ETV Bharat / state

ವಿದ್ಯಾರ್ಥಿನಿಯರಿಗೆ ಟಿಪ್ಪರ್​ ಡಿಕ್ಕಿ ಹೊಡೆದ ಪ್ರಕರಣ.. ಬಾಲಕಿ ಸಾವಿಗೆ ಕಾರಣನಾದ ಚಾಲಕ ನಿಗೂಢ ಮರಣ! - ಬಾಲಕಿಯ ಸಾವಿಗೆ ಕಾರಣನಾಗಿದ್ದ ಟಿಪ್ಪರ್​ ಲಾರಿ ಚಾಲಕ

ಶಿವಮೊಗ್ಗದಲ್ಲಿ ವಿದ್ಯಾರ್ಥಿನಿಯರ ಮೇಲೆ ಹರಿದ ಟಿಪ್ಪರ್​ ಪ್ರಕರಣ.. ಅಪಘಾತದಲ್ಲಿ ಬಾಲಕಿ ಸಾವು, ಇಬ್ಬರಿಗೆ ಗಾಯ.. ಆಸ್ಪತ್ರೆಯಲ್ಲಿ ಟಿಪ್ಪರ್​ ಚಾಲಕ ನಿಗೂಢ ಸಾವು..

Shivamogga tipper hit to student case  driver died mysteriously  girl died in tipper accident in Shivamogg  College girl died in accident  ವಿದ್ಯಾರ್ಥಿನಿಯರಿಗೆ ಟಿಪ್ಪರ್​ ಡಿಕ್ಕಿ ಹೊಡೆದ ಪ್ರಕರಣ  ಬಾಲಕಿ ಮೃತಕ್ಕೆ ಕಾರಣನಾದ ಚಾಲಕ ನಿಗೂಢ ಸಾವು  ವಿದ್ಯಾರ್ಥಿನಿಯರ ಮೇಲೆ ಹರಿದ ಟಿಪ್ಪರ್​ ಆಸ್ಪತ್ರೆಯಲ್ಲಿ ಟಿಪ್ಪರ್​ ಚಾಲಕ ನಿಗೂಢ ಸಾವು  ದ್ವಿತೀಯ ಪಿಯು ವಿದ್ಯಾರ್ಥಿನಿಯರಿಗೆ ಡಿಕ್ಕಿ  ಬಾಲಕಿಯ ಸಾವಿಗೆ ಕಾರಣನಾಗಿದ್ದ ಟಿಪ್ಪರ್​ ಲಾರಿ ಚಾಲಕ  ಟಿಪ್ಪರ್​ ಲಾರಿ ಚಾಲಕ ಆಸ್ಪತ್ರೆಯಲ್ಲಿ ಮೃತ
ಬಾಲಕಿ ಮೃತಕ್ಕೆ ಕಾರಣನಾದ ಚಾಲಕ ನಿಗೂಢ ಸಾವು!
author img

