾರ್ಯಕ್ರಮ ನಾಗಸಮುದ್ರಕ್ಕೆ ಸಮೀಪದ ಮಂಗೋಟೆ ಗ್ರಾಮದಲ್ಲಿ ಆಯೋಜನೆಯಾಗಿತ್ತು. ಈ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ರೈತರು ನಿರ್ಧರಿಸಿದ್ದರು.

ಇದು ತಿಳಿಯುತ್ತಿದ್ದಂತೆ ಕಾಗೋಡು ತಿಮ್ಮಪ್ಪ ಅವರ ಮಂಗೋಟೆ ಕಾರ್ಯಕ್ರಮವನ್ನು ರದ್ಧುಗೊಳಿಸಲಾಗಿತ್ತು. ಇದರಿಂದ ರೊಚ್ಚಿಗೆದ್ದ ರೈತರು ಪೊಲೀಸ್ ವಾಹನಗಳನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಲಾರಂಭಿಸಿದ್ದರು. ಆಗ ಉದ್ರಿಕ್ತಗೊಂಡಿದ್ದ ಕೆಲ ರೈತರು ಒಂದು ಪೊಲೀಸ್ ಜೀಪ್ ಹಾಗೂ ಇನ್ನೊಂದು ಪೊಲೀಸ್ ವ್ಯಾನ್​​​ಗೆ ಬೆಂಕಿ ಹಚ್ಚಿದ್ದರು. ಇದರಿಂದ ಸಿಟ್ಟಿಗೆದ್ದ ಪೊಲೀಸ್ ಇಲಾಖೆ ರೈತರ ಮೇಲೆ ಗೋಲಿಬಾರ್ ನಡೆಸಿದ್ದರಿಂದಾಗಿ ಮೂವರು ರೈತರು ಜೀವ ತೆತ್ತಿದ್ದರು.

ಹುತಾತ್ಮ ರೈತರ ನೆನಪಿಗೆ ಸ್ಮಾರಕ ನಿರ್ಮಿಸಿದ ರೈತ ಸಂಘ

ಹಿರಿಯ ಅಧಿಕಾರಿಗಳ ಅನುಮತಿ ಸಿಗುತ್ತಿದ್ದಂತೆಯೇ ರೈತರ ಮೇಲೆ ಪೊಲೀಸರು ಗುಂಡಿನ ಮಳೆಯನ್ನೇ ಸುರಿಸಿದ್ದರು. ಈ ಗುಂಡಿನ ದಾಳಿಯಲ್ಲಿ ಬಸವನಗೌಡ, ಮಲ್ಲಪ್ಪ ಎಂಬ ರೈತರು ಹಾಗೂ ನಟರಾಜ್ ಎಂಬ ವಿದ್ಯಾರ್ಥಿ ಮೃತಪಟ್ಟಿದ್ದರು. ಆದರೆ ಪೊಲೀಸರು ತಮ್ಮ ವಾಹನಗಳಿಗೆ ತಾವೇ ಬೆಂಕಿ ಹಚ್ಚಿಕೊಂಡಿದ್ದರು. ಇದನ್ನು ವಿದ್ಯಾರ್ಥಿ ನಟರಾಜ್ ನೋಡಿದ್ದರಿಂದ ಆತನಿಗೆ ಶೂಟ್ ಮಾಡಲಾಯಿತು ಎಂದು ಹೇಳುತ್ತಾರೆ ನಾಗಸಮುದ್ರದ ಗ್ರಾಮಸ್ಥರು.

ಒಟ್ಟಾರೆ ಅಂದು ಶಾಂತಿಯುತವಾಗಿ ನಡೆಯುತ್ತಿದ್ದ ರೈತರ ಹೋರಾಟ ಹಿಂಸಾರೂಪಕ್ಕೆ ತೆರಳಿತ್ತು. ಆದರೆ ಅದೇ ಸಮಯಕ್ಕೆ ತಾಳ್ಮೆ ಕಳೆದುಕೊಂಡ ಪೊಲೀಸರ ಕ್ರಮದಿಂದಾಗಿ ಮೂವರು ಅಮಾಯಕ ರೈತರ ಪ್ರಾಣಪಕ್ಷಿಯೇ ಹಾರಿ ಹೋಗಿತ್ತು. ಇದೀಗ ಈ ರೈತರ ಸ್ಮಾರಕ ನಿರ್ಮಿಸುವ ಮೂಲಕ ಹುತಾತ್ಮರಾದ ರೈತರನ್ನು ಪ್ರತಿದಿನವೂ ನೆನಪಿಸಿಕೊಳ್ಳುತ್ತಿದ್ದಾರೆ ನಾಗಸಮುದ್ರ ಗ್ರಾಮದ ರೈತರು.

Intro:ಶಿವಮೊಗ್ಗ,
ಫಾರ್ಮೆಟ್:ಸ್ಪೇಷಲ್ ಸ್ಟೋರಿ
ಸ್ಲಗ್: ಹುತಾತ್ಮ ರೈತರಿಗೆ ಸ್ಮಾರಕ ನಿರ್ಮಿಸಿದ ರೈತ ಸಂಘ.

ಆ್ಯಂಕರ್...........
ಅಂದು ರೈತ ಹೋರಾಟದಲ್ಲಿ ಪಾಲ್ಗೊಂಡಿದ್ದ ರೈತರಿಗೆ ನಮ್ಮೂರಿನಲ್ಲೊಂದು ನರಮೇಧವೇ ನಡೆಯುತ್ತದೆ ಎಂಬ ಅರಿವೇ ಇರಲಿಲ್ಲ. ರೈತರ ಸಮಸ್ಯೆಗಳನ್ನು ಪರಿಹರಿಸಬೇಕೆಂದೂ ನೂರಾರು ರೈತರು ಭದ್ರಾವತಿ ತಾಲೂಕಿನ ನಾಗಸಮುದ್ರ ಗ್ರಾಮದಲ್ಲಿ ಹೋರಾಟ ಆರಂಭಿಸಿದ್ದರು. ಆದರೆ  ಹೋರಾಟ ಹಿಂಸಾಚಾರಕ್ಕೆ ತಿರುಗಿದ್ದರಿಂದ ಪೊಲೀಸರು ನಡೆಸಿದ ಗೋಲಿಬಾರ್ ನಲ್ಲಿ ಮೂವರು ರೈತರು ಮೃತಪಟ್ಟರು. ಆ ರೈತರ ನೆನಪಿಗಾಗಿ ಇದೀಗ ನಾಗಸಮುದ್ರದ ಜನತೆ ಹಾಗೂ ರೈತ ಸಂಘದವರು 37 ವರ್ಷದ ಬಳಿಕ ರೈತರ ಸ್ಮಾರಕ ನಿರ್ಮಿಸಿದ್ದಾರೆ.

ವಾಯ್ಸ್ ಓವರ್ ........1
ರೈತರ ಸಮಸ್ಯೆಗಳನ್ನು ಈಡೇರಿಸಬೇಕು ಎಂದು ರೈತರು ರೈತ ಸಂಘದ ನೇತೃತ್ವದಲ್ಲಿ ನಾಗಸಮುದ್ರ ಗ್ರಾಮದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಅದೇ ವೇಳೆಗೆ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಅವರ ಕಾರ್ಯಕ್ರಮ ನಾಗಸಮುದ್ರಕ್ಕೆ ಸಮೀಪದ ಮಂಗೋಟೆ ಗ್ರಾಮದಲ್ಲಿ ಆಯೋಜನೆಯಾಗಿತ್ತು. ಈ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ರೈತರು ನಿರ್ಧರಿಸಿದ್ದರು. ಇದು ತಿಳಿಯುತ್ತಿದ್ದಂತೆ ಕಾಗೋಡು ತಿಮ್ಮಪ್ಪ ಅವರ ಮಂಗೋಟೆ ಕಾರ್ಯಕ್ರಮವನ್ನು ರದ್ಧುಗೊಳಿಸಲಾಗಿತ್ತು. ಇದರಿಂದ ರೊಚ್ಚಿಗೆದ್ದ ರೈತರು ಪೊಲೀಸ್ ವಾಹನಗಳನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಲಾರಂಭಿಸಿದ್ದರು. ಆಗ ಉದ್ರಿಕ್ತಗೊಂಡಿದ್ದ ಕೆಲ ರೈತರು ಒಂದು ಪೊಲೀಸ್ ಜೀಪ್ ಹಾಗೂ ಇನ್ನೊಂದು ಪೊಲೀಸ್ ವ್ಯಾನ್ ಗೆ ಬೆಂಕಿ ಹಚ್ಚಿದ್ದರು. ಇದರಿಂದ ಸಿಟ್ಟಿಗೆದ್ದ ಪೊಲೀಸ್ ಇಲಾಖೆ ರೈತರ ಮೇಲೆ ಗೊಲೀಬಾರ್ ನಡೆಸಿದ್ದರಿಂದಾಗಿ ಮೂವರು ರೈತರು ಜೀವವನ್ನೇ ತೆತ್ತಿದ್ದರು.
ಬೈಟ್ ..1:
ತೇಜಪ್ಪ : ಗೋಲಿಬಾರ್ ನಲ್ಲಿ ಮೃತಪಟ್ಟ ಮಲ್ಲಪನ ಮಗ

