ETV Bharat / state

ಈ ಬಾರಿ ನನ್ನ ತಂದೆ-ತಾಯಿಯ ಆಶೀರ್ವಾದವಿದೆ: ಗೆಲ್ಲುವುದು ಖಚಿತವೆಂದ 'ಹೆಲಿಕಾಪ್ಟರ್​​ ಮ್ಯಾನ್​​'​

ಇತ್ತೀಚೆಗೆ ವಿಭಿನ್ನ ಹಾಗೂ ನೂತನ ರೀತಿಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದ ವಿನಯ್‌ ರಾಜಾವತ್, ಈ ಬಾರಿ ತಂದೆ-ತಾಯಿಯ ಆಶೀರ್ವಾದ ಪಡೆದಿದ್ದು ಗೆಲುವು ನನ್ನದೇ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ವಿನಯ್‌ ರಾಜಾವತ್
author img

By

Published : Apr 11, 2019, 4:33 PM IST

ಶಿವಮೊಗ್ಗ: ಈ ಬಾರೀಯ ಲೋಕಸಭಾ ಚುನಾವಣೆಯಲ್ಲಿ ಗೆಲುವು ನನ್ನದೇ ಎಂದು ಸ್ವತಂತ್ರ ಅಭ್ಯರ್ಥಿ ವಿನಯ್ ರಾಜಾವತ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ಹಾಗಾಗಿ ಸ್ವತಂತ್ರವಾಗಿ ಹಾರಾಡುವ ಹೆಲಿಕಾಪ್ಟರ್​ ಗುರುತಿಗೆ ಮತ ನೀಡುವ ಮೂಲಕ ನಿಮ್ಮ ಸೇವೆ ಮಾಡಲು ಅವಕಾಶ ನೀಡಿ ಎಂದು ಮನವಿ ಮಾಡಿಕೊಂಡರು.

ಹಣ-ಹೆಂಡ ಆಮಿಷದ ಮೂಲಕ ಚುನಾವಣೆ ನಡೆಸುವುದು ಇತ್ತೀಚಿನ ರಾಜಕೀಯ ವ್ಯವಸ್ಥೆಯಾಗಿಬಿಟ್ಟಿದೆ. ಹಾಗಾಗಿ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ಮನವಿಯನ್ನು ಸಹ ಮಾಡಿದ್ದೇನೆ. ಎಲ್ಲಾ ಅಭ್ಯರ್ಥಿಗಳು ಜನರ ಮುಂದೆ ಬಂದು ಹಣ-ಹೆಂಡ ಹಂಚಿ ಚುನಾವಣೆ ನಡೆಸುವುದಿಲ್ಲ ಎಂದು ಪ್ರಮಾಣವಚನ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇನೆ. ಕಳೆದ ಬಾರಿ ಚುನಾವಣೆಯಲ್ಲಿ ನನಗಾಗಿರುವ ನೋವು ಯಾವ ಯುವಕ-ಯುವತಿಯರಿಗೂ ಆಗಬಾರದು ಎನ್ನುವ ಉದ್ದೇಶದಿಂದ ಹೇಳುತ್ತಿದ್ದೇನೆ. ನಿಮ್ಮ ಸೇವೆ ಮಾಡುವರಿಗೆ ಮಾತ್ರ ಮತ ನೀಡಿ ಎಂದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ವಿನಯ್‌ ರಾಜಾವತ್

ಕಳೆದ ಬಾರಿ ಚುನಾವಣೆಯಲ್ಲಿ ಹೆಲಿಕಾಪ್ಟರ್​ ಮೂಲಕ ಬಂದು ನಾಮಪತ್ರ ಸಲ್ಲಿಸಿದ್ದಕ್ಕೆ ಕೆಲವೊಂದು ಪತ್ರಿಕೆಗಳು ಶೋಕಿ ಮಾಡಲು ಚುನಾವಣೆ ಮಾಡುತ್ತಿದ್ದಾರೆ ಎಂದು ಬರೆದಿದ್ದರು. ರಾಜರು, ಪ್ರಧಾನಮಂತ್ರಿಗಳು, ಕೆಲ ಸಚಿವರು, ಶಾಸಕರು ಸಹ ಹೆಲಿಕಾಪ್ಟರ್​ನಲ್ಲಿಯೇ ಓಡಾಡುತ್ತಾರೆ. ಅವರ ಬಗ್ಗೆ ಏಕೆ ಬರೆಯುವುದಿಲ್ಲ ಎಂದು ಪ್ರಶ್ನಿಸಿದರು.

ರಾಷ್ಟ್ರಿಯ ಪಕ್ಷಗಳವರು ರಾಜಕಾರಣ ಮಾಡಲು ಬಂದಿದ್ದಾರೆ ಹೊರತು ಜನರ ಸೇವೆ ಮಾಡಲು ಬಂದಿಲ್ಲ. ಹಾಗಾಗಿ ಜಿಲ್ಲೆಯ ಪ್ರಜ್ಞಾವಂತ ಮತದಾರರು ಒಂದು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನ್ನ ತಂದೆ-ತಾಯಿಯ ಆಶೀರ್ವಾದ ಪಡೆದಿರಲಿಲ್ಲ. ಹಾಗಾಗಿ ಸೋತಿದ್ದೆ. ಆದರೆ, ಈ ಬಾರಿ ಆಶೀರ್ವಾದ ಪಡೆದಿದ್ದೇನೆ. ಗೆಲ್ಲುವುದು ಖಚಿತ ಎಂದರು.

Intro:ಶಿವಮೊಗ್ಗ,
ಈ ಭಾರೀಯ ಲೋಕಸಭಾ ಚುನಾವಣೆ ಯಲ್ಲಿ ಗೆಲವು ನನ್ನದೇ ಸ್ವತಂತ್ರ ಅಭ್ಯರ್ಥಿ ವಿನಯ್ ರಾಜಾವತ್ ಆತ್ಮವಿಶ್ವಾಸ.

Body:ಸುದ್ದಿಗೊಷ್ಟಿ ನಡೆಸಿ ಮಾತನಾಡಿದ ಅವರು ಈ ಬಾರಿ ಲೋಕಸಭಾ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ .
ಹಾಗಾಗಿ ಸ್ವತಂತ್ರವಾಗಿ ಹಾರುವ ಹೆಲಿಕ್ಯಾಪ್ಟರ್ ಗುರುತಿಗೆ ಮತ ನೀಡುವ ಮೂಲಕ ನಿಮ್ಮಗಳ ಸೇವೆ ಮಾಡಲು ಅವಕಾಶ ನೀಡಿ ಎಂದು ಮನವಿ ಮಾಡಿಕೊಂಡರು.
ಇವತ್ತಿನ ರಾಜಕೀಯ ವಾಸ್ತವ ಏನೆಂದರೆ ಹಣ-ಹೆಂಡ ಆಮಿಷದ ಮೂಲಕ ಚುನಾವಣೆ ಮಾಡುತ್ತಿದ್ದಾರೆ .
ಹಾಗಾಗಿ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ಮನವಿಯನ್ನು ಸಹ ಮಾಡಿದ್ದೇನೆ ಎಲ್ಲಾ ಅಭ್ಯರ್ಥಿಗಳು ಜನರ ಮುಂದೆ ಬಂದು ಹಣ ,ಹೆಂಡ ಹಂಚಿ ಚುನಾವಣೆ ನಡೆಸುವುದಿಲ್ಲ ಎಂದು ಪ್ರಮಾಣವಚನ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇನೆ.
ಕಳೆದ ಬಾರಿ ಚುನಾವಣೆಯಲ್ಲಿ ನನಗಾಗಿರುವ ನೋವು ಯಾವ ಯುವಕ-ಯುವತಿಯರಿಗೆ ಆಗಬಾರದು ಎನ್ನುವ ಉದ್ದೇಶದಿಂದ ಹೇಳುತ್ತಿದ್ದೇನೆ ಹಣ ,ಹೆಂಡ ಹಂಚಿ ಚುನಾವಣೆ ಮಾಡುವರಿಗೆ ಮತ ನೀಡಬೇಡಿ ನಿಮ್ಮಗಳ ಸೇವೆ ಮಾಡುವರಿಗೆ ಮತ ನೀಡಿ ಎಂದರು.

Conclusion:ಕಳೆದ ಬಾರಿ ಚುನಾವಣೆಯಲ್ಲಿ ಹೆಲಿಕ್ಯಾಪ್ಟರ್ ಮೂಲಕ ಬಂದು ನಾಮಪತ್ರ ಸಲ್ಲಿಸಿದ್ದಕ್ಕೆ ಕೆಲವೊಂದು ಪತ್ರಿಕೆಗಳು ಶೋಕಿ ಮಾಡಲು ಚುನಾವಣೆ ಮಾಡುತ್ತಿದ್ದಾರೆ ಎಂದು ಬರೆದಿದ್ದರು. ನನ್ನ ಬಗ್ಗೆ ಬರೆಯುವುದೆಯಾದರೆ ರಾಜರು ,ಪ್ರಧಾನ ಮಂತ್ರಿಗಳು ,ಯಡಿಯೂರಪ್ಪನವರು ,ಡಿ.ಕೆ ಶಿವಕುಮಾರ್ ಅವರು ಸಹ ಹೆಲಿಕ್ಯಾಪ್ಟರ್ ನಲ್ಲಿ ತಾನೆ ಓಡಾಡುವುದು ಅವರ ಬಗ್ಗೆ ಯಾಕೆ ಮಾಡುವುದಿಲ್ಲ ಎಂದು ಪ್ರಶ್ನಿಸಿದರು.
ರಾಷ್ಟ್ರಿಯ ಪಕ್ಷಗಳು ರಾಜಕಾರಣ ಮಾಡಲು ಬಂದಿದ್ದಾರೆ ಹೊರತು ಜನರ ಸೇವೆ ಮಾಡಲು ಬಂದಿಲ್ಲ.
ಹಾಗಾಗಿ ಜಿಲ್ಲೆಯ ಪ್ರಜ್ಞಾವಂತ ಮತದಾರರು ಒಂದು ಅವಕಾಶ ಮಾಡಿಕೊಡಿ ನಿಮ್ಮಗಳ ಸೇವೆ ಮಾಡುತ್ತೆನೆ ಎಂದರು.
ಕಳೆದ ವಿಧಾನ ಸಭೆ ಚುನಾವಣೆ ಯಲ್ಲಿ ನನ್ನ ತಂದೆ ತಾಯಿ ಆಶಿರ್ವಾದ ಪಡೆದಿರಲಿಲ್ಲ ಹಾಗಾಗಿ ಸೋತಿದ್ದೆ ಆದರೆ ಈ ಭಾರಿ ಆಶಿರ್ವಾದ ಪಡೆದಿದ್ದೆನೆ ಗೆಲುತ್ತೆನೆ ಅಷ್ಟೇ ಎಂದರು.

ಭೀಮಾನಾಯ್ಕ ಎಸ್ ಶಿವಮೊಗ್ಗ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.