ಶಿವಮೊಗ್ಗ: ಸಾವರ್ಕರ್ ಭಾವಚಿತ್ರ ವಿವಾದದಿಂದ ಉಂಟಾದ ಗಲಭೆಯಿಂದಾಗಿ ಬೂದಿ ಮುಚ್ಚಿದ ಕೆಂಡದಂತಾಗಿದ್ದ ಶಿವಮೊಗ್ಗ ನಗರ ಇದೀಗ ಸಹಜ ಸ್ಥಿತಿಗೆ ಮರಳುತ್ತಿದೆ. ಸ್ವಾತಂತ್ರ್ಯ ದಿನ ನಗರದ ಎಎ ಸರ್ಕಲ್ನಲ್ಲಿ ಸಾವರ್ಕರ್ ಭಾವಚಿತ್ರ ಹಾಕಿದ ಕಾರಣಕ್ಕೆ ಎರಡು ಕೋಮಿನ ನಡುವೆ ಗಲಾಟೆ ನಡೆದು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು. ಓರ್ವನ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದರು. ಶಾಂತಿ ಸುವ್ಯವಸ್ಥೆ ಕಾಪಾಡಲು ಶಿವಮೊಗ್ಗ ನಗರ ಹಾಗೂ ಭದ್ರಾವತಿಯಲ್ಲಿ ಆ. 18 ರ ರಾತ್ರಿ 10 ಗಂಟೆಯವರೆಗೆ ಸೆಕ್ಷನ್ 144 ಜಾರಿ ಮಾಡಲಾಗಿದೆ. ಇದರಿಂದಾಗಿ ಅಂಗಡಿಗಳು ಬಂದ್ ಆಗಿದ್ದವು.
ನಿನ್ನೆಯಿಂದ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ. ಇಂದು ಬೆಳಗ್ಗೆಯಿಂದ ಶಿವಮೊಗ್ಗ ನಗರ ಸಹಜ ಸ್ಥಿತಿಯತ್ತ ಮರಳುತ್ತಿದೆ. ಬಸ್ ಸಂಚಾರ, ಶಾಲಾ-ಕಾಲೇಜುಗಳು ಪುನಾರಂಭಗೊಂಡಿವೆ. ಅಂಗಡಿ- ಮುಂಗಟ್ಟುಗಳು ಸಹ ತೆರೆದಿವೆ. ಇಂದೂ ಸಹ ಬೈಕ್ ಹಿಂಬದಿಯ ಸವಾರರಿಗೆ ನಿರ್ಬಂಧ ಹೇರಲಾಗಿದೆ. ನಾಲ್ಕು ವರ್ಷ ಮೇಲ್ಪಟ್ಟ ಹಾಗೂ ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ನಗರದಾದ್ಯಂತ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಸಂಸದೀಯ ಮಂಡಳಿಯಲ್ಲಿ ಬಿಎಸ್ವೈಗೆ ಸ್ಥಾನ: ಪಕ್ಷ, ಸರ್ಕಾರದ ಹುಮ್ಮಸ್ಸು ಇಮ್ಮಡಿ ಎಂದ ಬೊಮ್ಮಾಯಿ