ETV Bharat / state

ಶಿವಮೊಗ್ಗದ ಆರೋಗ್ಯ ಕೇಂದ್ರಗಳ ಸೇವೆ ಕುರಿತು ವೈದ್ಯರಿಂದ ಮಾಹಿತಿ: ಸಾರ್ವಜನಿಕರಿಗೂ ತೃಪ್ತಿ - ನಗರ ಆರೋಗ್ಯ ಕೇಂದ್ರಗಳು

ಶಿವಮೊಗ್ಗದಲ್ಲಿ-8, ಭದ್ರಾವತಿ- 4, ಶಿಕಾರಿಪುರ-1 ಹಾಗೂ ಸಾಗರದಲ್ಲಿ-1 ನಗರ ಆರೋಗ್ಯ ಕೇಂದ್ರ ಸೇರಿ ಒಟ್ಟು 14 ನಗರ ಆರೋಗ್ಯ ಕೇಂದ್ರಗಳು ಜನತೆಗೆ ಆರೋಗ್ಯ ಸೇವೆ ಒದಗಿಸುತ್ತಿವೆ.

how is shimogga urban health centers are working?
ಶಿವಮೊಗ್ಗ: ನಗರ ಆರೋಗ್ಯ ಕೇಂದ್ರಗಳ ಕಾರ್ಯವೈಖರಿ ಹೇಗಿದೆ ಗೊತ್ತಾ?
author img

By

Published : Apr 7, 2021, 5:29 PM IST

ಶಿವಮೊಗ್ಗ: ನಗರ ಆರೋಗ್ಯ ಕೇಂದ್ರಗಳು ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳ‌ ಮೇಲಿನ ಒತ್ತಡವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಜನರು ತಮ್ಮ ಎಲ್ಲಾ‌ ಆರೋಗ್ಯ ಸಮಸ್ಯೆಗಳಿಗೆ ತಾಲೂಕು ಹಾಗೂ ಜಿಲ್ಲಾಸ್ಪತ್ರೆಗಳಿಗೆ ಹೋದರೆ, ಅಲ್ಲಿನ ಸಿಬ್ಬಂದಿಗೆ ಹೆಚ್ಚು ಒತ್ತಡ ಉಂಟಾಗುವುದರಲ್ಲಿ ಅನುಮಾನವೇ ಇಲ್ಲ. ಈ ನಗರ ಆರೋಗ್ಯ ಕೇಂದ್ರಗಳು ಸ್ಥಳೀಯವಾಗಿ ಆರೋಗ್ಯ ಸೇವೆ ಒದಗಿಸುತ್ತಿವೆ.

ಶಿವಮೊಗ್ಗದಲ್ಲಿ-8, ಭದ್ರಾವತಿ- 4, ಶಿಕಾರಿಪುರ-1 ಹಾಗೂ ಸಾಗರದಲ್ಲಿ-1 ನಗರ ಆರೋಗ್ಯ ಕೇಂದ್ರ ಸೇರಿ ಒಟ್ಟು 14 ನಗರ ಆರೋಗ್ಯ ಕೇಂದ್ರಗಳು ಜಿಲ್ಲೆಯ ಜನೆತಗೆ ಸೇವೆ ಒದಗಿಸುತ್ತಿವೆ.

ನಗರ ಆರೋಗ್ಯ ಕೇಂದ್ರಗಳ ಸೇವೆ ಬಗ್ಗೆ ವೈದ್ಯರಿಂದ ಮಾಹಿತಿ.

