ಶಿವಮೊಗ್ಗ: ನಗರ ಸೇರಿದಂತೆ ಜಿಲ್ಲೆಯ ಇತರೆ ಭಾಗಗಳಲ್ಲಿ ಪ್ರವಾಹ ಬಂದು ನಿರಾಶ್ರಿತರಾದವರಿಗೆ ನೀಡಲು ಬಿಜೆಪಿಯವರು ಪರಿಹಾರ ಸಾಮಾಗ್ರಿಗಳನ್ನು ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಿದ್ದಾರೆ.
ನಗರ ಶಾಸಕ ಕೆ.ಎಸ್.ಈಶ್ವರಪ್ಪ ಮಂತ್ರಿಯಾದ ಮೇಲೆ ಅಭಿನಂದನಾ ಸಮಾರಂಭಕ್ಕೆ ಬರುವವರು ಹಾರ, ತೂರಾಯಿ ತರುವ ಬದಲು ನಿರಾಶ್ರಿತರಿಗೆ ಪರಿಹಾರ ಸಾಮಾಗ್ರಿಯನ್ನು ನೀಡಬೇಕು ಎಂದು ವಿನಂತಿ ಮಾಡಿದ್ದರು. ನಂತರ ನಡೆದ ಸಮಾರಂಭದಲ್ಲಿ ಸಾರ್ವಜನಿಕರು ಈಶ್ವರಪ್ಪನವರಿಗೆ ಹಾರ, ತೂರಾಯಿ ಬದಲು, ಟವಲು, ಬೆಡ್ ಶೀಟ್, ದಿನ ಬಳಕೆಯ ಪುರುಷರ ಹಾಗೂ ಮಹಿಳೆಯರ ಬಟ್ಟೆ ಸೇರಿದಂತೆ ವಿವಿಧ ವಸ್ತುಗಳನ್ನು ನೀಡಿದ್ದರು.
ಸಾರ್ವಜನಿಕರು ನೀಡಿದ ವಸ್ತುಗಳನ್ನು ಸಂಗ್ರಹಿಸಿ, ಮಹಾನಗರ ಪಾಲಿಕೆಗೆ ಇಂದು ಬಿಜೆಪಿ ವತಿಯಿಂದ ಹಸ್ತಾಂತರ ಮಾಡಲಾಯಿತು. ನಗರದ ಬಿಜೆಪಿ ಅಧ್ಯಕ್ಷ ನಾಗರಾಜ್, ಪಾಲಿಕೆಯ ಆರೋಗ್ಯಾಧಿಕಾರಿ ಬಿ.ಎಸ್.ಅಲಿ ಅವರಿಗೆ ಪರಿಹಾರ ಹಸ್ತಾಂತರ ಮಾಡಿದರು.