By

Published : Dec 31, 2022, 7:30 AM IST

Updated : Dec 31, 2022, 7:40 AM IST

ಶಿವಮೊಗ್ಗ: ಮೊನ್ನೆ ಸಾಗರದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿನಿಯರಿಗೆ ಡಿಕ್ಕಿ ಹೊಡೆದು ಬಾಲಕಿಯ ಸಾವಿಗೆ ಕಾರಣನಾಗಿದ್ದ ಟಿಪ್ಪರ್​ ಲಾರಿ ಚಾಲಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಡಿಸೆಂಬರ್ 28 ರಂದು‌ ಸಾಗರದ ಸಣ್ಣಮನೆ ಸೇತುವೆ ಬಳಿ ನಿಯಂತ್ರಣ ಕಳೆದುಕೊಂಡಿದ್ದ ಟಿಪ್ಪರ್‌ ಲಾರಿ ಹಾಸ್ಟೆಲ್​ನಿಂದ ಕಾಲೇಜಿಗೆ ನಡೆದು ಕೊಂಡು ಹೋಗುತ್ತಿದ್ದ ಮೂವರು ಪಿಯುಸಿ ವಿದ್ಯಾರ್ಥಿನಿಯರಿಗೆ ಡಿಕ್ಕಿ ಹೊಡೆದಿತ್ತು. ಸ್ಥಳೀಯರು ಮೂವರು ಬಾಲಕಿಯರನ್ನು ಆಸ್ಪತ್ರೆಗೆ ದಾಖಲಿಸಿದ್ದರು.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪ್ರತಿಮಾ ಎಂಬ ದ್ವಿತೀಯ ಪಿಯು ವಿದ್ಯಾರ್ಥಿನಿ ಸಾವನ್ನಪ್ಪಿದ್ದಳು. ಉಳಿದ ಇಬ್ಬರು ವಿದ್ಯಾರ್ಥಿನಿಯರು‌‌ ಸಣ್ಣಪುಟ್ಟ ಗಾಯಗಳಿಂದ ಬಚಾವ್ ಆಗಿದ್ದಾರೆ. ಲಾರಿ ವಿದ್ಯಾರ್ಥಿನಿಯರಿಗೆ ಡಿಕ್ಕಿ ಹೊಡೆಯುತ್ತಿದ್ದಂತೆಯೇ ಸ್ಥಳೀಯರು ಚಾಲಕ ಕೃಷ್ಣಚಾರಿಗೆ ಥಳಿಸಿದ್ದರು ಎನ್ನಲಾಗಿದೆ.

ಚಾಲಕನನ್ನು ಸಹ ಸಾಗರದ ಉಪವಿಬಾಗೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಚಿಕಿತ್ಸೆ ಫಲಿಸದೇ ನಿನ್ನೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಆದರೆ, ಕೃಷ್ಣಚಾರಿ ಸಾವನ್ನಪ್ಪಿರುವುದನ್ನು ಖಚಿತ ಪಡಿಸಿದ ಪೊಲೀಸರು ಸಾವಿಗೆ ಕಾರಣ ಮಾತ್ರ ಏನೆಂಬುದನ್ನು ಖಚಿತಪಡಿಸಿಲ್ಲ.

ಏನಿದು ಪ್ರಕರಣ: ಸಾಗರದ ಸಣ್ಣಮನೆ ಬಳಿ ಕಾಲೇಜು ವಿದ್ಯಾರ್ಥಿನಿಯರ ಮೇಲೆ ಟಿಪ್ಪರ್ ಲಾರಿ ಹರಿದಿತ್ತು. ಪರಿಣಾಮ ಇಬ್ಬರು ವಿದ್ಯಾರ್ಥಿನಿಯರು ಗಾಯಗೊಂಡರೆ, ದ್ವಿತೀಯ ಪಿಯುಸಿ ಓದುತ್ತಿದ್ದ ಪ್ರತಿಮಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಳು.

ಪ್ರತಿಮಾ ಶಿಕಾರಿಪುರ ತಾಲೂಕು ಚಿಕ್ಕಕಲವತ್ತಿ ಗ್ರಾಮದ ರೈತಾಪಿ ಕುಟುಂಬಕ್ಕೆ ಸೇರಿದವಳು. ವಿದ್ಯಾರ್ಥಿನಿ ಸಾವನಿಂದ ಕಾಲೇಜಿಗೆ ಅಂದು ರಜೆ ಘೋಷಣೆ ಮಾಡಲಾಗಿತ್ತು. ಮೂವರು ವಿದ್ಯಾರ್ಥಿನಿಯರು ಸಾಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದರು. ಹಾಸ್ಟೆಲ್​ನಿಂದ ಕಾಲೇಜಿಗೆ ತೆರಳುವ ವೇಳೆ ಈ ದುರ್ಘಟನೆ ನಡೆದಿತ್ತು. ಇನ್ನು ಪ್ರತಿಮಾ ಜತೆಗೆ ಇದ್ದ ಅಂಕಿತಾ ಮತ್ತು ಐಶ್ವರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಓದಿ: ಕಾಲೇಜು‌ ವಿದ್ಯಾರ್ಥಿನಿಯರ ಮೇಲೆ ಹರಿದ ಟಿಪ್ಪರ್: ಒಂದು ಸಾವು, ಇಬ್ಬರಿಗೆ ಗಾಯ

Last Updated : Dec 31, 2022, 7:40 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.