ETV Bharat / state

‘ತಲೆಕೆಟ್ಟೋರು ರಾಜೀನಾಮೆ ಕೇಳ್ತಾರೆ ಅಂದ್ರೆ ಕೊಡೋಕೆ ಆಗುತ್ತಾ?’:  ಸಿಎಂ ಎದಿರೇಟು

author img

By

Published : Dec 23, 2019, 3:41 PM IST

ಇಂದು ಮಧ್ಯಾಹ್ನ ಶಿವಮೊಗ್ಗಕ್ಕೆ ಆಗಮಿಸಿದೆ ಸಿಎಂ ಬಿಎಸ್​ವೈ, ಸಾವಯುವ ಆಹಾರದ ಬದಲು ವಿಷಪೂರಿತ ಆಹಾರವನ್ನು ನಾವು ಸೇವಿಸುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದ್ದು, ಅದಲ್ಲದೇ ರಾಜೀನಾಮೆ ವಿಷಯವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಭರ್ಜರಿಯಾಗೇ ಟಾಂಗ್​ ನೀಡಿದ್ದಾರೆ.

CM BSY
ಸಿಎಂ ಬಿಎಸ್​ವೈ

ಶಿವಮೊಗ್ಗ: ತಲೆಕೆಟ್ಟವರು ರಾಜೀನಾಮೆ ಕೇಳಿದ್ರೆ ನೀಡುವುದಕ್ಕೆ ಆಗುವುದಿಲ್ಲ ಎಂದು ಸಿಎಂ ಯಡಿಯೂರಪ್ಪ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ರಾಜೀನಾಮೆ ಕೇಳಿದ್ದ ಮಾಜಿ ಸಿಎಂ ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ.

ಶಿವಮೊಗ್ಗದ ಪೆಸಿಟ್ ಕಾಲೇಜಿನಲ್ಲಿ ಸುಭಿಕ್ಷಾ ಸಾವಯವ ಸಮಾವೇಶದ ಉದ್ಘಾಟನೆಗೆ ಆಗಮಿಸಿದ ವೇಳೆ, ಶಿವಮೊಗ್ಗದ ಹೆಲಿಪ್ಯಾಡ್​​ನಲ್ಲಿ ಸುದ್ದಿಗಾರೂಂದಿಗೆ ಮಾತನಾಡಿದ ಸಿಎಂ, ಗೋಲಿಬಾರ್ ಬಗ್ಗೆ ಮಾಹಿತಿ ಇಲ್ಲದ ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ, ತಲೆ ಕೆಟ್ಟವರ ಮಾತಿಗೆ ಬೆಲೆ ಕೊಡುವುದಿಲ್ಲ ಎಂದಿದ್ದಾರೆ. ಇನ್ನು ಕ್ರಿಮಿನಾಶಕ, ರಾಸಾಯನಿಕ ಗೊಬ್ಬರಗಳಿಂದ ವಿಷಪೂರಿತ ಆಹಾರ ಬೆಳೆಯುತ್ತಿದ್ದೇವೆ. ಇದರಿಂದ ಅನೇಕ ರೋಗ -ರುಜಿನೆಗಳಿಗೆ ನಾವು ತುತ್ತಾಗುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.

ದೇಶದಲ್ಲಿ ಉದ್ದೇಶ ಪೂರಿತವಾಗಿ ಅಲ್ಪಸಂಖ್ಯಾತರಲ್ಲಿ ಗೊಂದಲವನ್ನುಂಟು ಮಾಡಲಾಗುತ್ತಿದೆ. ಯಾರು ಪ್ರತಿಭಟನೆ ನಡೆಸುತ್ತಿದ್ದಾರೆ, ಅವರು ಅಲ್ಪಸಂಖ್ಯಾತರಿಗೆ ಅನ್ಯಾಯ ಆಗ್ತಾ ಇದೆ ಅಂತ ಮಾತನಾಡುತ್ತಿಲ್ಲ. ಎಲ್ಲ ರೀತಿಯ ಹಿನ್ನಡೆ ಅನುಭವಿಸಿದವರು ಈ ರೀತಿ ಗೊಂದಲವನ್ನು ಹುಟ್ಟು ಹಾಕುತ್ತಿದ್ದಾರೆ ಎಂದು ಟಾಂಗ್​ ಕೊಟ್ಟರು.