ನಗರ ಹಾಗೂ ಗ್ರಾಮೀಣ ಆರೋಗ್ಯ ಕೇಂದ್ರಗಳನ್ನು ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿ ಕೇಂದ್ರಗಳೆಂದು ಕೇಂದ್ರ ಸರ್ಕಾರ ಪರಿಗಣಿಸಿದೆ. ಈ ವರ್ಷ ಗ್ರಾಮೀಣ ಭಾಗದ 93 ಆರೋಗ್ಯ ಕೇಂದ್ರಗಳನ್ನು ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿ ಕೇಂದ್ರ ಎಂದು ಪರಿಗಣಿಸಲಾಗಿದೆ. ಇದರಿಂದ ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳನ್ನು ಆರೋಗ್ಯ ಮತ್ತು ಕ್ಷೇಮಾಭಿವೃದ್ದಿ ಕೇಂದ್ರ ಎಂದು ಪರಿಗಣಿಸಿದಂತಾಗಿದೆ.

ಆರೋಗ್ಯ ಕೇಂದ್ರದ ಜವಾಬ್ದಾರಿಗಳು:

ಜಿಲ್ಲೆಯಲ್ಲಿ ಒಂದು ಪ್ರಾಥಮಿಕ ಕೇಂದ್ರಕ್ಕೆ ಕನಿಷ್ಟ ಮೂರು ಉಪ ಕೇಂದ್ರಗಳಿರುತ್ತವೆ. ಸದ್ಯ 211 ಉಪ ಕೇಂದ್ರಗಳಿವೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಟ್ಟು 12 ಸೇವೆಗಳನ್ನು ನೀಡಬೇಕೆಂದು ತಿಳಿಸಲಾಗಿದೆ. ಆರೋಗ್ಯ ಕೇಂದ್ರದ ಒಪಿಡಿಯಲ್ಲಿ ರೋಗಿಗಳನ್ನು ಪರೀಕ್ಷಿಸಿದ ಬಗ್ಗೆ ಆನ್​ಲೈನ್ ನಲ್ಲಿ ಅಪ್​ಲೋಡ್ ಮಾಡಬೇಕು. ಒಪಿಡಿ, ಎನ್​ಸಿಡಿ ಕ್ಲಿನಿಕ್ ನಡೆಸಬೇಕು. ಇಲ್ಲಿ 30 ವರ್ಷ ಮೇಲ್ಪಟ್ಟವರನ್ನು ಆರೋಗ್ಯ ಕೇಂದ್ರಕ್ಕೆ ಕರೆತಂದು ಬಿ.ಪಿ., ಶುಗರ್ ಪರೀಕ್ಷೆ ನಡೆಸಬೇಕಿದೆ. ಹಾಗೆಯೇ ಹೆಣ್ಣು ಮಕ್ಕಳಿಗೆ ಗರ್ಭಕೋಶ, ಎದೆ ಭಾಗದಲ್ಲಿ ಗಂಟಾಗುವುದನ್ನು ಪರೀಕ್ಷಿಸಿ ತಿಳಿಸಬೇಕಿದೆ. ಅಲ್ಲದೇ ಈಗ ಚಿಕಿತ್ಸೆಯ ಜತೆಗೆ ಯೋಗ ಕೂಡ ಕಲಿಸಬೇಕಿದೆ.

ಸರ್ಕಾರದಿಂದ ಇ- ಸಂಜೀವಿನಿ ಎರಡು ಅಪ್ಲಿಕೇಷನ್ ಬಿಡುಗಡೆ:

ಇ- ಸಂಜೀವಿನಿ ಆನ್​ಲೈನ್ ಅಪ್ಲಿಕೇಷನ್ ಅಗಿದ್ದು, ಓಪಿಡಿಯಲ್ಲಿ ಪರೀಕ್ಷೆ ಮಾಡಿದವರ ವಿವರವನ್ನು ಅಪ್ಲೋಡ್ ಮಾಡಬೇಕು. ಇ- ಸಂಜೀವಿನಿ.ಇನ್ ನಲ್ಲಿ ವೈದ್ಯರು ರೋಗಿಗಳ ಜೊತೆ ಅನ್​ಲೈನ್ ಮೂಲಕ ಮಾತನಾಡಬಹುದು.

