ETV Bharat / state

ಗಾಂಜಾ ಮಾರಾಟಗಾರರನ್ನು ಹಿಡಿದ ಭದ್ರಾವತಿ ಪೊಲೀಸರಿಗೆ ಎಸ್ಪಿಯಿಂದ ಬಹುಮಾನ - shivmogga crime news

ಭದ್ರಾವತಿಯ ಹಳೆನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಿ.ಹೆಚ್.ರಸ್ತೆಯಲ್ಲಿ ಓಮಿನಿ ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ತಂಡವನ್ನು ಪೊಲೀಸರು ಬಂಧಿಸಿದ್ದರು. ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಎಸ್​ಪಿ ಪೊಲೀಸ್​ ಸಿಬ್ಬಂದಿಗೆ 10 ಸಾವಿರ ಬಹುಮಾನ ನೀಡಿದ್ದಾರೆ.

ಎಸ್ಪಿಯಿಂದ ಬಹುಮಾನ
ಎಸ್ಪಿಯಿಂದ ಬಹುಮಾನ
author img

By

Published : Sep 8, 2020, 1:22 AM IST

ಶಿವಮೊಗ್ಗ: ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ 8 ಜನ ಆರೋಪಿಗಳನ್ನು ಬಂಧಿಸಿ, ಅವರಿಂದ 6 ಕೆ.ಜಿ 400 ಗ್ರಾಂ ತೂಕದ ಗಾಂಜಾ ವಶಕ್ಕೆ ಪಡೆದ ಭದ್ರಾವತಿ ತಂಡಕ್ಕೆ ಎಸ್ಪಿ ಕೆ.ಎಂ.ಶಾಂತರಾಜು ರವರು 10 ಸಾವಿರ ರೂ. ನಗದು ಬಹುಮಾನ ನೀಡಿದ್ದಾರೆ‌.

ಭದ್ರಾವತಿಯ ಹಳೆನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಿ.ಹೆಚ್.ರಸ್ತೆಯಲ್ಲಿ ಓಮಿನಿ ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ತಂಡವನ್ನು ಪೊಲೀಸರು ಬಂಧಿಸಿದ್ದಾರೆ. ಈ ಗಾಂಜಾ ಮೌಲ್ಯ ಸುಮಾರು 2 ಲಕ್ಷದಾಗಿದೆ. ಅಲ್ಲದೆ 2.50 ಲಕ್ಷ ರೂ ಮೌಲ್ಯದ ಕಾರನ್ನು ಹಾಗೂ 8 ಜನ ಆರೋಪಿಯನ್ನು ಬಂಧಿಸಲಾಗಿತ್ತು.

ಭದ್ರಾವತಿ ಪೊಲೀಸರ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿ, ತಮ್ಮ ಕಚೇರಿಯಲ್ಲಿ ಬಹುಮಾನವನ್ನು ನೀಡಿದ್ದಾರೆ. ಬಹುಮಾನವನ್ನು ಭದ್ರಾವತಿಯ ಡಿವೈಎಸ್ಪಿ ಸುಧಾಕರ್ ಹಾಗೂ ಹಳೆನಗರ ಪೊಲೀಸ್ ಠಾಣೆಯ ಸಿಪಿಐ ರಾಘವೇಂದ್ರ ಕಾಂಡಿಕೆ ರವರು ತಮ್ಮ ತಂಡದ ಪರವಾಗಿ ಸ್ವೀಕಾರ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.