Intro:ತಲೆಕೆಟ್ಟವರು ರಾಜೀನಾಮೆ ಕೇಳಿದ್ರೆ ನೀಡೂದಕ್ಕೆ ಆಗುವುದಿಲ್ಲ ಎಂದು ಸಿಎಂ ಯಡಿಯೂರಪ್ಪ ಗೃಹ ಸಚಿವ ಬಸವರಾಜ ಬೊಮ್ಮಯಿ‌ ರಾಜೀನಾಮೆ ಕೇಳಿದ ಮಾಜಿ ಸಿಎಂ ಕುಮಾರಸ್ವಾಮಿಗೆ ಶಿವಮೊಗ್ಗದಲ್ಲಿ ಟಾಂಗ್ ನೀಡಿದ್ದಾರೆ. ಶಿವಮೊಗ್ಗದ ಪೆಸೆಟ್ ಕಾಲೇಜಿನಲ್ಲಿ ಸುಭಿಕ್ಷಾ ಸಾವಯವ ಸಮಾವೇಶ ಉದ್ಘಾಟನೆ ಮಾಡಲು ಆಗಮಿಸಿದ ವೇಳೆ ಶಿವಮೊಗ್ಗದ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರೂಂದಿಗೆ ಮಾತನಾಡಿದ ಸಿಎಂ ಗೋಲಿಬಾರ್ ಬಗ್ಗೆ ಮಾಹಿತಿ ಇಲ್ಲದ ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಸಿಎಂ ತಲೆ ಕೆಟ್ಟವತ ಮಾಹಿತಿ ಬೆಲೆ ಇಲ್ಲ ಎಂದರು. ಇನ್ನೂ ಕ್ರಿಮಿನಾಶಕ, ರಾಸಾಯನಿಕ ಗೊಬ್ಬರಗಳಿಂದ ವಿಷಪೊರಿತ ಆಹಾರ ಬೆಳೆಯುತ್ತಿದ್ದೆವೆ. ಇದರಿಂದ ಅನೇಕ ರೋಗರುಜಿನೆಗಳಿಗೆ ತುತ್ತಾಗುತ್ತಿದ್ದೆವೆ.

Body:ನಾನು ಸಿಎಂ ಆದಾಗ ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಿದ್ದೆ, ಪ್ರತಿ ತಿಂಗಳು ಸಾವಯವ ಕೃಷಿ ಕುಟುಂಬದ ಭೇಟಿ ಮಾಡುತ್ತಿದ್ದೆ ಎಂದು ಹಳೆಯದನ್ನು ನೆನಪು ಮಾಡಿ ಕೊಂಡರು. ಈಗ ಕೃಷಿಕರೆ ತಾವೇ ಸುಭಿಕ್ಷಾ ಸಾವಯವ ಕೃಷಿ ಸಮಾವೇಶ ನಡೆಸುತ್ತಿದ್ದಾರೆ. ಈ ಕಾರ್ಯಕ್ರಮದ ನಂತ್ರ ತುರ್ತು ಕೆಲಸದ ಕಾರಣ ಬೆಂಗಳೂರಿಗೆ ವಾಪಸ್ ಆಗಲಿದ್ದೆನೆ ಎಂದರು. ಕೇಂದ್ರದ ರಾಜ್ಯ ಕೃಷಿ ಸಚಿವರು ಆಗಮಿಸಿದ್ದರು. ಆದ್ರೆ, ಪ್ರದಾನ ಮಂತ್ರಿರವರು ಎಲ್ಲಾ ಸಚಿವರ ತುರ್ತು ಸಭೆ ಕರೆದ ಕಾರಣ ವಾಪಸ್ ಆಗಿದ್ದಾರೆ ಎಂದರು.

