ಶಿವಮೊಗ್ಗ : ಮನೆವೊಂದರ ಹಿಂಬದಿಯ ಚರಂಡಿ ಸ್ವಚ್ಛಗೊಳಿಸುವಾಗ ಒಂದು ಹಾವು ಹಾಗೂ 30 ಮೊಟ್ಟೆಗಳು ಪತ್ತೆಯಾಗಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ವಿವೇಕಾನಂದ ಬಡಾವಣೆಯ ವೃದ್ದಾಶ್ರಮದ ಹಿಂಬದಿಯ ಸಿ.ಬ್ಲಾಕ್ ನಲ್ಲಿ ಆನಂದ್ ಎಂಬುವವರ ಮನೆ ಬಳಿ ಹಾವು ಹಾಗೂ ಮೊಟ್ಟೆ ಪತ್ತೆಯಾಗಿವೆ. ಚರಂಡಿ ಸ್ವಚ್ಛ ಮಾಡಲು ಚಪ್ಪಡಿ ಕಲ್ಲನ್ನು ತೆಗೆದಾಗ ಸುಮಾರು 3 ಅಡಿ ಉದ್ದದ ಕೆರೆ ಹಾವು ಕಂಡಿದೆ. ಕೆಲಸಗಾರರು ಸ್ನೇಕ್ ಕಿರಣ್ ಗೆ ಫೋನ್ ಮಾಡಿದ್ದಾರೆ. ಸ್ಥಳಕ್ಕೆ ಬಂದ ಸ್ನೇಕ್ ಕಿರಣ್ ಕಲ್ಲನ್ನು ತೆಗೆದು ನೋಡಿದಾಗ ಹಾವಿನ ಜೊತೆ 30 ಮೊಟ್ಟೆಗಳು ಪತ್ತೆಯಾಗಿವೆ.
ಸಾಮಾನ್ಯವಾಗಿ ಕೆರೆ ಹಾವು 5 ಅಡಿಗಿಂತ ಉದ್ದವಾಗಿರುತ್ತದೆ, ಆದರೆ ಈ ಹಾವು ಮೂರು ಅಡಿ ಇದ್ದು, ಇಷ್ಟೊಂದು ಮೊಟ್ಟೆ ಇಟ್ಟಿರುವುದು ನಿಜಕ್ಕೂ ಅಚ್ಚರಿ ತಂದಿದೆ. ಸ್ನೇಕ್ ಕಿರಣ್ ಹಾವು ಹಾಗೂ ಮೊಟ್ಟೆಗಳನ್ನು ಸುರಕ್ಷಿತವಾಗಿ ಸಮೀಪದ ಕಾಡಿಗೆ ಬಿಟ್ಟಿದ್ದಾರೆ.