ETV Bharat / state

ಫೆ. 2 ರಂದು ಶಿವಮೊಗ್ಗದಲ್ಲಿ ಗಾಳಿಪಟ ಹಬ್ಬ - ಶಿವಮೊಗ್ಗದಲ್ಲಿ ಗಾಳಿಪಟ ಹಬ್ಬ

ಫೆ. 2ರಂದು ಬೆಳಗ್ಗೆ 9 ಗಂಟೆಗೆ ನಗರದ ಸವಳಂಗ ರಸ್ತೆಯಲ್ಲಿರುವ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಗಾಳಿಪಟ ಹಬ್ಬವನ್ನು ಏರ್ಪಡಿಸಲಾಗಿದೆ ಎಂದು ಪೀಪಲ್ ಫಾರ್ ಎಜುಕೇಶನ್ ಸಂಸ್ಥೆಯ ನಿರ್ದೇಶಕ ಅಜಯ್ ತಿಳಿಸಿದರು.

press meet
ಸುದ್ದಿಗೋಷ್ಠಿ
author img

By

Published : Jan 31, 2020, 7:22 PM IST

ಶಿವಮೊಗ್ಗ: ಪೀಪಲ್ ಫಾರ್ ಎಜುಕೇಶನ್ ಶಿವಮೊಗ್ಗ ಕಿಡ್ ಥಾನ್ ಇವರುಗಳ ಸಹಯೋಗದಲ್ಲಿ ಫೆ. 2ರಂದು ಬೆಳಗ್ಗೆ 9 ಗಂಟೆಗೆ ನಗರದ ಸವಳಂಗ ರಸ್ತೆಯಲ್ಲಿರುವ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಗಾಳಿಪಟ ಹಬ್ಬವನ್ನು ಏರ್ಪಡಿಸಲಾಗಿದೆ ಎಂದು ಪೀಪಲ್ ಫಾರ್ ಎಜುಕೇಶನ್ ಸಂಸ್ಥೆಯ ನಿರ್ದೇಶಕ ಅಜಯ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೀಪಲ್ ಫಾರ್ ಎಜುಕೇಶನ್ ಸಂಸ್ಥೆಯ ನಿರ್ದೇಶಕ ಅಜಯ್

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ಮಕ್ಕಳಲ್ಲಿ ಗಾಳಿಪಟ ಸೇರಿದಂತೆ ಇತರ ಚಟುವಟಿಕೆಗಳ ಬಗ್ಗೆ ಆಸಕ್ತಿ ಕಡಿಮೆಯಾಗಿದೆ. ಕೇವಲ ಮೊಬೈಲ್ ಗಳಿಗೆ ಅಂಟಿಕೊಂಡಿದ್ದಾರೆ, ಇದನ್ನು ಮನಗಂಡು ಮಕ್ಕಳಲ್ಲಿ ಕ್ರಿಯಾಶೀಲತೆಯನ್ನು ಹೆಚ್ಚಿಸುವ ಸಲುವಾಗಿ ಈ ಗಾಳಿಪಟ ಹಬ್ಬವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

2 ರಿಂದ 16 ವರ್ಷದೊಳಗಿನ ಮಕ್ಕಳು ತಮ್ಮ ಪೋಷಕರೊಂದಿಗೆ ಈ ಹಬ್ಬದಲ್ಲಿ ಪಾಲ್ಗೊಳ್ಳಬಹುದಾಗಿದೆ. ಬೆಳಗ್ಗೆ 9.30 ರಿಂದ 12 ರವರಿಗೆ ನಡೆಯುವ ಈ ಹಬ್ಬದಲ್ಲಿ ಅಂತರ ರಾಷ್ಟ್ರೀಯ ಗಾಳಿಪಟು ಬೆಂಗಳೂರಿನ ವಿ.ಕೆ ರಾವ್ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿವಿಧ ಬಗೆಯ ಗಾಳಿಪಟಗಳನ್ನು ಹಾರಿಸುತ್ತಿದ್ದಾರೆ. ಅಲ್ಲದೆ ಗಾಳಿಪಟದ ಬಗ್ಗೆ ಮಾಹಿತಿಯನ್ನು ಸಹ ನೀಡಲಿದ್ದಾರೆ ಎಂದರು.

ಆವರಣದಲ್ಲಿ ಗಾಳಿಪಟ ಮಾರಾಟ ಸಹ ನಡೆಯಲಿದ್ದು, ಆಸಕ್ತರು ತಮಗಿಷ್ಟ ವಾದ ಗಾಳಿಪಟವನ್ನು ಖರೀದಿಸಿ ಹಾರಿಸಲು ಅವಕಾಶವಿದೆ. ಗಾಳಿಪಟವನ್ನು ತಯಾರಿಸುವ ವಿಧಾನ, ಗಾಳಿಯ ವೇಗ ಇರುವುದನ್ನು ಗಮನಿಸಿ ಅದಕ್ಕೆ ಸರಿಹೊಂದುವ ಹಾಗೆ ಹಾರಿಸುವ ಬಗ್ಗೆ ಸಹ ಉತ್ಸವದಲ್ಲಿ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.