ETV Bharat / state

ಗಾಂಜಾ, ಮಟ್ಕಾ ಹಾಗೂ ಅಕ್ರಮ ಮದ್ಯಕ್ಕೆ ಕಡಿವಾಣ ಹಾಕುವ ಯೋಜನೆ ಇದೆ: ಎಸ್ಪಿ ಲಕ್ಷ್ಮೀ ಪ್ರಸಾದ್ - ಎಸ್ಪಿ ಲಕ್ಷ್ಮೀ ಪ್ರಸಾದ್ ಪತ್ರಿಕಾಗೋಷ್ಠಿ

ಶಿವಮೊಗ್ಗದಲ್ಲಿ ನಡೆದ ಸಂವಾದದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಲಕ್ಷ್ಮೀ ಪ್ರಸಾದ್ ಭಾಗಿಯಾಗಿದ್ದರು. ಈ ವೇಳೆ ಜಿಲ್ಲೆಯಲ್ಲಿನ ಪ್ರಕರಣಗಳ ಕುರಿತಂತೆ ಮಾಹಿತಿ ನೀಡಿದರು.

SP Lakshmi prasad Pressmeet at Shimoga
ಎಸ್ಪಿ ಲಕ್ಷ್ಮೀ ಪ್ರಸಾದ್ ಪತ್ರಿಕಾಗೋಷ್ಠಿ
author img

By

Published : Jan 27, 2022, 5:53 PM IST

ಶಿವಮೊಗ್ಗ: ಮುಂದಿನ ವರ್ಷ ಗಾಂಜಾ, ಮಟ್ಕಾ ಹಾಗೂ ಅಕ್ರಮ ಮದ್ಯ ತಡೆಯುವ ಉದ್ದೇಶವನ್ನು ಜಿಲ್ಲಾ ಪೊಲೀಸ್ ಹೊಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್. ಲಕ್ಷ್ಮೀ ಪ್ರಸಾದ್ ಹೇಳಿದರು.

ಎಸ್ಪಿ ಲಕ್ಷ್ಮೀ ಪ್ರಸಾದ್ ಮಾಧ್ಯಮಗೋಷ್ಟಿ

ನಗರದ ಪ್ರೆಸ್ ಟ್ರಸ್ಟ್​​​​​​ನಲ್ಲಿ ನಡೆದ ಸಂವಾದದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಗಾಂಜಾ ಮಾರಾಟ ಹಾಗೂ ಸೇವನೆ ತಡೆಯುವ ದೃಷ್ಟಿಯಿಂದ ಸಾಕಷ್ಟು ಕ್ರಮ ತೆಗೆದುಕೊಳ್ಳಲಾಗಿದೆ. ಗಾಂಜಾ ಜಿಲ್ಲೆಗೆ ಎಲ್ಲಿಂದ, ಹೇಗೆ ಸರಬರಾಜು ಆಗುತ್ತಿತ್ತು ಎ‌ಂಬುದರ ಬಗ್ಗೆ ತೀವ್ರವಾಗಿ ತನಿಖೆ ನಡೆಸಿ, ಗಾಂಜಾ ಸರಬರಾಜು ಆಗುವುದನ್ನು ಬಂದ್ ಮಾಡಲಾಗಿದೆ. ಇದಕ್ಕಾಗಿ ಪ್ರತ್ಯೇಕ ತಂಡ ರಚನೆ ಮಾಡಿ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.‌

ಸಿಬ್ಬಂದಿ ಕೊರತೆ: ಜಿಲ್ಲೆಯಲ್ಲಿ 32 ಪಿಎಸ್​​​ಐ ಹಾಗೂ 105 ಕಾನ್​​​​ಸ್ಟೇಬಲ್​ಗಳು ಕೊರತೆ ಇದೆ. ​​​​​ಇವರನ್ನು ಅದಷ್ಟು ಬೇಗ ನೇಮಕ ಮಾಡಿಕೊಳ್ಳಲಾಗುವುದು. ಜಿಲ್ಲಾ ಶಸ್ತ್ರಾಸ್ತ್ರ ಮೀಸಲು ಪಡೆಯಲ್ಲೂ ಸಹ ಸಿಬ್ಬಂದಿ ಕೊರತೆ ಇದ್ದು, ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಹಾಲಿ ಕರ್ತವ್ಯದಲ್ಲಿರುವವರಿಗೆ ಗಲಭೆಯನ್ನು ಹೇಗೆ ನಿಭಾಹಿಸಬೇಕೆಂದು ತರಬೇತಿ ನೀಡಲಾಗುತ್ತಿದೆ. ಮುಂದಿನ ವರ್ಷ ಎಲ್ಲಾ ಕ್ರೈಂಗಳಲ್ಲೂ ಶೇ.10 ರಷ್ಟು ಕಡಿಮೆ ಮಾಡಬೇಕೆಂಬ ಉದ್ದೇಶವಿದೆ ಎಂದು ಎಸ್​ಪಿ ಮಾಹಿತಿ ನೀಡಿದರು.‌

