ಶಿವಮೊಗ್ಗ: ಏಪ್ರಿಲ್ 14 ರಂದು ಲಾಕ್ ಡೌನ್ ಮುಗಿಯುವುದೋ ಅಥವಾ ಮುಂದುವರೆಯುವುದೋ ಯಾರಿಗೂ ಗೊತ್ತಿಲ್ಲ. ಆದರೆ ಮುಂಜಾಗ್ರತೆ ಕ್ರಮವಾಗಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸೀಲ್ ಡೌನ್ ಮಾಡಲಾಗುತ್ತಿದೆ. ಮತ್ತೆ ಕೆಲವೆಡೆ ಇಂದಿನಿಂದ ಲಾಕ್ ಡೌನ್ ಬಿಗಿಗೊಳಿಸಲಾಗುತ್ತಿದೆ.
ಶಿವಮೊಗ್ಗದಲ್ಲಿ ಲಾಕ್ ಡೌನ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಲಾಠಿ ಏಟು ತಿಂದರೂ ಜನರು ಹೊರಗೆ ಬರುವುದನ್ನು ನಿಲ್ಲಿಸುತ್ತಿಲ್ಲ. ಅಲ್ಲದೆ, ಅನಾವಶ್ಯಕವಾಗಿ ವಾಹನದಲ್ಲಿ ಸುತ್ತಾಡುವುದನ್ನು ಕೂಡಾ ನಿಲ್ಲಿಸುತ್ತಿಲ್ಲ. ಈ ಕಾರಣದಿಂದ ಶಿವಮೊಗ್ಗ ಪೊಲೀಸರು ಜಿಲ್ಲೆಯ ಏರಿಯಾಗಳನ್ನೇ ಲಾಕ್ ಮಾಡಿದ್ದಾರೆ. ಪ್ರತಿಯೊಂದು ಏರಿಯಾಗಳನ್ನು ಸೆಕ್ಟರ್ ಗಳನ್ನಾಗಿ ಮಾಡಿ ಅಲ್ಲಿ ಬ್ಯಾರಿಕೇಡ್ಗಳನ್ನು ಹಾಕಿ ಆ ಏರಿಯಾದ ಜನರು ಬೇರೆ ಏರಿಯಾಗಳಿಗೆ ಬಾರದಂತೆ ತಡೆಯಲಾಗುತ್ತಿದೆ. ಇದಲ್ಲದೆ ಪ್ರತಿ ಸರ್ಕಲ್ಗಳನ್ನೂ ಲಾಕ್ ಮಾಡಲಾಗಿದೆ. ಇದನ್ನೂ ಮೀರಿ ವಾಹನಗಳಲ್ಲಿ ಆಗಮಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ.