ಶಿವಮೊಗ್ಗ: ಮಾಜಿ ಸಿಎಂ ಸಿದ್ದರಾಮಯ್ಯನೇ ಒಬ್ಬ ಅಲೆಮಾರಿ, ಯಾವ ಪಕ್ಷದಲ್ಲಿ ಇದ್ದರೂ ಅಧಿಕಾರ ಬೇಕು. ಇವರೊಬ್ಬ ಅಧಿಕಾರ ದಾಹಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಗೃಹ ಕಚೇರಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯಗೆ ಯಾವ ಪಕ್ಷದಲ್ಲಿದ್ದರೂ ಇವರಿಗೆ ವಿಪಕ್ಷನಾಯಕ ಸ್ಥಾನ ಇರಬೇಕು, ಇಲ್ಲ ಸಿಎಂ ಸ್ಥಾನ ಬೇಕು. ಈ ಅಲೆಮಾರಿಗೆ ಆರ್ಎಸ್ಎಸ್ ಬಗ್ಗೆ ಕಲ್ಪನೆ ಇಲ್ಲ ಎಂದರು.
ಹಿಂದೆ ಚಾಮುಂಡೇಶ್ವರಿಯಲ್ಲಿ ನಿಂತಿದ್ರು, ಈಗ ಬದಾಮಿಗೆ ಹೋಗಿದ್ದಾರೆ. ಮುಂದೆ ಎಲ್ಲಿ ಹೋಗ್ತಾರೋ ಗೂತ್ತಿಲ್ಲ. ಸಿದ್ದರಾಮಯ್ಯ ಆರ್ಎಸ್ಎಸ್ ಮತ್ತು ಮೋದಿ ಬಗ್ಗೆ ಮಾತನಾಡಿದ್ದಾರೆ. ಸಿದ್ದರಾಮಯ್ಯ ಎಚ್ಚರ ತಪ್ಪಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಯಾವ ಲೆಕ್ಕ. ಪ್ರಧಾನಿ ನೆಹರು ಹಾಗೂ ಇವರಿಗೂ ಹೋಲಿಕೆಯೇ ಇಲ್ಲ ಎಂದಿದ್ದಾರೆ.
ನೆಹರು ಆಕಾಶ ಮೋದಿ ಭೂಮಿ ಎಂದು ಹೋಲಿಕೆ ಮಾಡಿದ್ದಾರೆ. ನೆಹರು ಕಾಲದಲ್ಲಿ ಭಾರತದ ವಿರುದ್ಧವಾಗಿ ಪಾಕಿಸ್ತಾನದ ಪರ ಎಲ್ಲ ದೇಶಗಳು ಇದ್ದವು. ಆದರೆ, ಇಂದು ಮೋದಿ ಕಾಲದಲ್ಲಿ ಎಲ್ಲವೂ ಬದಲಾಗಿದೆ. ಇಡೀ ವಿಶ್ವವೇ ಇಂದು ಭಾರತವನ್ನು ಮೆಚ್ಚಿಕೊಂಡಿದ್ದು, ಪಾಕಿಸ್ತಾನದ ವಿರುದ್ಧ ಭಾರತದ ಪರವಾಗಿ ನಿಂತಿವೆ ಎಂದು ಹೊಗಳಿದರು.
ನೆಹರು ಮತ್ತು ಅವರ ಕಾಂಗ್ರೆಸ್ನ ನಾಯಕರು ದೇಶವನ್ನು ವಿಭಾಗ ಮಾಡಿದ್ರು, ಅಧಿಕಾರದ ಆಸೆಗೆ ಭಾರತಾಂಬೆಯನ್ನು ತುಂಡು ಮಾಡಿದರು. ಪಾಕಿಸ್ತಾನ, ಹಿಂದೂಸ್ತಾನ ಎಂದು ದೇಶವನ್ನು ಬೇರೆ ಬೇರೆ ಮಾಡಿದರು. ಮೋದಿ ಪ್ರಧಾನಿಯಾದ ಮೇಲೆ ಕಾಶ್ಮೀರವನ್ನು ಒಟ್ಟುಗೂಡಿಸಿದರು ಎಂದು ಹೇಳಿದರು.
ನಾವೆಲ್ಲರೂ ಆರ್ಎಸ್ಎಸ್ ಕಾರ್ಯಕರ್ತರು. ಇಲ್ಲಿ ಹುಟ್ಟಿ ಬೆಳೆದ ನಾವು ಭಾರತೀಯರಲ್ಲವಾ? ಆರ್ಎಸ್ಎಸ್ ರಾಷ್ಟ್ರ ಭಕ್ತಿ, ಸಂಸ್ಕೃತಿಯ ಪರವಾಗಿ ಕೆಲಸ ಮಾಡುವ ಸಂಘಟನೆಯಾಗಿದೆ. ಇಂದು ದೇಶ ಹಾಗೂ ರಾಜ್ಯದಲ್ಲಿ ಅನೇಕ ನಾಯಕರು ಆರ್ಎಸ್ಎಸ್ ನಿಂದ ಬಂದವರಿದ್ದಾರೆ. ಪ್ರಧಾನಿ, ಗೃಹಮಂತ್ರಿ, ಉಪ ರಾಷ್ಟ್ರಪತಿ ಸೇರಿದಂತೆ ಹಲವು ರಾಷ್ಟ್ರಗಳ ಸಿಎಂ ಆರ್ಎಸ್ಎಸ್ ಹಿನ್ನೆಲೆಯವರೇ ಆಗಿದ್ದಾರೆ. ದೇಶ ಹಾಗೂ ರಾಜ್ಯವನ್ನು ಸಮರ್ಥವಾಗಿ ಮುನ್ನೆಡಸುತ್ತಿದ್ದಾರೆ. ಇವರಂತೆ ವಿದೇಶಿ ವ್ಯಕ್ತಿಗಳ ಸೆರಗು ಹಿಡಿದು ಓಡಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಮೊದಲು ದೇಶದ ಜನರ ಕ್ಷಮೆ ಕೇಳಬೇಕು. ಇನ್ನೆಂದೂ ಈ ರೀತಿಯಾಗಿ ಅವರು ಮಾತನಾಡಬಾರದು. ಆರ್ಎಸ್ಎಸ್ ಬಗ್ಗೆ ಮಾತನಾಡಲು ಸಿದ್ಧರಾಮಯ್ಯರಿಗೆ ಯೋಗ್ಯತೆ ಇಲ್ಲ, ಅವರು ಅಯೋಗ್ಯರು ಎಂದು ತೀವ್ರವಾಗಿ ಟೀಕೆ ಮಾಡಿದರು.
ಇದನ್ನೂ ಓದಿ: ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್‌ವೇ ಶೀಘ್ರದಲ್ಲೇ ಪ್ರಾರಂಭ: ಪ್ರಯಾಣದ ಅವಧಿ 2 ಗಂಟೆ ಉಳಿತಾಯ ಸಾಧ್ಯತೆ