ಅಪರಾಧಗಳಲ್ಲಿ ಅಪ್ರಾಪ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿ: ಜಿಲ್ಲೆಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಅಪರಾಧ ಪ್ರಕರಣದಲ್ಲಿ 15 ರಿಂದ 22 ವರ್ಷದೊಳಗಿನ ಅಪ್ರಾಪ್ತರು ಭಾಗಿಯಾಗಿರುವುದು ಹೆಚ್ಚಿದೆ. ಇವರೆಲ್ಲ ಸಣ್ಣ ವಯಸ್ಸಿನಲ್ಲಿಯೇ ಹಣ ನೋಡಿ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದಾರೆ ಎಂದರು.‌

ಜೈಲಿ​​​​ನಲ್ಲಿ ಬಚ್ಚಾ ಬಳಕೆ ಮಾಡುತ್ತಿದ್ದ ಫೋನ್ ವಶಕ್ಕೆ: ರೌಡಿ ಶೀಟರ್ ಬಚ್ಚಾ ಜೈಲಿನಲ್ಲಿಯೇ ಅಕ್ರಮವಾಗಿ ಫೋನ್ ಬಳಕೆ ಮಾಡಿ ಹಣಕ್ಕೆ ಬೆದರಿಕೆ ಹಾಕುತ್ತಿದ್ದ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಜೈಲಿನ ಮೇಲೆ ದಾಳಿ ನಡೆಸಿ, ಆತನಿಂದ ಒಂದು ಮೊಬೈಲ್ ಫೋನ್​​​ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಸೆಲ್ಫಿ ಹುಚ್ಚು: ಹೊಗೇನಕಲ್ ಜಲಪಾತದಲ್ಲಿ ಬಿದ್ದು ವಿದ್ಯಾರ್ಥಿ ಸಾವು

ಕಳೆದ ಆರು ತಿಂಗಳಲ್ಲಿ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಕ್ರೈಂ ಪ್ರಕರಣ ನಡೆದಿಲ್ಲ.‌ ಪೊಲೀಸರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮನೆಗಳ್ಳರನ್ನು ಹೆಚ್ಚಾಗಿ ಬಂಧಿಸಿರುವ ಕಾರಣ ಕಳ್ಳತನ ಪ್ರಕರಣಗಳು ಕಡಿಮೆಯಾಗಿವೆ. ಜಿಲ್ಲೆಯಲ್ಲಿ ಐಪಿಸಿ ಅಪರಾಧ ಪ್ರಕರಣಗಳು ಶೇ.8 ರಷ್ಟು ಕಡಿಮೆಯಾಗಿದೆ. ಅಬಕಾರಿ, ಜೂಜು ಪ್ರಕರಣಗಳು ಶೇ.25 ರಷ್ಟು ಹೆಚ್ಚಿದೆ. ಡಕಾಯಿತಿ, ಮನೆಗಳ್ಳತನ ಕೇಸ್​​​ ಶೇ.12 ರಷ್ಟು ಕಡಿಮೆಯಾಗಿದೆ. ಆದರೆ ವಾಹನ ಕಳ್ಳತನ ಶೇ.10 ರಷ್ಟು ಹೆಚ್ಚಿದೆ. ಜಿಲ್ಲೆಯಲ್ಲಿ ರಾಬರಿ ಪ್ರಕರಣಗಳು ಕಳೆದ ವರ್ಷ ಶೇ.28 ರಷ್ಟಿತ್ತು. ಈ ವರ್ಷದಲ್ಲಿ ಅದು ಶೇ.52ಕ್ಕೆ ಏರಿಕೆಯಾಗಿದೆ.‌ ಕಳೆದ ವರ್ಷ ಜಿಲ್ಲೆಯಲ್ಲಿ 17 ಸರಗಳ್ಳತನ ಪ್ರಕರಣ ನಡೆದಿದೆ. ಪೋಕ್ಸೋ ಕೇಸ್ ಹೆಚ್ಚಾಗಿದೆ. ಇದಕ್ಕಾಗಿ ಈ ಬಗ್ಗೆ ಅರಿವು ಮೂಡಿಸಲು ಯತ್ನ ನಡೆಸಲಾಗುತ್ತಿದೆ ಎಂದರು.

ಈ ವೇಳೆ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಕಾರ್ಯದರ್ಶಿ ನಾಗರಾಜ್ ನೇರಿಗೆ ಸೇರಿದಂತೆ ಮೊದಲಾದವರು ಹಾಜರಿದ್ದರು.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.