ETV Bharat / state

ಕ್ಯಾಂಪ್​ಗೆ ತೆರಳಿದ್ದ ವಿದ್ಯಾರ್ಥಿನಿ ಸಾವು: ಪೋಷಕರ ಅನುಮಾನ - Shivamogga Accident News

ಕ್ಯಾಂಪ್​ಗೆಂದು ತೆರಳಿದ್ದ ಭದ್ರಾವತಿ ಮೂಲದ ವಿದ್ಯಾರ್ಥಿನಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ  ಶಿವಮೊಗ್ಗ- ಶಿಕಾರಿಪುರ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.

Student Died For Road Accident
ಕ್ಯಾಂಪ್​ಗೆ ತೆರಳಿದ್ದ ವಿದ್ಯಾರ್ಥಿನಿ ಸಾವು
author img

By

Published : Dec 7, 2019, 3:55 PM IST

ಶಿವಮೊಗ್ಗ: ಕ್ಯಾಂಪ್​ಗೆಂದು ತೆರಳಿದ್ದ ಭದ್ರಾವತಿ ಮೂಲದ ವಿದ್ಯಾರ್ಥಿನಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ- ಶಿಕಾರಿಪುರ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.

ಶಿವಮೊಗ್ಗದ ಪೆಸೆಟ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಪರಿಣಿತ (20) ಮೃತ ವಿದ್ಯಾರ್ಥಿನಿ.

ಕಾಲೇಜು ಕ್ಯಾಂಪ್​ಗಾಗಿ ಶಿವಮೊಗ್ಗದ ತಾಲೂಕು ಬೀರನಕೆರೆ ಗ್ರಾಮಕ್ಕೆ ಕಳೆದ ನಾಲ್ಕು ದಿನದ ಹಿಂದೆ ತೆರಳಿದ್ದ ಈಕೆ, ಇಂದು ಉಪನ್ಯಾಸಕರ ಜೊತೆ ಶಿವಮೊಗ್ಗ-ಶಿಕಾರಿಪುರ ರಾಜ್ಯ ಹೆದ್ದಾರಿಯಲ್ಲಿ ವಾಕಿಂಗ್ ಮಾಡುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ಎಂದು ಉಪನ್ಯಾಸಕರು ತಿಳಿಸಿದ್ದಾರೆ.

ಆದರೆ ವಿದ್ಯಾರ್ಥಿನಿ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ಕ್ಯಾಂಪ್​ಗೆ ತೆರಳಿದ್ದ ವಿದ್ಯಾರ್ಥಿನಿ ಸಾವು

ವಿದ್ಯಾರ್ಥಿನಿಯ ಶವವನ್ನು ಮೆಗ್ಗಾನ್ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ. ಮಗಳ ಸಾವಿನಿಂದ ಕಂಗಾಲಾದ ಪೋಷಕರು, ಕಾಲೇಜು ಸಿಬ್ಬಂದಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಮಧ್ಯಪ್ರವೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸಿದ್ದು, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಕಾಲೇಜು ವಿದ್ಯಾರ್ಥಿನಿಗೆ ಅಪರಿಚಿತ ವಾಹನ ಡಿಕ್ಕಿ ಸಾವು: ವಿದ್ಯಾರ್ಥಿನಿ ಸಾವಿನ ಬಗ್ಗೆ ಪೋಷಕರ ಅನುಮಾನ.

ಶಿವಮೊಗ್ಗ: ಕ್ಯಾಂಪ್ ಗೆಂದು ಹೋಗಿದ್ದ ವಿದ್ಯಾರ್ಥಿನಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾಳೆ. ವಿದ್ಯಾರ್ಥಿನಿಯ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದ ಪೆಸೆಟ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಪರಿಣಿತ(20) ತನ್ನ ಕಾಲೇಜಿನ ಕ್ಯಾಂಪ್ ಗಾಗಿ ಶಿವಮೊಗ್ಗದ ತಾಲೂಕು ಬೀರನಕೆರೆ ಗ್ರಾಮಕ್ಕೆ ಕಳೆದ ನಾಲ್ಕುದಿನದ ಹಿಂದೆ ತೆರಳಿದ್ದಳು. ಇಂದು ತನ್ನ ಉಪನ್ಯಾಸಕರ ಜೊತೆ ಶಿವಮೊಗ್ಗ- ಶಿಕಾರಿಪುರ ರಾಜ್ಯ ಹೆದ್ದಾರಿಯಲ್ಲಿ ವಾಕಿಂಗ್ ಮಾಡುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾಳೆ ಎಂದು ಉಪನ್ಯಾಸಕರು ತಿಳಿಸಿದ್ದಾರೆ.Body:ಪರಿಣಿತ ಪೋಷಕರು ತಮ್ಮ ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿನಿಯ ಶವ ಮೆಗ್ಗಾನ್ ಆಸ್ಪತ್ರೆಯ ಶವಗಾರದಲ್ಲಿ ಇದೆ. ಈ ವೇಳೆ ಪೋಷಕರು, ಕಾಲೇಜು ಸಿಬ್ಬಂದಿಗಳಿಗೆ ತೀವ್ರ ತರಾಟೆ ತೆಗೆದು ಕೊಂಡಿದ್ದಾರೆ.Conclusion:ವಿದ್ಯಾರ್ಥಿನಿಯ ಶವ ಮೆಗ್ಗಾನ್ ಆಸ್ಪತ್ರೆಯ ಶವಗಾರದಲ್ಲಿ ಇದೆ. ಈ ವೇಳೆ ಪೋಷಕರು, ಕಾಲೇಜು ಸಿಬ್ಬಂದಿಗಳಿಗೆ ತೀವ್ರ ತರಾಟೆ ತೆಗೆದು ಕೊಂಡಿದ್ದಾರೆ. ನಂತ್ರ ಪೊಲೀಸರು ಮಧ್ಯ ಪ್ರವೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಪರಿಣಿತ ಭದ್ರಾವತಿ ಮೂಲದವಳು ಎಂದು ತಿಳಿದು ಬಂದಿದೆ. ಅಪಘಾತ ಕುರಿತು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.