ETV Bharat / state

ಬಿ.ವೈ. ರಾಘವೇಂದ್ರ ಕುರಿತು ತೀ. ನಾ. ಶ್ರೀನಿವಾಸ್ ನೀಡಿರುವ ಹೇಳಿಕೆಯನ್ನು ಹಿಂಪಡೆಯುವಂತೆ ಒತ್ತಾಯ - ಶಿವಮೊಗ್ಗ ಲೇಟೆಸ್ಟ್ ನ್ಯೂಸ್

ತಾಳಕೊಪ್ಪದಲ್ಲಿ ಟರ್ಮಿನಲ್ ಮಾಡಲು ಕೆಲ ಸಮಸ್ಯೆಯಿರುವ ಹಿನ್ನೆಲೆ, ಕೋಟೆ ಗಂಗೂರಿನಲ್ಲಿ ಟರ್ಮಿನಲ್ ಮಾಡಲಾಗುತ್ತಿದೆ. ಇದರ ಅರಿವಿಲ್ಲದೇ ಕಾಂಗ್ರೆಸ್​ನ ಮಾಜಿ ಜಿಲ್ಲಾಧ್ಯಕ್ಷರು ಸಂಸದರ ಬಗ್ಗೆ ಲಘುವಾಗಿ ಮಾತನಾಡಿರುವುದು ಸರಿಯಲ್ಲ. ಸಂಸದರ ಕುರಿತು ನೀಡಿರುವ ತಮ್ಮ ಹೇಳಿಕೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಒತ್ತಾಯಿಸಿದರು.

t d meghraj
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್
author img

By

Published : Nov 29, 2020, 10:25 AM IST

ಶಿವಮೊಗ್ಗ: ರೈಲ್ವೆ ಟರ್ಮಿನಲ್ ಹಾಗೂ ಮಂಕಿ ಪಾರ್ಕ್ ಕುರಿತು ಕಾಂಗ್ರೆಸ್‌ ಜಿಲ್ಲಾ ಮಾಜಿ ಅಧ್ಯಕ್ಷರಾದ ತೀ. ನಾ. ಶ್ರೀನಿವಾಸ್ ಅವರು ಲಘುವಾಗಿ ಮಾತನಾಡಿದ್ದಾರೆ. ಸಂಸದರ ಕುರಿತು ನೀಡಿರುವ ತಮ್ಮ ಹೇಳಿಕೆಯನ್ನು ಕೂಡಲೇ ಅವರು ಹಿಂಪಡೆಯಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಒತ್ತಾಯಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್

ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಸಂಸದ ಬಿ.ವೈ. ರಾಘವೇಂದ್ರ ಅವರು ಜಿಲ್ಲೆಯ ನೀರಾವರಿ, ಸೇತುವೆ, ರಸ್ತೆಗಳು, ರೈಲ್ವೆ ಟರ್ಮಿನಲ್ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಅಭಿವೃದ್ಧಿಯ ಹರಿಕಾರರಾಗಿದ್ದಾರೆ. ಆದರೆ ಕಾಂಗ್ರೆಸ್​ನ ಮಾಜಿ ಅಧ್ಯಕ್ಷರು ಸಂಸದರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಹಾಗಾಗಿ ಕೂಡಲೇ ಅವರ ಹೇಳಿಕೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಪ್ರಸ್ತುತ ಶಿವಮೊಗ್ಗ ರೈಲ್ವೆ ಕ್ಷೇತ್ರದಲ್ಲಿ ಜಾಗತಿಕವಾಗಿ ಗುರುತಿಸಲ್ಪಡುತ್ತಿದೆ ಎಂದರೆ ಅದಕ್ಕೆ ಸಂಸದ ಬಿ.ವೈ. ರಾಘವೇಂದ್ರರವರೇ ಕಾರಣ. ಕಾಂಗ್ರೆಸ್​ನವರು ಅಭಿವೃದ್ಧಿಗೆ ಬೆಂಬಲ ನೀಡದೆ ಕೇವಲ ತಮ್ಮ ಅಸ್ತಿತ್ವಕ್ಕಾಗಿ ವಿರೋಧ ಹಾಗೂ ಹೋರಾಟ ಮಾಡುತ್ತಿದೆ. ಹಾಗಾಗಿ ಸಂಸದರ ಬಗ್ಗೆ ಹಾಗೂ ರೈಲ್ವೆ ಅಭಿವೃದ್ಧಿಯ ಬಗ್ಗೆ ಮಾತನಾಡಲು ಜಿಲ್ಲಾ ಕಾಂಗ್ರೆಸ್​ನವರಿಗೆ ನೈತಿಕತೆ ಇಲ್ಲವೆಂದು ರೇಗಿದರು.

ಇದನ್ನು ಓದಿ: ಮಂಗಳೂರು ಕೋರ್ಟ್ ಬಳಿ ಗೋಡೆಯ ಮೇಲೆ ಮತ್ತೊಂದು ಎಚ್ಚರಿಕೆ ಬರಹ!

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಯಾವ ಸಂಸದರು, ಶಾಸಕರು ಕೂಡ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರವಾಸ ಮಾಡಿ ಅಭಿವೃದ್ಧಿ ಕಾರ್ಯ ಮಾಡಲಿಲ್ಲ. ಆದರೆ ಸಂಸದ ಬಿ.ವೈ. ರಾಘವೇಂದ್ರ ಪ್ರತಿ ಹಳ್ಳಿ ಹಳ್ಳಿಗೂ ಹೋಗಿ ಪ್ರವಾಸ ಮಾಡಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದರು.

ತಾಳಕೊಪ್ಪದಲ್ಲಿ ಟರ್ಮಿನಲ್ ಮಾಡಲು ರೈಲ್ವೆ ಇಲಾಖೆ ತಾಂತ್ರಿಕ ಸಮಸ್ಯೆ ಕಾರಣ ಇದೆ ಎಂದು ಕೋಟೆ ಗಂಗೂರಿನಲ್ಲಿ ಟರ್ಮಿನಲ್ ಮಾಡಲಾಗುತ್ತಿದೆ. ಇದರ ಅರಿವಿಲ್ಲದೇ ಕಾಂಗ್ರೆಸ್​ನ ಮಾಜಿ ಜಿಲ್ಲಾಧ್ಯಕ್ಷರು ಸಂಸದರ ಬಗ್ಗೆ ಲಘುವಾಗಿ ಮಾತನಾಡಿರುವುದು ಸರಿಯಲ್ಲ ಎಂದರು. ಒಟ್ಟಾರೆ ಮುಖ್ಯಮಂತ್ರಿಗಳಿಂದ, ಜಿಲ್ಲಾ ಉಸ್ತುವಾರಿ ಸಚಿವರಿಂದ, ಸಂಸದರಿಂದ ಅಭಿವೃದ್ಧಿಯ ಮಹಾ ಪೂರವೇ ಜಿಲ್ಲೆಗೆ ಹರಿದು ಬರುತ್ತಿದೆ ಎಂದು ಮೇಘರಾಜ್​ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.