ETV Bharat / state

ನನ್ನ ಮಗ ಮತೀನ್ ಸಂಪರ್ಕಕ್ಕೆ ಸಿಗದೇ ಹಲವು ವರ್ಷಗಳೇ ಕಳೆದಿವೆ: ಮಂಜೂರ್ ಅಹಮದ್

ಮತೀನ್​ಗೆ ನಾನು ಹೇಳುವುದಿಷ್ಟೆ, ಎಲ್ಲೆ ಇದ್ರು ಬಂದು ಬಿಡು. ಒಳ್ಳೆ ದಾರಿಯಲ್ಲಿ ಜೀವನ ನಡೆಸು ಎಂದು ಶಂಕಿತ ಉಗ್ರ ಮತೀನ್ ಅವರ ತಂದೆ ಮಂಜೂರ್ ಅಹಮದ್ ಬುದ್ಧಿ ಮಾತು ಹೇಳಿದ್ದಾರೆ.

ಮಂಜೂರ್ ಅಹಮದ್
ಮಂಜೂರ್ ಅಹಮದ್
author img

By

Published : Nov 21, 2022, 4:41 PM IST

ಶಿವಮೊಗ್ಗ: ನನ್ನ ಮಗ ಮತೀನ್ ಸಂಪರ್ಕವಿಲ್ಲದೆ ಹಲವು ವರ್ಷಗಳೇ ಕಳೆದಿವೆ ಎಂದು ಶಂಕಿತ ಉಗ್ರ ಮತೀನ್ ಅವರ ತಂದೆ ಮಂಜೂರ್ ಅಹಮದ್ ತಿಳಿಸಿದ್ದಾರೆ.‌

ತೀರ್ಥಹಳ್ಳಿಯ ಸೂಪ್ಪುಗುಡ್ಡೆಯ ಟಾಕೀಸ್ ರಸ್ತೆಯ ತಮ್ಮ ನಿವಾಸದಲ್ಲಿ ಇಂದು ಮಾಧ್ಯಮಗಳೂಂದಿಗೆ ಮಾತನಾಡಿದ ಅವರು, ಮತೀನ್ ಏನಾಗಿದ್ದಾನೆ ಅಂತ ನಮಗೆ ಇನ್ನೂ ಗೂತ್ತಿಲ್ಲ. ಆತನ ಬಗ್ಗೆ ಮಾಧ್ಯಮಗಳಿಂದಲೇ ನಮಗೆ ಮಾಹಿತಿ ತಿಳಿದು ಬರುತ್ತಿದೆ. ಆತ ಉಗ್ರ ಅಲ್ಲ, ಯಾರು ಸಹ ಹೀಗೆ ಮಾಡಬಾರದು. ಎಲ್ಲಾರು ಒಳ್ಳೆಯ ದಾರಿಯಲ್ಲಿ ನಡೆಯಬೇಕು. ಒಳ್ಳೆಯ ಜೀವನ ನಡೆಸಬೇಕು. ಅವರವರ ತಂದೆ ತಾಯಿಯನ್ನು ನೋಡಿ‌ಕೊಳ್ಳಲು ಚೆನ್ನಾಗಿ ಇರಬೇಕು. ಕೆಟ್ಟ ದಾರಿಯಲ್ಲಿ ಹೋಗಬಾರದು. ಅವರ ತಂದೆ ತಾಯಿಗೆ ಕಷ್ಟ ಆಗುತ್ತೆ. ತಮ್ಮ ಸ್ವಂತ ಜೀವನನೂ ಹಾಳಾಗುತ್ತೆ. ಇದರಿಂದ ಅವರ ಮನೆಯವರಿಗೂ ಕಷ್ಟ ಆಗುತ್ತೆ. ಯಾರೂ ಸಹ ಕೆಟ್ಟದಾರಿಯಲ್ಲಿ ಹೋಗಬಾರದು. ಶಾರಿಕ್ ಹಾಗೂ ಮತೀನ್ ಒಂದೇ ಊರಿನವರು. ಇದರಿಂದ ಅವರಿಗೆ ಸ್ನೇಹ ಆಗಿರಬಹುದು. ಇದರಿಂದ ಅವರ ಸಂಪರ್ಕ ಬೆಳೆದಿರಬಹುದು ಎಂದರು.

ಮಗನಿಗೆ ಬುದ್ಧಿ ಮಾತು ಹೇಳಿದ ಶಂಕಿತ ಉಗ್ರ ಮತೀನ್ ತಂದೆ ಮಂಜೂರ್ ಅಹಮದ್

ಮತೀನ್ ಬೆಂಗಳೂರಿನ ಘಟನೆಯ ನಂತರ ನಮ್ಮ ಸಂಪರ್ಕದಲ್ಲಿ ಇಲ್ಲ. ನನ್ನ ಮಗ ಹೀಗೆ ಆಗ್ತಾನೆ ಅಂತ ನಮಗೇ ಗೊತ್ತಿರಲಿಲ್ಲ. ಅವನು ಚೆನ್ನಾಗಿ ಇರಲಿ ಎಂದು ಓದಿಸಿದ್ವಿ. ಬೆಂಗಳೂರಿನಲ್ಲಿ ಬಿಇ ಓದುತ್ತಿದ್ದ. ನಂತರ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಈಗ ಟೆಕ್ನಾಲಜಿ ಚೆನ್ನಾಗಿದೆ. ಮೊಬೈಲ್ ನಲ್ಲಿ ಯಾರು ಏನ್ ಮಾಡ್ತಾ ಇದ್ದಾರೆ ಅಂತ ಗೊತ್ತಾಗುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಸ್ವಂತ ತಂದೆ ತಾಯಿಗೂ ಗೊತ್ತಾಗುವುದಿಲ್ಲ. ಇಂದು ಬೆಳಗ್ಗೆ ಮಂಗಳೂರು ಘಟನೆ ಕುರಿತು ಪೊಲೀಸರು ಬಂದು ಮನೆಯಲ್ಲಿ ತನಿಖೆ ನಡೆಸಿದ್ರು. ಅವರಿಗೆ ಏನ್ ಬೇಕೋ ಅದನ್ನು ನೋಡಿಕೊಂಡು ಹೋಗಿದ್ದಾರೆ. ನನ್ನ ಮಗ ಮತೀನ್ ಗೆ ನಾನು ಹೇಳುವುದಿಷ್ಟೆ, ಎಲ್ಲೇ ಇದ್ರು ಬಂದು ಬಿಡು. ಒಳ್ಳೆ ದಾರಿಯಲ್ಲಿ ಜೀವನ ನಡೆಸು ಎಂದು ಕರೆ ನೀಡಿದರು.

ಓದಿ: ಶಿವಮೊಗ್ಗ: ಶಂಕಿತ ಉಗ್ರರಿಬ್ಬರು ಸೆಪ್ಟೆಂಬರ್ 30 ರ ತನಕ ಪೊಲೀಸ್ ಕಸ್ಟಡಿಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.