ಶಿವಮೊಗ್ಗ: ಕುವೆಂಪು ರಚನೆಯ ನಾಡಗೀತೆಗೆ 2017ರಲ್ಲಿ ಅಪಮಾನ ಮಾಡಲಾಗಿತ್ತು. ಇದರ ಕುರಿತು ಅಂದಿನ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಆದರೆ ನಮ್ಮ ಸರ್ಕಾರ ಅಪಮಾನ ಮಾಡಿದವನ ವಿರುದ್ದ ಸೈಬರ್ ಕ್ರೈಂ ಅಡಿ ಪೊಲೀಸರಿಗೆ ದೂರು ನೀಡಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಶಿವಮೊಗ್ಗದ ಒಕ್ಕಲಿಗರ ಯುವ ವೇದಿಕೆಯ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರಕವಿ ಕುವೆಂಪು ನಾಡಗೀತೆಗೆ ಅಪಮಾನ ಮಾಡಿದ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಸಲಾಗಿದೆ ಎಂದರು. ಬಳಿಕ ಬರಗೂರು ರಾಮಚಂದ್ರಪ್ಪ ಅವರ ಸಮಿತಿಯು ಕುವೆಂಪು ಅವರ ಪಾಠವನ್ನು ಕಡಿತಗೊಳಿಸಿತ್ತು. ಚಕ್ರತೀರ್ಥರ ಸಮಿತಿ ಮೂರು ಪಾಠವನ್ನು ಹೆಚ್ಚಿಸಿದೆ ಎಂದು ಇದೇ ವೇಳೆ ಸರ್ಕಾರ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ನಮ್ಮ ಅವಧಿಯಲ್ಲಿ ಕುವೆಂಪು ಅವರಿಗೆ ಅಪಮಾನ ಮಾಡುವ ಕೆಲಸ ಆಗಿಲ್ಲ. ನಾವು ಅವರ ಮಾಡಿರುವ ಕಾರ್ಯಗಳನ್ನು ಸಮಾಜಕ್ಕೆ ತಿಳಿಸುವ ಕೆಲಸ ಮಾಡಿದ್ದೇವೆ. ನಮ್ಮ ಸರ್ಕಾರ ಒಕ್ಕಲಿಗರಿಗೆ ಸಾಕಷ್ಟು ಸೌಲಭ್ಯ ಒದಗಿಸಿದ್ದು, ಒಕ್ಕಲಿಗ ಅಭಿವೃದ್ದಿ ನಿಗಮ ಸ್ಥಾಪಿಸಿದೆ. ಈ ವೇಳೆ ಎಂಎಲ್ಸಿ ಭೋಜೆಗೌಡರು ನಿಗಮಕ್ಕೆ ಇನ್ನೂ ನಿರ್ದೇಶಕರನ್ನು ನೇಮಕ ಮಾಡಿಲ್ಲ ಎನ್ನುತ್ತಿದ್ದಂತಯೇ ಸಚಿವರು ಅವಸರ ಮಾಡಬಾರದು ಸರ್ಕಾರ ಎಲ್ಲಾವನ್ನು ಮಾಡುತ್ತದೆ ಎಂದು ಸಮಾಧಾನ ಗೊಳಿಸಿದರು. ನಂತರ ಒಕ್ಕಲಿಗ ಸಮಾಜದ ಅನೇಕ ವಿದ್ಯಾರ್ಥಿಗಳಿಗೆ, ಸಾಧಕರಿಗೆ ಸನ್ಮಾನ ಮಾಡಲಾಯಿತು.
ಇದನ್ನೂ ಓದಿ: ಭಯೋತ್ಪಾದಕ ಚಟುವಟಿಕೆಯಲ್ಲಿ ಸಿಕ್ಕಿಬಿದ್ದ ವ್ಯಕ್ತಿಗಳಿಗೆ ಬಿಜೆಪಿ ನಂಟು: ಕೈ ನಾಯಕರಿಂದ ಫೋಟೋಗಳ ಬಿಡುಗಡೆ