ETV Bharat / state

ಶಿವಮೊಗ್ಗದಿಂದ ಓಡಲಿವೆ ಮತ್ತೆರಡು ಹೆಚ್ಚುವರಿ ಟ್ರೈನ್!

ಶಿವಮೊಗ್ಗ ಟೌನ್​ನಿಂದ ಬೆಂಗಳೂರು ಹಾಗೂ ತಿರುಪತಿಯ ರೇಣಿಗುಂಟಾ ತತ್ಕಾಲ್ ವಿಶೇಷ ಎಕ್ಸ್‌ಪ್ರೆಸ್‌ ರೈಲುಗಳು ಪ್ರಾರಂಭವಾಗಿದ್ದು, ಇಂದಿನಿಂದ ಶಿವಮೊಗ್ಗ - ಯಶವಂತಪುರ ರೈಲು ವಾರದಲ್ಲಿ ನಾಲ್ಕು ದಿನ ಓಡಾಡಲಿದೆ.

ಶಿವಮೊಗ್ಗದಿಂದ ಓಡಾಡಲಿವೆ ಮತ್ತೆರಡು ಹೆಚ್ಚುವರಿ ರೈಲುಗಳು
There are two additional trains strarted from Shimoga
author img

By

Published : Jan 23, 2020, 11:04 PM IST

ಶಿವಮೊಗ್ಗ : ಟೌನ್​ನಿಂದ ಬೆಂಗಳೂರು ಹಾಗೂ ತಿರುಪತಿಯ ರೇಣಿಗುಂಟಾ ತತ್ಕಾಲ್ ವಿಶೇಷ ಎಕ್ಸ್‌ಪ್ರೆಸ್‌ ರೈಲುಗಳಿಗೆ ಸಂಸದ ಬಿ.ವೈ.ರಾಘವೇಂದ್ರ ಚಾಲನೆ ನೀಡಿದರು.

ವಿಶೇಷ ಎಕ್ಸ್‌ಪ್ರೆಸ್‌ ರೈಲುಗಳಿಗೆ ಸಂಸದ ಬಿ.ವೈ.ರಾಘವೇಂದ್ರ ಚಾಲನೆ

ನಗರದ ಮುಖ್ಯ ರೈಲು ನಿಲ್ದಾಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ವಿಶೇಷ ರೈಲುಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಇಂದಿನಿಂದ ಶಿವಮೊಗ್ಗ ಟೌನ್​ನಿಂದ - ಯಶವಂತಪುರ ರೈಲು ವಾರದಲ್ಲಿ ನಾಲ್ಕು ದಿನ ಓಡಾಡಲಿದೆ. ಶಿವಮೊಗ್ಗ ಟೌನ್- ರೇಣಿಗುಂಟಾ- ಶಿವಮೊಗ್ಗ ಟೌನ್ ರೈಲು ಇಷ್ಟು ದಿನ ವಾರದಲ್ಲಿ ಒಂದು ದಿನ ಮಾತ್ರ ಸಂಚರಿಸುತ್ತಿತ್ತು. ಇಂದಿನಿಂದ ರೈಲು ವಾರದಲ್ಲಿ ಎರಡು ದಿನ ಓಡಾಡಲಿದೆ. ಹೀಗಾಗಿ ಶಿವಮೊಗ್ಗದಿಂದ ಬೆಂಗಳೂರಿಗೆ ಹಾಗೂ ತಿರುಪತಿಯ ರೇಣಿಗುಂಟಾಗೆ ಹೆಚ್ಚುವರಿ ರೈಲು ಸಂಚರಿಸಲಿದ್ದು, ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದರು.

ಈ ವೇಳೆ, ಎಂಎಲ್ಸಿ ಆಯನೂರು ಮಂಜುನಾಥ್, ಎಸ್.ರುದ್ರೇಗೌಡ, ಡಿಸಿ ಕೆ.ಬಿ.ಶಿವಕುಮಾರ್, ಎಸ್ಪಿ ಶಾಂತರಾಜು ಸೇರಿದಂತೆ ರೈಲ್ವೆ ಅಧಿಕಾರಿಗಳು ಭಾಗಿಯಾಗಿದ್ದರು

Intro:ಶಿವಮೊಗ್ಗದಿಂದ ಮತ್ತೆರಡು ಹೆಚ್ಚುವರಿ ರೈಲು ಪ್ರಾರಂಭ, ರೈಲುಗಳ ಸದುಪಯೋಗಪಡೆದುಕೊಳ್ಳಿ: ಸಂಸದ ರಾಘವೇಂದ್ರ.

