ETV Bharat / state

ಶಿವಮೊಗ್ಗ ಸಿಮ್ಸ್ ಶವಾಗಾರಕ್ಕೆ ಧರ್ಮೇಗೌಡರ ಮೃತದೇಹ ರವಾನೆ - ಉಪಸಭಾಪತಿ ಧರ್ಮೇಗೌಡ

ಸಿಮ್ಸ್‌ನ ಇಬ್ಬರು ಹಾಗೂ ಓರ್ವ ಸುಬ್ಬಯ್ಯ ಮೆಡಿಕಲ್ ಕಾಲೇಜಿನ ವೈದ್ಯರು ಎಸ್‌.ಎಲ್‌.ಧರ್ಮೇಗೌಡರ ಮೃತದೇಹದ ಮರಣೋತ್ತರ ಪರೀಕ್ಷೆಯಲ್ಲಿ ಭಾಗಿಯಾಗಲಿದ್ದಾರೆ. ಶವ ಪರೀಕ್ಷೆಯ ನಂತರ ಮಧ್ಯಾಹ್ನ ಹುಟ್ಟೂರಿಗೆ ಮೃತದೇಹವನ್ನು ತೆಗೆದುಕೊಂಡು ಹೋಗಲಾಗುತ್ತದೆ.

Dispatch Corpse of Dharma gowda
ಶಿವಮೊಗ್ಗ ಸಿಮ್ಸ್ ಶವಗಾರಕ್ಕೆ ಧರ್ಮೇಗೌಡರ ಮೃತ ದೇಹ ರವಾನೆ
author img

By

Published : Dec 29, 2020, 10:29 AM IST

ಶಿವಮೊಗ್ಗ: ವಿಧಾನ ಪರಿಷತ್‌ ಉಪಸಭಾಪತಿ ಧರ್ಮೇಗೌಡರ ಮೃತದೇಹವನ್ನು ಶಿವಮೊಗ್ಗದ ಸಿಮ್ಸ್ ಶವಾಗಾರಕ್ಕೆ ತರಲಾಗಿದೆ.

ಸಂಬಂಧಿಕರು ಹಾಗು ಅಪ್ತ ಸಹಾಯಕ ನವೀನ್ ಅವರು ‌ಕಡೂರು ತಾಲೂಕು ಆಸ್ಪತ್ರೆಯ ಆಂಬ್ಯುಲೆನ್ಸ್‌ನಲ್ಲಿ ಶವವನ್ನು ತಂದರು. ಸಿಮ್ಸ್‌ನ ಇಬ್ಬರು ಹಾಗೂ ಓರ್ವ ಸುಬ್ಬಯ್ಯ ಮೆಡಿಕಲ್ ಕಾಲೇಜಿನ ವೈದ್ಯರು ಶವ ಪರೀಕ್ಷೆಯಲ್ಲಿ ಭಾಗಿಯಾಗಲಿದ್ದಾರೆ. ಶವ ಪರೀಕ್ಷೆಗೆ ಸುಮಾರು ಮೂರು ತಾಸು ಬೇಕಾಗುತ್ತದೆ ಎಂದು ಸಿಮ್ಸ್ ಮೂಲಗಳು ತಿಳಿಸಿವೆ.

ಶವಾಗಾರದ ಬಳಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಎಸ್ಪಿ ಕೆ.ಎಂ.ಶಾಂತರಾಜು ಆಗಮಿಸಿ ಬಂದೋಬಸ್ತ್ ಪರಿಶೀಲನೆ ನಡೆಸಿದರು. ಜೆಡಿಎಸ್ ಕಾರ್ಯಕರ್ತರು ಕೂಡಾ ಇಲ್ಲಿಗೆ ಆಗಮಿಸಿದರು. ಶವ ಪರೀಕ್ಷೆಯ ನಂತರ ಮಧ್ಯಾಹ್ನ ಹುಟ್ಟೂರಿಗೆ ಮೃತದೇಹವನ್ನು ತೆಗೆದುಕೊಂಡು ಹೋಗಲಾಗುತ್ತದೆ.

ಓದಿ: ಉಪಸಭಾಪತಿ ಎಸ್ ‌ಎಲ್‌ ಧರ್ಮೇಗೌಡರು ರಾಜಕೀಯದಲ್ಲಿ ನಡೆದು ಬಂದ ದಾರಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.