ಕೊರೊನಾದಿಂದ ಸಾಕಷ್ಟು ಜನರು ಆಸ್ಪತ್ರೆಗೆ ಬರುವುದನ್ನೇ ಬಿಟ್ಟಿದ್ದಾರೆ. ಎಲ್ಲರಿಗೂ ಆರೋಗ್ಯ ಸೇವೆ ಒದಗಿಸುವ ದೃಷ್ಟಿಯಿಂದ ಈ ಸೇವೆಗಳನ್ನು ಪ್ರಾರಂಭಿಸಲಾಗಿದೆ. ನಗರ ಆರೋಗ್ಯ ಕೇಂದ್ರದಲ್ಲಿ ವಾರದಲ್ಲಿ ಒಂದ ದಿನ ಯೋಗ ತರಬೇತಿ ನೀಡಬೇಕಿದೆ.

ಇ- ಸಂಜೀವಿನಿ ಒಪಿಡಿಯಲ್ಲಿ ಆಶಾ ಕಾರ್ಯಕರ್ತೆಯರು, ಕಿರಿಯ ಆರೋಗ್ಯ ಸಹಾಯಕರ ಸಹಾಯದ ಮೂಲಕ ಆರೋಗ್ಯ ಸೇವೆ ನೀಡಲಾಗುತ್ತದೆ.

ಇ- ಸಂಜೀವಿನಿ.ಇನ್ ಸೇವೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದ ರಾಜ್ಯ:

ಇ-ಸಂಜೀವಿನಿ.ಇನ್ ನ ಆನ್​ಲೈನ್ ಸೇವೆಯಲ್ಲಿ ರಾಜ್ಯವು ದೇಶಕ್ಕೆ ಪ್ರಥಮ ಸ್ಥಾನದಲ್ಲಿದೆ. ಈವರೆಗೂ 1 ಲಕ್ಷದ ತನಕ ಸೇವೆಯನ್ನು ನೀಡಲಾಗಿದೆ. ಇಲ್ಲಿ ಆರೋಗ್ಯ ಕೇಂದ್ರದ ವೈದ್ಯರು ತಮ್ಮ ಬಿಡುವಿನ ಅವಧಿಯಲ್ಲಿ ಇ-ಸಂಜೀವಿನಿ.ಇನ್​​ ಗೆ ಲಾಗಿನ್ ಆಗಬಹುದು. ಆನ್ ಲೈನ್ ನಲ್ಲಿ ಸಿಗುವ ರೋಗಿಗಳ ಸಮಸ್ಯೆಯನ್ನು ವಿಡಿಯೋದ ಮೂಲಕ ತಿಳಿದುಕೊಂಡು ಅದಕ್ಕೆ ಪರಿಹಾರ ನೀಡಬಹುದಾಗಿದೆ. ಇದಕ್ಕೆ ವೈದ್ಯರಿಗೆ ಪ್ರತ್ಯೇಕವಾದ ಹಣ ನೀಡಲಾಗುತ್ತದೆ.

ಸಂಜೆ ಕ್ಲಿನಿಕ್​​ಗೆ ಅವಕಾಶ:

ಆರೋಗ್ಯ ಕೇಂದ್ರಗಳು ಬೆಳಗ್ಗೆ 10 ರಿಂದ ಸಂಜೆ 4 ರ ತನಕ ಕಾರ್ಯ ನಿರ್ವಹಿಸುತ್ತವೆ. ಆದರೆ ಸಾರ್ವಜನಿಕರಿಗೆ ಸೇವೆ ಒದಗಿಸುವ ದೃಷ್ಟಿಯಿಂದ ಸಂಜೆ ಕ್ಲಿನಿಕ್ ತೆರೆಯಲಾಗಿದೆ. ಇಲ್ಲಿ ಆಸಕ್ತ ವೈದ್ಯರಿಗೆ ಸಂಜೆ ಕ್ಲಿನಿಕ್ ನಡೆಸಲು ಅವಕಾಶ ಕಲ್ಪಿಸಲಾಗಿದೆ.