Body:ವಾಯ್ಸ್ ಓವರ್ ........2
ಅದು 1982ರ ಮೇ 25 ರಂದು ನಾಗಸಮುದ್ರ ಗ್ರಾಮದಲ್ಲಿ ರಕ್ತದೋಕುಳಿಯೇ ಹರಿದಿತ್ತು. ಪೊಲೀಸ್ ವಾಹನಗಳಿಗೆ ಯಾವಾಗ ಬೆಂಕಿ ಬಿತ್ತೋ ಆಗ ಪೊಲೀಸರು ಕೆರಳಿಬಿಟ್ಟಿದ್ದರು. ಹಿರಿಯ ಅಧಿಕಾರಿಗಳ ಅನುಮತಿ ಸಿಗುತ್ತಿದ್ದಂಯೆ ರೈತರ ಮೇಲೆ ಗುಂಡಿನ ಮಳೆಯನ್ನೇ ಸುರಿಸಿದ್ದರು. ಈ ಗುಂಡಿನ ದಾಳಿಯಲ್ಲಿ ಬಸವನಗೌಡ, ಮಲ್ಲಪ್ಪ ಎಂಬ ರೈತರು ಹಾಗೂ ನಟರಾಜ್ ಎಂಬ ವಿದ್ಯಾರ್ಥಿ ಮೃತಪಟ್ಟಿದ್ದರು. ಪೊಲೀಸರು ತಮ್ಮ ವಾಹನಗಳಿಗೆ ತಾವೆ ಬೆಂಕಿ ಹಚ್ಚಿಕೊಂಡಿದ್ದರು. ಇದನ್ನು ವಿದ್ಯಾರ್ಥಿ ನಟರಾಜ್ ನೋಡಿದ್ದರಿಂದ ಆತನಿಗೆ ಶೂಟ್ ಮಾಡಲಾಯಿತು ಎಂದು ಹೇಳುತ್ತಾರೆ ನಾಗಸಮುದ್ರದ ಗ್ರಾಮಸ್ಥರು.
ಬೈಟ್ ..2:
ಪಾರ್ವತಮ್ಮ : ಹುತಾತ್ಮ ರೈತ ಬಸವನಗೌಡ ತಾಯಿ

Conclusion:ಕನ್ ಕ್ಲೂಷನ್........
ಒಟ್ಟಾರೆ ಅಂದು ಶಾಂತಿಯುತವಾಗಿ ನಡೆಯುತ್ತಿದ್ದ ರೈತರ ಹೋರಾಟ ಹಿಂಸಾರೂಪಕ್ಕೆ ತೆರಳಿತ್ತು. ಆದರೆ ಅದೇ ಸಮಯಕ್ಕೆ ತಾಳ್ಮೆ ಕಳೆದುಕೊಂಡ ಪೊಲೀಸರ ಕ್ರಮದಿಂದಾಗಿ ಮೂವರು ಅಮಾಯಕ ರೈತರ ಪ್ರಾಣಪಕ್ಷಿಯೇ ಹಾಕಿಹೋಗಿತ್ತು. ಇದೀಗ ಈ ರೈತರ ಸ್ಮಾರಕ ನಿರ್ಮಿಸುವ ಮೂಲಕ ಹುತಾತ್ಮರಾದ ರೈತರನ್ನು ಪ್ರತಿದಿನವೂ ನೆನಪಿಸಿಕೊಳ್ಳುತ್ತಿದ್ದಾರೆ ನಾಗಸಮುದ್ರ ಗ್ರಾಮದ ರೈತರು.

ಬೈಟ್: ಕೋಡಿಹಳ್ಳಿ ಚಂದ್ರಶೇಖರ್ ರಾಜ್ಯ ರೈತ ಸಂಘದ ಅಧ್ಯಕ್ಷ ರು
ಬೈಟ್: ಹೆಚ್ .ಆರ್ ಬಸವರಾಜಪ್ಪ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷರು
ಬೈಟ್: ಬಸವನಗೌಡ ಹುತಾತ್ಮ ನಟರಾಜನ ಗೆಳೆಯ

ಭೀಮಾನಾಯ್ಕ ಎಸ್ ಶಿವಮೊಗ್ಗ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.