ETV Bharat / state

ಕೊರೊನಾದಿಂದ ಈಶ್ವರಪ್ಪ ಗುಣಮುಖ: 101 ತೆಂಗಿನಕಾಯಿ ಒಡೆದ ಅಭಿಮಾನಿ - Ishwarappa recovers from corona

ಸಚಿವ ಈಶ್ವರಪ್ಪ ಕೊರೊನಾದಿಂದ ಗುಣಮುಖರಾದ ಹಿನ್ನೆಲೆ ನಗರದ ಸರ್ವಸಿದ್ಧಿ ಗಣಪನ ದೇವಾಲಯದಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೆ 101 ತೆಂಗಿನಕಾಯಿ ಒಡೆದು ಪೂಜೆ ನೆರವೇರಿಸಿದರು.

Ishwarappa-recovers-from-corona
ಕೊರೊನಾದಿಂದ ಈಶ್ವರಪ್ಪ ಗುಣಮುಖ
author img

By

Published : Oct 2, 2020, 1:08 PM IST

ಶಿವಮೊಗ್ಗ: ಗ್ರಾಮೀಣಾಭಿವೃದ್ದಿ, ಪಂಚಾಯತ್ ರಾಜ್​​​ ಸಚಿವ ಕೆ.ಎಸ್.ಈಶ್ವರಪ್ಪ ಕೊರೊನಾದಿಂದ ಗುಣಮುಖರಾದ ಹಿನ್ನೆಲೆ ಈಶ್ವರಪ್ಪ ಅಭಿಮಾನಿ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, 101 ತೆಂಗಿನಕಾಯಿ ಒಡೆದರು. ಇಲ್ಲಿನ ವಿಜಯನಗರದ ಸರ್ವಸಿದ್ಧಿ ಗಣಪತಿ ದೇವಾಲಯದಲ್ಲಿ ಈಶ್ವರಪ್ಪ ಅಭಿಮಾನಿ‌ ಜೀವನ್ ಹಾಗೂ ಸ್ನೇಹಿತರು ವಿಶೇಷ ಪೂಜೆ ಸಲ್ಲಿಸಿದರು.

ಸಚಿವ ಈಶ್ಬರಪ್ಪ ಅಭಿಮಾನಿಗಳಿಂದ ವಿಶೇಷ ಪೂಜೆ

ಈ ವೇಳೆ ಸಚಿವ ಈಶ್ವರಪ್ಪ ಸಹ ಆಗಮಿಸಿ ಪೂಜೆ ಸಲ್ಲಿಸಿದರು. ಇನ್ನು ಕೊರೊನಾಗೆ ತುತ್ತಾಗಿದ್ದ ಸಚಿವ ಈಶ್ವರಪ್ಪ ಬೆಂಗಳೂರಿನ ಮಣಿಪಾಲ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮರಳಿದ್ದರು.

ಕೊರೊನಾದಿಂದ ಬೇಗ ಗುಣಮುಖರಾದರೆ ಅಭಿಮಾನಿಗಳು ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ, 101 ತೆಂಗಿನಕಾಯಿ ಒಡೆಯುವ ಹರಕೆಯನ್ನು ಕಟ್ಟಿಕೊಳ್ಳಲಾಗಿತ್ತು. ಈ ಹಿನ್ನೆಲೆ ದೇವಾಲಯಕ್ಕೆ ಆಗಮಿಸಿದ ಈಶ್ವರಪ್ಪ ಮೊದಲ ತೆಂಗಿನಕಾಯಿ ಒಡೆದು ಕಾರ್ಯಕ್ಕೆ ಶುಭ ಹಾರೈಸಿ ತೆರಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.