ಶಿವಮೊಗ್ಗ:ಭದ್ರಾವತಿಯ ಮೈಸೂರು ಪೇಪರ್ ಮಿಲ್ಸ್ (ಎಂಪಿಎಂ) ಕಾರ್ಖಾನೆ ಪುನರಾರಂಭ ಮಾಡುವಂತೆ ನಿರಂತರ ಹೋರಾಟಗಳು ನಡೆಯುತ್ತಿದ್ವು. ಈಗ ಈ ಹೋರಾಟ ಆನ್‌ಲೈನ್ ರೂಪ ಪಡೆದುಕೊಂಡಿದ್ದು, ಎಂಪಿಎಂ ಪುನರಾರಂಭವಾಗಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಲಾಗಿದೆ.
ಕಾರ್ಖಾನೆ ಮತ್ತೆ ಆರಂಭಿಸುವಂತೆ, ಭದ್ರಾವತಿಯ ಯುವಕರು ಟ್ವಿಟರ್ನಲ್ಲಿ ಅಭಿಯಾನ ಶುರು ಮಾಡಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಟ್ಯಾಗ್ ಮಾಡಿ, ತಮ್ಮ ಮನವಿ ಸಲ್ಲಿಸುತ್ತಿದ್ದಾರೆ. ಎಂಪಿಎಂ ಕಾರ್ಖಾನೆ ಮುಚ್ಚಿರುವುದರಿಂದ ಕಾರ್ಮಿಕರು ಮತ್ತು ಅವರ ಕುಟುಂಬ ಸಂಕಷ್ಟದಲ್ಲಿದೆ. ಹಾಗಾಗಿ ಕಾರ್ಖಾನೆ ಪುನಾರಂಭ ಮಾಡಬೇಕು ಎಂದು ಒತ್ತಾಯಿಸಲಾಗುತ್ತಿದೆ.
![MPM factory is an online form](https://etvbharatimages.akamaized.net/etvbharat/prod-images/3344297_smg.jpg)
#ReopenMysorePaperMills ಮತ್ತು #MPM_Bhadravathi ಹ್ಯಾಷ್ ಟ್ಯಾಗ್ ಮೂಲಕ ಟ್ವೀಟ್ಗಳನ್ನು ಮಾಡಲಾಗುತ್ತಿದೆ.ಎಂಪಿಎಂ ಪುನಾರಂಭ ಮಾಡುವಂತೆ ಈವರೆಗೂ ಸಾವಿರ ಟ್ವೀಟ್ಗಳು ಬಂದಿವೆ.