ಆಯುಷ್ಮಾನ್ ಭಾರತ್ ಯೋಜನೆಯಡಿ ಬರುವ ಅನುದಾನದಲ್ಲಿ ಶೇ. 30 ರಷ್ಟು ಹಣವನ್ನು ವೈದ್ಯರು, ಸಿಬ್ಬಂದಿಗೆ ಮೀಸಲಿಡಲಾಗಿದೆ. ಉಳಿದ ಶೇ. 70ರಷ್ಟು ಹಣ ಇಲ್ಲಿನ ಆರೋಗ್ಯ ರಕ್ಷಾ ಸಮಿತಿಗೆ ಹೋಗುತ್ತದೆ. ಇಲ್ಲಿ ಸಮಿತಿಯವರು ತಮ್ಮ ಆಸ್ಪತ್ರೆಗೆ ಏನೂ ಬೇಕೋ ಅದನ್ನು ಖರೀದಿಸಬಹುದಾಗಿದೆ.

ಆರೋಗ್ಯ ಕೇಂದ್ರಗಳಲ್ಲಿ ಕಿರಿಯ ಸಹಾಯಕಿಯರ ಕೊರತೆ:

ಜಿಲ್ಲೆಯ ಆರೋಗ್ಯ ಕೇಂದ್ರಗಳಲ್ಲಿ 45 ಆರೋಗ್ಯ ಸಹಾಯಕಿಯರ ಕೊರತೆ ಇದೆ. ಇವರೆಲ್ಲಾ ಪ್ರಮೋಷನ್ ಪಡೆದು ಹಿರಿಯ ಸಹಾಯಕಿಯರಾಗಿ ಹೋಗಿರುವ ಕಾರಣ ಕೊರತೆ ಉಂಟಾಗಿದೆ. ಅದಷ್ಟು ಬೇಗ ಕಿರಿಯ ಸಹಾಯಕಿಯರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಕೋವಿಡ್ ಪರೀಕ್ಷಾ ಕೇಂದ್ರಗಳ ನಿರಂತರ ಕಾರ್ಯ: ಬೆಣ್ಣೆನಗರಿಯ ಜನರಿಗಿಲ್ಲ ವೈದ್ಯಕೀಯ ಸೇವೆಯ ವ್ಯತ್ಯಯ

ತುಂಗಾನಗರ, ಬಾಪೂಜಿ ನಗರ, ಕೋಟೆ ಆರೋಗ್ಯ ಕೇಂದ್ರ, ವಿದ್ಯಾನಗರ, ಬೊಮ್ಮನಕಟ್ಟೆ, ಸಿಗೇಹಟ್ಟಿ, ಶಾಂತಿನಗರ ಹಾಗೂ ಊರುಗಡೂರು ಒಟ್ಟು 8 ನಗರ ಆರೋಗ್ಯ ಕೇಂದ್ರಗಳಲ್ಲಿ ತುಂಗಾನಗರ ಆರೋಗ್ಯ ಕೇಂದ್ರ ಪ್ರಸೂತಿ ವ್ಯವಸ್ಥೆಯನ್ನು ಹೊಂದಿದೆ. ಇಲ್ಲಿ ಪ್ರತಿ ತಿಂಗಳು 20 ಪ್ರಸೂತಿಗಳನ್ನು ಮಾಡಿಸಲಾಗುತ್ತಿದೆ. ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಪರೀಕ್ಷೆ ಹಾಗೂ ಕೋವಿಡ್ ಚುಚ್ಚುಮದ್ದು ನೀಡಲಾಗುತ್ತಿದೆ. ಸಾರ್ವಜನಿಕರು ಸಹ ಆರೋಗ್ಯ ಕೇಂದ್ರದ ಸೇವೆಯ ಬಗ್ಗೆ ತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.