Conclusion:ದೇಶದಲ್ಲಿ ಉದ್ದೇಶ ಪೂರಿತ ಅಲ್ಪಸಂಖ್ಯಾತರಲ್ಲಿ ಗೊಂದಲವನ್ನುಂಟು ಮಾಡಲಾಗುತ್ತಿದೆ. ಯಾರು ಪ್ರತಿಭಟನೆ ನಡೆಸುತ್ತಿದ್ದಾರೆ, ಅವರು ಅಲ್ಪಸಂಖ್ಯಾತರಿಗೆ ಅನ್ಯಾಯ ಆಗ್ತಾ ಇದೆ ಅಂತ ಮಾತನಾಡುತ್ತಿಲ್ಲ. ಎಲ್ಲಾ ರೀತಿಯ ಹಿನ್ನಡೆ ಅನುಭವಿಸಿದವರು ಈ ರೀತಿ ಗೊಂದಲವನ್ನು ಹುಟ್ಟು ಹಾಕುತ್ತಿದ್ದಾರೆ ಎಂದು ಕಿಡಿ ಕಾರಿದ್ದರು. ಇದರಿಂದ ಮಂಗಳೂರಿನ ಘಟನೆಯನ್ನು ಸಿಒಡಿ ತನಿಖೆಯ ಜೊತೆಗೆ ನ್ಯಾಯಾಂಗ ತನಿಖೆಯನ್ನು‌ ನಡೆಸಲು‌‌ ಆದೇಶ ನೀಡಿದ್ದೆನೆ ಎಂದರು. ಗೋಲಿಬಾರ್ ನಲ್ಲಿ ಮೃತರಾದವರು ಸ್ಥಳೀಯ ಪೊಲೀಸ್ ಠಾಣೆಯನ್ನು ಸುಡಲು ಹಾಗೂ ಅಲ್ಲಿನ ಆಯುಧಗಳನ್ನು ತೆಗೆದು ವಿದ್ವಾಂಸಕ ಕೃತ್ಯಗಳನ್ನು ಸಂಚು ರೂಪಿಸಿದ್ದರು ಎಂದರು. ಕೇರಳದಿಂದ ಬಂದ ಯುವಕರು ಮುಖಕ್ಕೆ ಬಟ್ಟೆ ಕಟ್ಟಿ ಕೊಂಡು ದಾಂಧಲೆ ನಡೆಸಿದ್ದರು. ಸಮಾಜದಲ್ಲಿ ಶಾಂತಿ ಕಾಪಾಡಿ, ನಿಮ್ಮ ಸಮಸ್ಯೆಗಳಿದ್ದರೆ ತಿಳಿಸಿ, ಒಂದು ವೇಳೆ ಪ್ರತಿಭಟನೆ ನಡೆಸುವುದಾದರೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಿ ಎಂದು ವಿನಂತಿ ಮಾಡಿ ಕೊಂಡರು. ಔರಾಧಕರ್ ವರದಿಯನ್ನು ಜಾರಿಗೆ ತರಲಾಗಿದೆ. ಅದರಲ್ಲಿ ಏನಾದರೂ‌ ಸಣ್ಣ ಪುಟ್ಟ ವೈತ್ಯಾಸಗಳಿದ್ದರೆ ಅದನ್ನು ಸರಿಪಡಿಸಿ ಜಾರಿ ಮಾಡಲಾಗುವುದು ಎಂದರು. ಈ ವೇಳೆ ಡಿಸಿಎಂ ಲಕ್ಷ್ಮಣ ಸವದಿ,‌ ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಆರಗ ಜ್ಞಾನೇಂದ್ರ, ರುದ್ರೇಗೌಡ ಸೇರಿ‌ ಇತರರು ಹಾಜರಿದ್ದರು. ಈ ವೇಳೆ ಸಿಎಎ ಕುರಿತು ಮನವಿ‌ ಸಲ್ಲಿಸಿದ ಅಲ್ಪ ಸಂಖ್ಯಾತರಿಗೆ ಈ ಕಾನೂನೂನಿಂದ ಯಾರಿಗೂ ತೂಂದ್ರೆ ಆಗಲ್ಲ. ನಿಮ್ಮ ಯಡಿಯೂರಪ್ಪ ಇರುವವರೆಗೂ ಯಾವ ಸಮಸ್ಯೆ ಆಗೂದಿಲ್ಲ ಎಂದರು.

ಬೈಟ್: ಬಿ.ಎಸ್.ಯಡಿಯೂರಪ್ಪ. ಸಿಎಂ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.