ETV Bharat / state

ಸನಾತನ ಹಿಂದೂ ಧರ್ಮವನ್ನು ಮತ್ತಷ್ಟು ಗಟ್ಟಿಗೊಳಿಸಬೇಕಾದ ಅವಶ್ಯಕತೆ ಇದೆ : ಶ್ರೀ ವಿಶ್ವಪ್ರಸನ್ನ ತೀರ್ಥರು - ಸನಾತನ ಹಿಂದೂ ಸಮಾಜ ಪರಿಷತ್

ಎಲ್ಲಾ ಜಾತಿಗಳ ಗುರುಪೀಠಗಳು, ಮಠಗಳು ಇಲ್ಲಿವೆ. ಆಚಾರ-ವಿಚಾರ, ವೇಷಭೂಷಣಗಳು ಭಿನ್ನತೆಯಿಂದ ಕೂಡಿವೆ. ಅವೆಲ್ಲವೂ ಒಟ್ಟಾದಾಗ ಸನಾತನ ಹಿಂದೂ ಧರ್ಮ ವಿಜೃಂಭಿಸುತ್ತದೆ. ಇಲ್ಲದೇ ಹೋದರೆ, ಹಿಂದೂ ಧರ್ಮ ದುರ್ಬಲವಾಗುವ ಸಾಧ್ಯತೆ ಇದೆ. ಯಾವ ಕಾರಣಕ್ಕೂ ನಾವು ಹಿಂದೂ ಧರ್ಮ ಮರೆಯಬಾರದು. ಅದು ಇಡೀ ಮಾನವ ಸಮುದಾಯಕ್ಕೆ ಬೆಳಕು ನೀಡುತ್ತದೆ..

ಶ್ರೀ ವಿಶ್ವಪ್ರಸನ್ನ ತೀರ್ಥರು
ಶ್ರೀ ವಿಶ್ವಪ್ರಸನ್ನ ತೀರ್ಥರು
author img

By

Published : Nov 27, 2021, 7:10 PM IST

ಶಿವಮೊಗ್ಗ : ಸನಾತನ ಹಿಂದೂ ಧರ್ಮವನ್ನು ಮತ್ತಷ್ಟು ಗಟ್ಟಿಗೊಳಿಸಬೇಕಾದ ಅವಶ್ಯಕತೆ ಇದೆ. ಇದಕ್ಕಾಗಿ ಎಲ್ಲರೂ ಒಟ್ಟಾಗಬೇಕು ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ಕರೆ ನೀಡಿದರು.

ಸನಾತನ ಹಿಂದೂ ಸಮಾಜ ಪರಿಷತ್ ವತಿಯಿಂದ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಶ್ರೀ ಕನದಾಸ ಜಯಂತಿ ಮಹೋತ್ಸವದಲ್ಲಿ ಸಾನಿಧ್ಯವಹಿಸಿ ಮಾತನಾಡಿದ ಅವರು, ನಮ್ಮದು ಸನಾತನ ಹಿಂದೂ ಧರ್ಮದ ಪುಣ್ಯಭೂಮಿಯಾಗಿದೆ.

ದಾರ್ಶನಿಕರೆಲ್ಲರೂ ಹಿಂದೂ ಧರ್ಮದ ತಳಹದಿಯ ಮೇಲೆ ಕೆಲಸ ಮಾಡಿದ್ದಾರೆ. ಎಲ್ಲಾ ಗುರು ಪೀಠಗಳು ತಮ್ಮ ತಮ್ಮ ಸಿದ್ಧಾಂತಗಳನ್ನು ವೈಭವೀಕರಿಸಿದ್ದರೂ ಕೂಡ ಅದರ ಒಳಗೆ ಹಿಂದೂ ಧರ್ಮದ ತಳಹದಿ ಇದೆ. ಭಾವೈಕ್ಯವಿದೆ ಎಂದು ಹೇಳಿದರು.

ಶ್ರೀ ಕನದಾಸ ಜಯಂತಿ ಮಹೋತ್ಸವ..

ಸಮಾಜದಲ್ಲಿ ಎಲ್ಲವೂ ಒಂದೇ ರೀತಿ ಇರುವುದಿಲ್ಲ ನಿಜ. ನಮ್ಮ ಕೈಬೆರಳುಗಳೆಲ್ಲಾ ಬೇರೆ ಬೇರೆಯೇ ಆಗಿರುತ್ತವೆ. ಆದರೆ, ಅದನ್ನು ಮುಷ್ಠಿ ಮಾಡಿದರೆ ಅದಕ್ಕೆ ತನ್ನದೇ ಆದ ಶಕ್ತಿ ಬರುತ್ತದೆ. ಹಾಗೆಯೇ, ಎಲ್ಲಾ ಜಾತಿಗಳ ಗುರುಪೀಠಗಳು, ಮಠಗಳು ಇಲ್ಲಿವೆ. ಆಚಾರ-ವಿಚಾರ, ವೇಷಭೂಷಣಗಳು ಭಿನ್ನತೆಯಿಂದ ಕೂಡಿವೆ.

ಅವೆಲ್ಲವೂ ಒಟ್ಟಾದಾಗ ಸನಾತನ ಹಿಂದೂ ಧರ್ಮ ವಿಜೃಂಭಿಸುತ್ತದೆ. ಇಲ್ಲದೇ ಹೋದರೆ, ಹಿಂದೂ ಧರ್ಮ ದುರ್ಬಲವಾಗುವ ಸಾಧ್ಯತೆ ಇದೆ. ಯಾವ ಕಾರಣಕ್ಕೂ ನಾವು ಹಿಂದೂ ಧರ್ಮ ಮರೆಯಬಾರದು. ಅದು ಇಡೀ ಮಾನವ ಸಮುದಾಯಕ್ಕೆ ಬೆಳಕು ನೀಡುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ, ಬೆಕ್ಕಿನ ಕಲ್ಮಠ ಪ್ರಸನ್ನನಾಥ ಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠ, ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿ, ಚಿತ್ರದುರ್ಗ ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.