ಶಿವಮೊಗ್ಗ : ಶಿವಮೊಗ್ಗ ಟೌನ್ ನಿಂದ ಬೆಂಗಳೂರು ಹಾಗೂ ತಿರುಪತಿಯ ರೇಣಿಗುಂಟಾ ತತ್ಕಾಲ್ ವಿಶೇಷ ಎಕ್ಸ್‌ಪ್ರೆಸ್‌ ರೈಲುಗಳಿಗೆ ಸಂಸದ ಬಿ.ವೈ.ರಾಘವೇಂದ್ರ ರವರು ಚಾಲನೆ ನೀಡಿದರು. ಶಿವಮೊಗ್ಗದ ಮುಖ್ಯ ರೈಲು ನಿಲ್ದಾಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ದೀಪ ಬೆಳಗಿಸುವ ಮೂಲಕ ವಿಶೇಷ ರೈಲುಗಳಿಗೆ ಚಾಲನೆ ನೀಡಿದರು. ಇಂದಿನಿಂದ ಶಿವಮೊಗ್ಗ ಟೌನ್ ನಿಂದ - ಯಶವಂತಪುರ ರೈಲು ವಾರದಲ್ಲಿ ನಾಲ್ಕು ದಿನ ಓಡಲಿದೆ. ಶಿವಮೊಗ್ಗ ಟೌನ್- ರೇಣಿಗುಂಟಾ- ಶಿವಮೊಗ್ಗ ಟೌನ್ ರೈಲು ಇಷ್ಟು ದಿನ ವಾರದಲ್ಲಿ ಒಂದು ದಿನ ಮಾತ್ರ ಓಡಾಡುತ್ತಿತ್ತು. ಇಂದಿನಿಂದ ರೈಲು ವಾರದಲ್ಲಿ ಎರಡು ದಿನ ಓಡಾಡಲಿದೆ. ಇದರಿಂದ ಶಿವಮೊಗ್ಗದಿಂದ ಬೆಂಗಳೂರಿಗೆ ಹಾಗೂ ತಿರುಪತಿಯ ರೇಣಿಗುಂಟಾಗೆ ಹೆಚ್ಚುವರಿ ರೈಲು ಪ್ರಯಾಣಿಕರಿಗೆ ದೂರೆಯಲಿದೆ. ಶಿವಮೊಗ್ಗ ದಿಂದ ಬೆಂಗಳೂರು, ಮೈಸೂರು ಸೇರಿ ಒಟ್ಟು 32 ಟ್ರೀಪ್ ರೈಲು ಶಿವಮೊಗ್ಗಕ್ಕೆ ರೈಲು ಬಂದು ಹೋಗುತ್ತಿವೆ.Body:ಶಿವಮೊಗ್ಗ ದಿಂದ ಹೊರಡುವ ರೈಲುಗಳನ್ನು ಹೆಚ್ಚು ಬಳಸಿಕೊಂಡು ಇಲ್ಲಿಯೇ ಉಳಿಯುವಂತೆ ನೋಡಿ ಕೊಳ್ಳಬೇಕು ಎಂದು ಪ್ರಯಾಣಿಕರಲ್ಲಿ ವಿನಂತಿ ಮಾಡಿಕೊಂಡರು. ರೈಲ್ವೆ ಇಲಾಖೆಯು ರೈಲು ಓಡಾಡುವ ಬಗ್ಗೆ ಪ್ರಚಾರ ನಡೆಸಬೇಕಿದೆ. ಆಗ ರೈಲ್ವೆ ಇಲಾಖೆಗೆ ಹೆಚ್ಚು ಆದಾಯ ಬರುತ್ತದೆ ಬರಲು ಸಾಧ್ಯ ಎಂದರು. ಶಿವಮೊಗ್ಗದ ರೈಲು ನಿಲ್ದಾಣದ ಮುಂದಿನ ರಿಂಗ್ ರೋಡ್ ಅಭಿವೃದ್ದಿಗೆ 20 ಕೋಟಿ ರೂ ಮಂಜೂರು ಮಾಡಲಾಗಿದೆ. ಶಿವಮೊಗ್ಗದ ವಿದ್ಯಾನಗರದ, ಸವಳಂಗ ರಸ್ತೆಯಲ್ಲಿ, ಕಾಶಿಪುರದ ಬಳಿ ಹಾಗೂ ಭದ್ರಾವತಿಯ ಕಡದಕಟ್ಟೆ ಬಳಿ ಒಟ್ಟು ನಾಲ್ಕು ಮೇಲ್ಸೆತುವೆಗಳು ಕಾಮಗಾರಿ‌ ಅದಷ್ಟು ಬೇಗ ನಡೆಯಲಿದೆ ಎಂದರು. ಕಾರ್ಯಕ್ರಮದ ನಂತ್ರ ಸಂಸದರು ರೈಲಿಗೆ ಹಸಿರು ನಿಶಾಸೆ ತೋರಿಸಿದರು.Conclusion:ಈ ವೇಳೆ ರೈಲ್ವೆ ನಿಲ್ದಾಣದ ಮುಂಭಾಗದ 150 ಅಡಿ ಎತ್ತರದ ರಾಷ್ಟ್ರಧ್ವಜವನ್ನು ಅನಾವರಣಗೊಳಿಸಿದರು. ಇದರಲ್ಲಿ ರಾಷ್ಟ್ರಧ್ವಜದ ಕಂಬ ನೂರು ಅಡಿ ಎತ್ತರವಿದ್ದು, ರಾಷ್ಟ್ರಧ್ವಜ 10 ಅಡಿ ಎತ್ತರ ಹಾಗೂ 20 ಅಡಿ ಉದ್ದವಿದೆ. ಈ ವೇಳೆ ಎಂಎಲ್ಸಿ ಆಯನೂರು ಮಂಜುನಾಥ್, ಎಸ್.ರುದ್ರೇಗೌಡ, ಡಿಸಿ ಕೆ.ಬಿ.ಶಿವಕುಮಾರ್, ಎಸ್ಪಿ ಶಾಂತರಾಜು ಸೇರಿದಂತೆ ರೈಲ್ವೆ ಅಧಿಕಾರದ ಗಳು ಭಾಗಿಯಾಗಿದ್ದರು.

ಬೈಟ್: ಬಿ.ವೈ.ರಾಘವೇಂದ್ರ. ಸಂಸದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.