ETV Bharat / state

ಕಾಂಗ್ರೆಸ್ ಪಕ್ಷ ಮುಳುಗಿ ಹೋಗುವ ಹಡಗು: ಸಚಿವ ಈಶ್ವರಪ್ಪ

ಕಾಂಗ್ರೆಸ್ ಪಕ್ಷ ದೇಶದಲ್ಲಿ ಒಡೆದ ಕನ್ನಡಿಯಾಗಿದೆ. ಕಾಂಗ್ರೆಸ್ ಪಕ್ಷವನ್ನು ಇನ್ನೊಮ್ಮೆ ಒಟ್ಟಿಗೆ ಸೇರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಈಶ್ವರಪ್ಪ ಹೇಳಿದರು.

ಸಚಿವ ಕೆ.ಎಸ್ ಈಶ್ವರಪ್ಪ
ಸಚಿವ ಕೆ.ಎಸ್ ಈಶ್ವರಪ್ಪ
author img

By

Published : Aug 25, 2020, 3:24 PM IST

Updated : Aug 25, 2020, 3:47 PM IST

ಶಿವಮೊಗ್ಗ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳಿಗೆ ಬಹಳ ಬೆಲೆ ಇದೆ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಕಾಂಗ್ರೆಸ್ ಎಂಬ ಮಾತನ್ನ ಎಲ್ಲರೂ ಹೇಳುತ್ತಾರೆ. ಕಾಂಗ್ರೆಸ್ ನಾಯಕತ್ವ ಎನ್ನುತ್ತಿದ್ದಂತೆ ಸುಭಾಷ್ ಚಂದ್ರ ಬೋಸ್, ಚಂದ್ರಶೇಖರ್ ಆಜಾದ್, ಮಹಾತ್ಮ ಗಾಂಧಿ ಅವರ ಹೆಸರುಗಳು ನೆನಪಾಗುತ್ತವೆ. ಆದರೆ ಇಂದು ಕಾಂಗ್ರೆಸ್ ಪಕ್ಷ ಅನ್ನುತ್ತಿದ್ದಂತೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹೆಸರುಗಳು ಕೇಳಿ ಬರುತ್ತಿವೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಸಚಿವ ಈಶ್ವರಪ್ ಹೇಳಿಕೆ

ಕಾಂಗ್ರೆಸ್ ಪಕ್ಷ ದೇಶದಲ್ಲಿ ಒಡೆದ ಕನ್ನಡಿಯಾಗಿದೆ. ಕಾಂಗ್ರೆಸ್ ಪಕ್ಷವನ್ನು ಇನ್ನೊಮ್ಮೆ ಒಟ್ಟಿಗೆ ಸೇರಿಸಲು ಯಾರಿಂದಲೂ ಸಾಧ್ಯವಿಲ್ಲ. ರಾಜಕೀಯ ಪಕ್ಷ ಎಂದ ತಕ್ಷಣ ಆ ಪಕ್ಷದ ನಾಯಕ ಯಾರು, ಪಕ್ಷದ ಸಿದ್ಧಾಂತವೇನು, ಪಕ್ಷದ ಕಾರ್ಯಕರ್ತರು ಯಾರು ಎಂಬುದು ಬಹಳ ಮುಖ್ಯ. ಇವತ್ತು ದೇಶದ 23 ಕಾಂಗ್ರೆಸ್​​ ನಾಯಕರು ಪತ್ರ ಬರೆದು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಗಾಂಧಿ ಕುಟುಂಬವೇ ಬೇಡ ಸಾಮೂಹಿಕ ನಾಯಕತ್ವ ಬೇಕು ಎನ್ನುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ನಾಯಕತ್ವದ ಗೊಂದಲ ಎಂದರು.

ಇಡೀ ದೇಶದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ನರೇಂದ್ರ ಮೋದಿ ಅವರಂತಹ ನಾಯಕರನ್ನು ಪಡೆದ ನಾವೇ ಧನ್ಯರು. ನಮ್ಮ ಪಕ್ಷಕ್ಕೆ ದೇಶವನ್ನು ಅಭಿವೃದ್ಧಿಪಡಿಸುವ, ಇತರೆ ದೇಶಗಳ ಮುಂದೆ ಭಾರತವನ್ನು ಮುಂದೆ ತರಬೇಕು ಎನ್ನುವುದು ನಮ್ಮ ಪಕ್ಷದ ಸಿದ್ಧಾಂತ ಎಂದರು.

ಭಾರತೀಯ ಜನತಾ ಪಕ್ಷಕ್ಕೆ ಅತಿದೊಡ್ಡ ಕಾರ್ಯಕರ್ತರ ಪಡೆ ಇದೆ. ಆದರೆ ಕಾಂಗ್ರೆಸ್​​ನಲ್ಲಿ ನಾನಲ್ಲಾ, ನಾನಲ್ಲಾ ಎನ್ನುವ ಪರಿಸ್ಥಿತಿ ಬಂದಿದೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ಪಕ್ಷ ಮುಳುಗಿ ಹೋಗುವ ಹಡಗು. ಗಾಂಧೀಜಿಯವರು ಅಂದೇ ಹೇಳಿದ್ದರು ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಿ ಎಂದು. ಆದರೆ ಇಂದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸುತ್ತಿದ್ದಾರೆ ಎಂದರು.

ಸೋನಿಯಾ ಗಾಂಧಿಯವರನ್ನು ಹೋಗಳಿದರೆ ಪಕ್ಷದಲ್ಲಿ ಸ್ಥಾನಮಾನ ಸಿಗಲಿದೆ ಎಂಬುವುದು ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯನವರನ್ನು ನೋಡಿದರೆ ಅರ್ಥ ಆಗುತ್ತದೆ ಎಂದು ಲೇವಡಿ ಮಾಡಿದರು. ಅಣ್ಣಾಮಲೈ ಅವರಂತಹ ಪ್ರಾಮಾಣಿಕ ವ್ಯಕ್ತಿ ಭಾರತೀಯ ಜನತಾ ಪಕ್ಷಕ್ಕೆ ಬರುತ್ತಿರುವುದನ್ನು ಸ್ವಾಗಸಿಸುತ್ತೇನೆ. ದೇಶ ಉಳಿಯಬೇಕು, ಅಭಿವೃದ್ಧಿ ಆಗಬೇಕು ಎನ್ನುವವರು ಬಿಜೆಪಿ ಬೆಂಬಲಿಸಿ ಎಂದು ಮನವಿ ಮಾಡಿದರು.

Last Updated : Aug 25, 2020, 3:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.